ಸಾರಾಂಶ
ಮಡಿಕೇರಿಯ ಹಿಂದೂ ಮಲೆಯಾಳಿ ಸಂಘದ ಮಹಿಳಾ ಘಟಕದ ಅಧ್ಯಕ್ಷರಾಗಿ ಲತಾ ರಾಜನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಡಿಕೇರಿ: ಮಡಿಕೇರಿಯ ಹಿಂದೂ ಮಲಯಾಳಿ ಸಂಘದ ಮಹಿಳಾ ಘಟಕದ ಅಧ್ಯಕ್ಷರಾಗಿ ಲತಾ ರಾಜನ್ ಅವರು ಅವಿರೋಧವಾಗಿ ಪುನರ್ ಆಯ್ಕೆಯಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಅಂಜಲಿ ಅಶೋಕ್ ನೇಮಕಗೊಂಡಿದ್ದಾರೆ.
ಸಂಘದ ಜಿಲ್ಲಾ ಕಚೇರಿಯಲ್ಲಿ ಅಧ್ಯಕ್ಷ ಕೆ. ವಿ. ಧರ್ಮೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಕಾರ್ಯಕಾರಿಣಿ ಸದಸ್ಯರ ಆಯ್ಕೆಯ ಜವಾಬ್ದಾರಿಯನ್ನು ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ವಹಿಸಲಾಯಿತು. ‘ಓಣಾಘೋಷಂ’ ಪ್ರಯುಕ್ತ ನಡೆಸಲಾಗುವ ಕ್ರೀಡಾ ಚಟುವಟಿಕೆಗಳ ಉಸ್ತುವಾರಿಯನ್ನು ಮಹಿಳಾ ಸದಸ್ಯರಿಗೆ ನೀಡಲಾಯಿತು.
ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಸ್.ದಿನೇಶ್, ಸಹ ಕಾರ್ಯದರ್ಶಿ ಎಚ್.ಪಿ.ಅಶೋಕ್, ಉಪಾಧ್ಯಕ್ಷರಾದ ಪಿ.ಟಿ.ಉತ್ತಮ್, ವಿಜಯಕುಮಾರ್, ಖಜಾಂಚಿ ಎಂ.ಪಿ.ರವಿ, ಸಹ ಖಜಾಂಚಿ ಪಿ.ವಿ.ಸುಬ್ರಮಣಿ, ಸಂಘಟನಾ ಕಾರ್ಯದರ್ಶಿ ಟಿ.ಆರ್.ಪ್ರಮೋದ್, ಯೂತ್ ವಿಂಗ್ ಅಧ್ಯಕ್ಷ ಆರ್.ಅರವಿಂದ್, ಪ್ರಚಾರ ಸಮಿತಿ ರವಿ ಅಪ್ಪುಕುಟ್ಟನ್ ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಒ.ಎನ್.ಬಾಬು, ಮನು, ಸಿ.ಕೆ.ಪ್ರಭಾಕರ್, ಟಿ.ಬಿ.ಪ್ರಭಾಕರ್, ಎನ್.ಸಿ.ಸುನಿಲ್ ಉಪಸ್ಥಿತರಿದ್ದರು. ರಕ್ಷಾ ಬಂಧನದ ಪ್ರಯುಕ್ತ ಪರಸ್ಪರ ರಾಕಿ ಕಟ್ಟಿ ಸಿಹಿ ಹಂಚಿ ಸಭೆ ಸಂಭ್ರಮಿಸಿತು.