ಈ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳಾದ ನಂದಿಧ್ವಜ, ನಾಸಿಕ್ ಡೋಲ್, ವೀರಗಾಸೆ, ಡಂಕವಾದ್ಯ, ತಮಟೆವಾದ್ಯ ಪ್ರದರ್ಶನವಿದೆ. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ವೃತ್ತದಲ್ಲಿ ಹೆಣ್ಣುಮಕ್ಕಳಿಂದ ‘ಮಾರುತಿಗೆ ಆರತಿ’ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಲ್ಲಿ ಆಕರ್ಷಕ ಸಿಡಿಮದ್ದಿನ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಟಿ.ಬಿ. ಶೇಖರ್ ಹೇಳಿದರು.
ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಬಿಜಿಎಸ್ ವೃತ್ತದ ನಾಗರಕಟ್ಟೆ ಗಣಪತಿ ದೇವಸ್ಥಾನ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾ ಗಣಪತಿಯ 9ನೇ ವರ್ಷದ ಗಣಪತಿಯ ವಿಸರ್ಜನಾ ಮಹೋತ್ಸವವನ್ನು ಈ ತಿಂಗಳ 3ರಂದು ಶನಿವಾರ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಟಿ.ಬಿ. ಶೇಖರ್ ಹೇಳಿದರು.ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಮಹಾ ಗಣಪತಿ ವಿಸರ್ಜನಾ ಮಹೋತ್ಸವದಲ್ಲಿ ಅಂದು ಬೆಳಗ್ಗೆ 11 ಗಂಟೆಗೆ ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಅಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸೇರಿ 20ಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸಿ ಪೂಜೆ ಸಲ್ಲಿಸುವರು. ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಮಾಜಿ ಸಚಿವರಾದ ಕೆ.ಎನ್. ರಾಜಣ್ಣ, ಬಸವನಗೌಡ ಪಾಟೀಲ್ ಯತ್ನಾಳ್, ಕೆ.ಎಸ್. ಈಶ್ವರಪ್ಪ, ಸೊಗಡು ಶಿವಣ್ಣ, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಅನೇಕ ಗಣ್ಯರು, ಧಾರ್ಮಿಕ ಮುಖಂಡರು ಭಾಗವಹಿಸುವರು ಎಂದು ತಿಳಿಸಿದರು.ಶೋಭಾಯಾತ್ರೆ ಬಿಜಿಎಸ್ ವೃತ್ತದಿಂದ ಆರಂಭಗೊಂಡು ಲಕ್ಕಪ್ಪ ವೃತ್ತ, ಜೆ.ಸಿ.ರಸ್ತೆ. ಮಂಡಿಪೇಟೆ ವೃತ್ತ, ಸ್ವತಂತ್ರ ಚೌಕ, ಅಶೋಕ ರಸ್ತೆ, ಬಿ.ಜಿ.ಎಸ್ ವೃತ್ತ, ಎಂ ಜಿ ರಸ್ತೆ, ಜೈನ ಟೆಂಪಲ್ ರಸ್ತೆ, ರಾಮಪ್ಪ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ, ಕೋಟೆ ಆಂಜನೇಯ ವೃತ್ತ, ಗಾರ್ಡನ್ ರಸ್ತೆ ಮುಖೇನ ಸಾಗಿ ಕೆ.ಎನ್.ಎಸ್. ಕಲ್ಯಾಣಿಯಲ್ಲಿ ಗಣೇಶ ಮೂರ್ತಿಯ ವಿಸರ್ಜನಾ ಕಾರ್ಯ ನೆರವೇರಲಿದೆ ಎಂದರು.
ಈ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳಾದ ನಂದಿಧ್ವಜ, ನಾಸಿಕ್ ಡೋಲ್, ವೀರಗಾಸೆ, ಡಂಕವಾದ್ಯ, ತಮಟೆವಾದ್ಯ ಪ್ರದರ್ಶನವಿದೆ. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ವೃತ್ತದಲ್ಲಿ ಹೆಣ್ಣುಮಕ್ಕಳಿಂದ ‘ಮಾರುತಿಗೆ ಆರತಿ’ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಲ್ಲಿ ಆಕರ್ಷಕ ಸಿಡಿಮದ್ದಿನ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಟಿ.ಬಿ. ಶೇಖರ್ ಹೇಳಿದರು.ಈ ಬಾರಿಯ ಪ್ರಮುಖ ಆಕರ್ಷಣೆ ಎಂದರೆ ಮಂಗಳೂರು ಭಾಗದ ಹುಲಿ ಕುಣಿತ, ಮಕ್ಕಳ ಭಜನಾ ತಂಡ, ವಯಲಿನ್ ಚಂಡೆ, ತುಮಕೂರಿನ ಮುತ್ತುಮಾರಿಯಮ್ಮ ನಗರದ ತಮಟೆ ವಾದ್ಯ, ಭೂಮಿ ಕಲಾತಂಡದ ನಾಸಿಕ್ ಡೋಲ್ ಹಾಗೂ ಇತರೆ ಜಾನಪದ ಕಲಾ ತಂಡಗಳೊಂದಿಗೆ ನಡೆಸಲಾಗುವುದು ಎಂದು ತಿಳಿಸಿದರು.
ಸ್ವಾಗತ ಸಮಿತಿ ಉಪಾಧ್ಯಕ್ಷ ಮಂಜು ಭಾರ್ಗವ್, ಖಜಾಂಚಿ ಟಿ.ವೈ. ಯಶಸ್, ಮುಖಂಡರಾದ ಮೋಹನ್‌ಕುಮಾರ್ ಪಟೇಲ್, ಸಿ.ಆರ್. ಮೋಹನ್‌ಕುಮಾರ್, ಧನಿಯಾಕುಮಾರ್, ಗೋಕುಲ ಮಂಜುನಾಥ್, ಶೀತಕಲ್ ಕೃಷ್ಣಯ್ಯ, ಡಿ.ಭಾನುಪ್ರಕಾಶ್, ರವಿಕುಮಾರ್, ಪರಮೇಶ್, ಬಸವಕುಮಾರ್, ಮಂಜೇಶ್, ಮಹೇಂದ್ರಕುಮಾರ್, ವಸಂತಕುಮಾರ್, ದಿವಾಕರ್ ನಾಯ್ಡು, ಮಧು, ಸೌಮ್ಯ ಮೊದಲಾದವರು ಹಾಜರಿದ್ದರು.