ಶಾಂತಿಯುತ ಮೊಹರಂ ಆಚರಣೆಗೆ ಹಿಂದೂ-ಮುಸ್ಲಿಂ ಬಾಂಧವರು ಸಹಕರಿಸಿ

| Published : Jul 10 2024, 12:35 AM IST

ಶಾಂತಿಯುತ ಮೊಹರಂ ಆಚರಣೆಗೆ ಹಿಂದೂ-ಮುಸ್ಲಿಂ ಬಾಂಧವರು ಸಹಕರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಮೊಹರಂ ನಿಮಿತ್ತ ಹಾನಗಲ್ಲಿನಲ್ಲಿ ನಡೆದ ಶಾಂತಿ ಸಭೆಯಲ್ಲಿ ಶಿಗ್ಗಾಂವಿಯ ಡಿವೈಎಸ್‌ಪಿ ಜಿ. ಮಂಜುನಾಥ ಶಾಂತಿ ಸೌಹಾರ್ದದಿಂದ ಹಬ್ಬ ಆಚರಿಸಲು ಹಾನಗಲ್ಲ ಜನತೆಗೆ ಕರೆ ನೀಡಿದರು.

ಹಾನಗಲ್ಲ: ಮೊಹರಂ ನಿಮಿತ್ತ ಹಾನಗಲ್ಲಿನಲ್ಲಿ ನಡೆದ ಶಾಂತಿ ಸಭೆಯಲ್ಲಿ ಶಿಗ್ಗಾಂವಿಯ ಡಿವೈಎಸ್‌ಪಿ ಜಿ. ಮಂಜುನಾಥ ಶಾಂತಿ ಸೌಹಾರ್ದದಿಂದ ಹಬ್ಬ ಆಚರಿಸಲು ಹಾನಗಲ್ಲ ಜನತೆಗೆ ಕರೆ ನೀಡಿದರು.

ಇಲ್ಲಿನ ತಾಲೂಕು ತಹಸೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಪೊಲೀಸ್ ಸಾರ್ವಜನಿಕರ ರಕ್ಷಣೆಗಾಗಿಯೇ ಇದೆ. ಆದರೆ ಎಲ್ಲವೂ ಪೊಲೀಸರಿಂದಲೇ ಸಾಧ್ಯವಿಲ್ಲ. ಸಾರ್ವಜನಿಕರ ಸೌಹಾರ್ದಯುತ ಸಹಕಾರ ಅತ್ಯಂತ ಮುಖ್ಯ. ಮುಸ್ಲಿಂ ಬಾಂಧವರು ಮೊಹರಂ ದಿನ ಮೆರವಣಿಗೆ ನಡೆಯುವ ರಸ್ತೆಗಳ ಬಗೆಗೆ ಮೊದಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಹಿಂದು-ಮುಸ್ಲಿಂ ಬಾಂಧವರು ಶಾಂತಿಯುತವಾಗಿ ಹಬ್ಬ ಆಚರಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.ಹಾನಗಲ್ಲ ಸಿಪಿಐ ಆರ್.ವೀರೇಶ ಮಾತನಾಡಿ, ಹಿಂದಿನ ವರ್ಷಗಳಲ್ಲಿ ಮರವಣಿಗೆ ನಡೆಸಿದ ರಸ್ತೆಗಳಲ್ಲಿಯೇ ಈ ವರ್ಷವೂ ನಡೆಸುವುದಾದರೆ ಅದನ್ನು ಮೊದಲೇ ಮಾಹಿತಿ ನೀಡಬೇಕು. ಮಾರ್ಗ ಬದಲಾವಣೆ ಇದ್ದರೂ ಅದಕ್ಕಾಗಿ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಬೇಕು. ಶಾಂತಿ ಸುವ್ಯವಸ್ಥೆಗಾಗಿ ಪೊಲೀಸ್‌ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತದೆ. ಹಬ್ಬದ ಆಚರಣೆಗೆ ಎಲ್ಲರ ಸಹಕಾರ ಇರಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರಾದ ಗುರುರಾಜ ನಿಂಗೋಜಿ ಹಾಗೂ ಫೈರೋಜ ಶಿರಬಡಗಿ ಹಾನಗಲ್ಲಿನಲ್ಲಿ ಹಿಂದು ಮುಸ್ಲಿಂ ಹಬ್ಬಗಳನ್ನು ಅತ್ಯಂತ ಸೌಹಾರ್ದಯುತವಾಗಿ ಆಚರಿಸಲಾಗುತ್ತದೆ. ಆದರೆ ಕೆಲವು ಕಿಡಿಗೇಡಿಗಳು ಮಾಡುವ ಅವಘಡಗಳಿಂದ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ. ಅಂತಹವರಿಂದಲೇ ಇಡೀ ಹಬ್ಬಗಳು ಅರ್ಥ ಕಳೆದುಕೊಳ್ಳುತ್ತವೆ. ಪೊಲೀಸ್ ಅಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು. ಹಿಂದು ಮುಸ್ಲಿಂ ಎಂಬ ಭೇದಕ್ಕೆ ಇಲ್ಲಿ ಅವಕಾಶವಿಲ್ಲ. ಹಬ್ಬಗಳು ನಮ್ಮ ನಮ್ಮ ಧಾರ್ಮಿಕ ವಿಚಾರಗಳಾಗಿವೆ. ಹಾನಗಲ್ಲ ಶಾಂತಿಯಿಂದ ಹಬ್ಬ ಆಚರಣೆಗೆ ಹೆಸರಾಗಿದೆ. ಅದನ್ನು ಉಳಿಸಿಕೊಳ್ಳಬೇಕು ಎಂದರು.ಹಾನಗಲ್ಲ ಪಿಎಸ್‌ಐ ಕೆ.ಸಿ. ಚಲುವಯ್ಯ, ನಗರದ ಮುಖಂಡರಾದ ಸಿಕಂದರ ವಾಲಿಕಾರ, ಜಾಫರ್ ಬಾಳೂರ, ಬಾಬಾಜಾನ ಕೊಂಡವಾಡಿ, ನಿಸಾರ್ ಗೌಂಡಿ, ನಿಸಾರ ಪಾನವಾಲೆ, ಇರಫಾನ್ ಇನಾಂದಾರ, ಇರಫಾನ ಮಿಠಾಯಿಗಾರ, ಖುರ್ಷಿದ ಹುಲ್ಲತ್ತಿ, ಫೈರೋಜ ಜಾಗೀರದಾರ, ಅಬುತಾಯಿರ್ ರಾವುತರ, ನಾಸಿರ ಖಾಜಿ, ಖಾಲಿದ ಶೇಷಗಿರಿ, ಪ್ರಶಾಂತ ಗೊಂದಿ, ಪ್ರವೀಣ ಸುಲಾಖೆ, ಎಸ್.ಎಚ್. ನಾಗಣ್ಣನವರ, ಪರಶುರಾಮ ಖಂಡೂನವರ, ಹನುಮಂತ ಮೊದಲಾದವರಿದ್ದರು.