ಬಾಗಲಕೋಟೆಯಲ್ಲಿ ಹಿಂದೂ ಶಕ್ತಿ ಒಂದಾಗಿದೆ. ಚುನಾವಣೆಯಲ್ಲಿ ಧರ್ಮದ ಗೆಲುವು ನಿಶ್ಚಿತ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು. ಬಿಜೆಪಿ ಕಾರ್ಯಾಲಯದಲ್ಲಿ ಚುನಾವಣೆ ಸಭೆಯಲ್ಲಿ ಬಿಜೆಪಿ ಸೇರ್ಪಡೆಗೊಂಡ ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ ಹಾಗೂ ಅರುಣ ಲೋಕಾಪುರ ಅವರಿಗೆ ಅಭಿನಂದಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆಯಲ್ಲಿ ಹಿಂದೂ ಶಕ್ತಿ ಒಂದಾಗಿದೆ. ಚುನಾವಣೆಯಲ್ಲಿ ಧರ್ಮದ ಗೆಲುವು ನಿಶ್ಚಿತ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.ಬಿಜೆಪಿ ಕಾರ್ಯಾಲಯದಲ್ಲಿ ಚುನಾವಣೆ ಸಭೆಯಲ್ಲಿ ಬಿಜೆಪಿ ಸೇರ್ಪಡೆಗೊಂಡ ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ ಹಾಗೂ ಅರುಣ ಲೋಕಾಪುರ ಅವರಿಗೆ ಅಭಿನಂದಿಸಿ ಮಾತನಾಡಿದರು.
ವೀರಣ್ಣ ಚರಂತಿಮಠ ಶಾಸಕರಾಗಿದ್ದ ಅವಧಿಯಲ್ಲಿ ಬಾಗಲಕೋಟೆ ಅಭಿವೃದ್ಧಿ ಹೊಂದಿದ್ದು, ನಗರ ಸ್ವಚ್ಛತೆ, ಸುಂದರ ನಗರವನ್ನಾಗಿ ಮಾಡಿ ಒಂದು ಮಾದರಿ ಕ್ಷೇತ್ರವನ್ನಾಗಿಸಿದವರು ಚರಂತಿಮಠರು. ಮುಳುಗಡೆ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿದವರು. ಅವರ ಕಾಲದಲ್ಲಿಯೇ ಸರಕಾರಿ ಪ್ರಥಮ ದರ್ಜೆ ಡಿಗ್ರಿ ಕಾಲೇಜಿಗೆ ಅನುಮತಿ ತಂದು ಪ್ರಾರಂಭಿಸಿದರು ಅದು ಈಗ ಮಾದರಿಯಾಗಿದೆ, 145 ದೇವಸ್ಥಾನಗಳ ಜೀರ್ಣೋದ್ಧಾರ ಕೆಲಸ ಮಾಡಿದ್ದಾರೆ. 3744 ಮನೆಗಳ ನಿರ್ಮಾಣ ಮಾಡುವ ಮೂಲಕ ವಸತಿ ಸೌಲಭ್ಯ ನೀಡಿದ್ದಾರೆ. ಸಾವಿರಾರು ಕೋಟಿ ಅನುದಾನ ತಂದು ಕೆಲಸವನ್ನು ಕಾರ್ಯಗತಗೊಳಿಸಿದ್ದಾರೆ. ಅಭಿವೃದ್ಧಿಯೊಂದೇ ಅವರ ಮಂತ್ರವಾಗಿದೆ ಎಂದು ಹೇಳಿದರು.ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ ಮಾತನಾಡಿ, ಬಾಗಲಕೋಟೆ ಇದು ಹಿಂದೂತ್ವದ ನೆಲ, ಪ್ರಧಾನ ನರೇಂದ ಮೋದಿಯವರ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಹೊಂದುತ್ತಿದೆ, ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠರು ಶಾಸಕರಾಗಿದ್ದ ಅವಧಿಯಲ್ಲಿ, ನಾನು ನಗರಸಭೆ ಅಧ್ಯಕ್ಷನಾಗಿದ್ದ ಸಮಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಬಾಗಲಕೋಟೆಗೆ ಅಭಿವೃದ್ಧಿ ಪರ ಕೆಲಸ ಮಾಡುವ ಶಾಸಕರ ಅವಶ್ಯಕತೆ ಇದೆ. ವೀರಣ್ಣ ಚರಂತಿಮಠರು ಸಮರ್ಥರಾಗಿದ್ದಾರೆ, ಮೊತ್ತಮ್ಮೆ ಬಿಜೆಪಿ ಗೆಲ್ಲಿಸೋಣ ಎಂದು ಕರೆ ನೀಡಿದರು.
ಸಭೆಯಲ್ಲಿ ಚುನಾವಣಾ ಉಸ್ತುವಾರಿ ಅರುಣ ಶಹಾಪುರ, ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಅರುಣ ಲೋಕಾಪುರ, ಲಕ್ಷ್ಮೀ ನಾರಾಯಣ ಕಾಸಟ್, ವಿಜಯ ಅಂಗಡಿ, ಗುರುಬಸವ ಸೂಳಿಬಾವಿ, ಮಹಾಂತೇಶ ಶೆಟ್ಟರ ಸೇರಿದಂತೆ ಅನೇಕರು ಇದ್ದರು.