ಬಾಳೆಹೊನ್ನೂರುಎನ್.ಆರ್.ಪುರ ತಾಲೂಕು ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿಯಿಂದ ಜ.೩೦ರಂದು ಬಾಳೆಹೊನ್ನೂರು ಪಟ್ಟಣದಲ್ಲಿ ನಡೆಯಲಿರುವ ಹಿಂದೂ ಸಮಾಜೋತ್ಸವದ ನಗರ ಶೃಂಗಾರ ಕಾರ್ಯ ಕ್ರಮಕ್ಕೆ ಮಾರ್ಕಾಂಡೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕೇಸರಿ ಧ್ವಜ ನೆಡುವ ಮೂಲಕ ಚಾಲನೆ ನೀಡಲಾಯಿತು.

ಚಾಲನೆ ನೀಡಿದ ಟಿ.ಎಂ.ಉಮೇಶ್ ಕಲ್ಮಕ್ಕಿ। ಮಾರ್ಕಾಂಡೇಶ್ವರ ದೇಗುಲ ಮುಂಭಾಗ ಕೇಸರಿ ಧ್ವಜ ಸ್ಥಾಪನೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಎನ್.ಆರ್.ಪುರ ತಾಲೂಕು ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿಯಿಂದ ಜ.೩೦ರಂದು ಬಾಳೆಹೊನ್ನೂರು ಪಟ್ಟಣದಲ್ಲಿ ನಡೆಯಲಿರುವ ಹಿಂದೂ ಸಮಾಜೋತ್ಸವದ ನಗರ ಶೃಂಗಾರ ಕಾರ್ಯ ಕ್ರಮಕ್ಕೆ ಮಾರ್ಕಾಂಡೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕೇಸರಿ ಧ್ವಜ ನೆಡುವ ಮೂಲಕ ಚಾಲನೆ ನೀಡಲಾಯಿತು.ಕಾಫಿ ಬೆಳೆಗಾರ ಟಿ.ಎಂ.ಉಮೇಶ್ ಕಲ್ಮಕ್ಕಿ ನಗರ ಶೃಂಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಜ.30ರಂದು ಪಟ್ಟಣದಲ್ಲಿ ಅದ್ಧೂರಿಯಾಗಿ ಹಿಂದೂ ಸಮಾಜೋತ್ಸವ ನಡೆಯಲಿದ್ದು, ಈಗಾಗಲೇ ಹಲವು ಪೂರ್ವಸಿದ್ಧತಾ ಸಭೆಗಳನ್ನು ಹಿಂದೂ ಬಾಂಧವರು ನಡೆಸಿದ್ದಾರೆ.ಕಾರ್ಯಕ್ರಮ ಐತಿಹಾಸಿಕ, ಸ್ಮರಣೀಯವಾಗಿರಬೇಕು ಎಂಬ ಉದ್ದೇಶದಿಂದ ಹಲವು ಸಿದ್ಧತೆಗಳನ್ನು ಆಯೋಜನಾ ಸಮಿತಿ ಕೈಗೊಂಡಿದ್ದು, ಬಿ.ಕಣಬೂರು ಹಾಗೂ ಬನ್ನೂರು ಗ್ರಾಪಂ ವ್ಯಾಪ್ತಿಯ ಪ್ರತೀ ಹಿಂದೂ ಮನೆಗಳಿಂದಲೂ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕಿದೆ. ಮಾತೆಯರು, ಯುವಜನರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅರ್ಥಪೂರ್ಣಗೊಳಿಸಬೇಕು.ಸಮಾಜೋತ್ಸವದ ಅಂಗವಾಗಿ ಶೋಭಾಯಾತ್ರೆ, ಧಾರ್ಮಿಕ ಸಭೆ, ಸಹ ಭೋಜನವನ್ನು ಸಹ ಆಯೋಜಿಸಲಾಗಿದೆ. ಇದು ಹಿಂದೂಗಳ ಅಸ್ಮಿತೆ ಕಾರ್ಯಕ್ರಮವಾಗಿದ್ದು, ಜಾತಿ, ಪಕ್ಷ ಬೇಧವಿರದೆ ಪ್ರತಿ ಯೊಬ್ಬ ಹಿಂದೂಗಳನ್ನು ಕಾರ್ಯಕ್ರಮಕ್ಕೆ ಅಪೇಕ್ಷಿಸಲಾಗಿದೆ ಎಂದರು.ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಉಪಾಧ್ಯಕ್ಷ ಆರ್.ಡಿ.ಮಹೇಂದ್ರ ಮಾತನಾಡಿ, ಆಯೋಜನಾ ಸಮಿತಿ ಈಗಾಗಲೇ ಮನೆ ಮನೆ ಸಂಪರ್ಕವನ್ನು ನಡೆಸಿ ಕಾರ್ಯಕ್ರಮಕ್ಕೆ ಹಿಂದೂ ಬಾಂಧವ ರನ್ನು ಆಹ್ವಾನಿಸುತ್ತಿದೆ. ಸುಮಾರು 4 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಹಿಂದೂಗಳನ್ನು ಸೇರ್ಪಡೆಗೊಳಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ರೂಪುರೇಷೆ ಮಾಡಿಕೊಳ್ಳಲಾಗಿದೆ.ಶೋಭಾಯಾತ್ರೆಯೂ ಸಹ ಅದ್ಧೂರಿಯಾಗಿ ನಡೆಯಬೇಕು ಎಂಬುದು ಆಯೋಜನಾ ಸಮಿತಿ ಆಶಯ. ಶೋಭಾಯಾತ್ರೆಯಲ್ಲಿ ಹಿಂದೂ ಬಾಂಧವರು ತಮ್ಮಿಷ್ಟದ ದೇವಾನು ದೇವತೆಗಳ, ಹಿಂದೂ ನಾಯಕರ, ರಾಷ್ಟ್ರಭಕ್ತರ ವೇಷಭೂಷಣಗಳನ್ನು ತೊಟ್ಟು ಭಾಗವಹಿಸಬಹುದಾಗಿದೆ. ಉತ್ಸವದ ಯಶಸ್ವಿಗೆ ಹಲವಾರು ಸಮಿತಿ, ಉಪ ಸಮಿತಿಗಳನ್ನು ರಚಿಸಿದ್ದು ತಮ್ಮ ಕಾರ್ಯಚಟುವಟಿಕೆಯನ್ನು ಈಗಾಗಲೇ ಶೇ.೫೦ಕ್ಕೂ ಹೆಚ್ಚು ಪೂರ್ಣಗೊಳಿಸಿದ್ದಾರೆ. ನಗರ ಶೃಂಗಾರದ ಅಂಗವಾಗಿ ಪಟ್ಟಣದಾದ್ಯಂತ ಕೇಸರ ಧ್ವಜ, ಬ್ಯಾನರ್, ಬಂಟಿಂಗ್ಸ್ ಗಳನ್ನು ಕಟ್ಟಿ ವಿಶೇಷ ಅಲಂಕಾರವನ್ನು ಮಾಡಲಾಗುವುದು ಎಂದು ತಿಳಿಸಿದರು.ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಪ್ರಮುಖರಾದ ಬಿ.ವೆಂಕಟೇಶ್, ಸಿ.ಎಸ್. ಮಹೇಶ್ಚಂದ್ರ, ಗುರುಪ್ರಸಾದ್, ಪ್ರಶಾಂತ್, ಉಮೇಶ್, ಸುರೇಶ್ ಗುಂಡ, ಕಿರಣ್‌ಭಂಡಾರಿ, ಸುಮೇಶ್, ಮಂಜು ಹಲಸೂರು, ಸಂದೀಪ್ ಶೆಟ್ಟಿ, ಸುಜಿತ್ ಪೂಜಾರಿ, ಸುಮೇಶ್ ಶೆಟ್ಟಿ, ರವಿಚಂದ್ರ ಚಿನ್ನು, ಅರುಣ್, ಶರತ್ ಪೂಜಾರಿ, ಅಖಿಲೇಶ್, ರಮೇಶ್, ಸಚಿನ್ ಮತ್ತಿತರರು ಹಾಜರಿದ್ದರು.೨೧ಬಿಹೆಚ್‌ಆರ್ ೧:

ಬಾಳೆಹೊನ್ನೂರಿನಲ್ಲಿ ಜ.30ರಂದು ನಡೆಯಲಿರುವ ಹಿಂದೂ ಸಮಾಜೋತ್ಸವ ಅಂಗವಾಗಿ ನಗರ ಶೃಂಗಾರಕ್ಕೆ ಕೇಸರಿ ಧ್ವಜ ನೆಡುವ ಮೂಲಕ ಚಾಲನೆ ನೀಡಲಾಯಿತು. ಟಿ.ಎಂ.ಉಮೇಶ್, ಆರ್.ಡಿ. ಮಹೇಂದ್ರ, ಬಿ.ವೆಂಕಟೇಶ್, ಸಿ.ಎಸ್.ಮಹೇಶ್ಚಂದ್ರ, ಗುರುಪ್ರಸಾದ್, ಪ್ರಶಾಂತ್ ಇದ್ದರು.