ಸಾರಾಂಶ
ಹೊನ್ನಾಳಿ ಪಟ್ಟಣದ ಶಿವಾ ಬ್ಯಾಂಕ್‍ಗೆ 25 ವರ್ಷ ಸಂದ ಹಿನ್ನೆಲೆ ಸಂಸ್ಥೆಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಆ.3ರಂದು ಆಚರಿಸಲು ತೀರ್ಮಾನಿಸಲಾಗಿದೆ.
- 25 ವರ್ಷ ಹಿನ್ನೆಲೆ ಕಾರ್ಯಕ್ರಮ ಆಯೋಜನೆಗೆ ಸಭೆ ನಿರ್ಧಾರ - - -
ಹೊನ್ನಾಳಿ: ಪಟ್ಟಣದ ಶಿವಾ ಬ್ಯಾಂಕ್‍ಗೆ 25 ವರ್ಷ ಸಂದ ಹಿನ್ನೆಲೆ ಸಂಸ್ಥೆಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಆ.3ರಂದು ಆಚರಿಸಲು ತೀರ್ಮಾನಿಸಲಾಗಿದೆ.ತಾಲೂಕಿನ ಗೊಲ್ಲರಹಳ್ಳಿ ತರಳಬಾಳು ಸಮುದಾಯ ಭವನದಲ್ಲಿ ಬ್ಯಾಂಕ್‍ನ ಆಡಳಿತ ಮಂಡಳಿ ಹಾಗೂ ಹೊನ್ನಾಳಿ ಮತ್ತು ನ್ಯಾಮತಿ ಸಾಧು ವೀರಶೈವ ಸಮಾಜದಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಆ.3ರಂದು ತರಳಬಾಳು ಸಮುದಾಯ ಭವನದಲ್ಲಿ ಬೆಳ್ಳಿ ಮಹೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ಈ ಭವ್ಯ ಕಾರ್ಯಕ್ರಮ ಸಿರಿಗೆರೆ ಬೃಹನ್ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ವಿವಿಧ ಗಣ್ಯರನ್ನು ಆಹ್ವಾನಿಸುವ ಬಗ್ಗೆ ತೀರ್ಮಾನಿಸಲಾಯಿತು.ಶಿವಾ ಬ್ಯಾಂಕ್ ಅಧ್ಯಕ್ಷ ಸತೀಶ್, ಉಪಾಧ್ಯಕ್ಷೆ ಯಶೋಧಮ್ಮ, ನಿರ್ದೇಶಕರಾದ ಶಂಕರಗೌಡ, ಶಿವಕುಮಾರ್, ಚಂದ್ರಪ್ಪ, ಕೃಷ್ಣ ನಾಯ್ಕ್, ಕೆಂಚಪ್ಪ, ಚನ್ನವೀರಪ್ಪ, ವಕೀಲ ಚೇತನ್, ಬಸವರಾಜಪ್ಪ, ಕರಿಬಸಪ್ಪ, ಸಾಧು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಗದ್ದಿಗೇಶ್, ನ್ಯಾಮತಿ ತಾಲೂಕು ಅಧ್ಯಕ್ಷ ಕೋಡಿಕೊಪ್ಪ ಶಿವಣ್ಣ, ಅರಬಗಟ್ಟೆ ರಮೇಶ್, ಅರಕೆರೆ ಹನುಮಂತಪ್ಪ, ಕೂಲಂಬಿ ಸೋಮಶೇಖರ್, ಬೆನಕಪ್ಪಗೌಡ, ಕೆ.ಜಿ.ಸೋಮಶೇಖರಪ್ಪಗೌಡ, ದಿಡಗೂರು ಪ್ರಕಾಶ್, ಬ್ಯಾಂಕ್ ಸಿಇಒ ರುದ್ರೇಶ್ ಹಾಗೂ ಶಿವಾ ಬ್ಯಾಂಕ್ ಆಡಳಿತ ಮಂಡಳಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮಾಜಿ ನಿರ್ದೇಶಕರು, ಮುಖಂಡರು ಉಪಸ್ಥಿತರಿದ್ದರು.
- - - -9ಎಚ್.ಎಲ್.ಐ1: