ಚಿಕ್ಕಮಗಳೂರುಹಿಂದುತ್ವ ಒಗ್ಗಟ್ಟಾದಾಗ ಮಾತ್ರ ಭಾರತದ ಉಸಿರು ಉಳಿಯುತ್ತದೆ ಎಂಬುದನ್ನು ಮನಗಂಡು ಹಿಂದೂಗಳನ್ನು ಸಂಘಟಿಸುವ ಸಲುವಾಗಿ ಆರ್‌ಎಸ್‌ಎಸ್ ಸ್ಥಾಪಿಸಿ ದೇಶದ ಸಂಸ್ಕೃತಿ, ಆಚಾರ-ವಿಚಾರ, ಸಂಸ್ಕಾರ ಉಳಿಸುವ ಜತೆಗೆ ನಮ್ಮ ಜವಾಬ್ದಾರಿ ತಿಳಿಸಲು ಹಿಂದೂ ಸಮಾಜೋತ್ಸವ ಆಯೋಜಿಸಲಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಸಹ ಸಂಯೋಜಕ ಸತೀಶ್ ದಾವಣಗೆರೆ ಹೇಳಿದರು.
ಅಲ್ಲಂಪುರದ ಕೈಮರದಲ್ಲಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಹಿಂದುತ್ವ ಒಗ್ಗಟ್ಟಾದಾಗ ಮಾತ್ರ ಭಾರತದ ಉಸಿರು ಉಳಿಯುತ್ತದೆ ಎಂಬುದನ್ನು ಮನಗಂಡು ಹಿಂದೂಗಳನ್ನು ಸಂಘಟಿಸುವ ಸಲುವಾಗಿ ಆರ್‌ಎಸ್‌ಎಸ್ ಸ್ಥಾಪಿಸಿ ದೇಶದ ಸಂಸ್ಕೃತಿ, ಆಚಾರ-ವಿಚಾರ, ಸಂಸ್ಕಾರ ಉಳಿಸುವ ಜತೆಗೆ ನಮ್ಮ ಜವಾಬ್ದಾರಿ ತಿಳಿಸಲು ಹಿಂದೂ ಸಮಾಜೋತ್ಸವ ಆಯೋಜಿಸಲಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಸಹ ಸಂಯೋಜಕ ಸತೀಶ್ ದಾವಣಗೆರೆ ಹೇಳಿದರು.
ಅಲ್ಲಂಪುರದ ಕೈಮರದಲ್ಲಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿ ಗೋಪೂಜೆ ಸಲ್ಲಿಸಿ ದಿಕ್ಸೂಚಿ ಭಾಷಣ ಮಾಡಿ ಜಾತಿ, ಪಕ್ಷ, ಪ್ರಾಂತ, ಭಾಷೆ ಎಲ್ಲವನ್ನೂ ಬದಿಗೊತ್ತಿ ಇಲ್ಲಿ ಸೇರಿದ್ದೇವೆ. ಹಿಂದೂಗಳಲ್ಲಿ ಒಗ್ಗಟ್ಟಿಲ್ಲದೆ ಬಾಂಗ್ಲಾ ನುಸುಳುಕೋರರನ್ನು ತಡೆಯಲಾಗುತ್ತಿಲ್ಲ. ಹಾಗೂ ಜಾತಿ ವಿಷವರ್ತುಲದಲ್ಲಿದ್ದೇವೆ. ರಾಜಕೀಯಕ್ಕಾಗಿ ಹಣದ ಆಮಿಷಗಳಿಗೆ ಬಲಿಯಾಗುತ್ತಿದ್ದೇವೆ ಈ ಕುರಿತು ಜನಜಾಗೃತಿ ಮೂಡಿಸಲು ಸಮಾಜೋತ್ಸವ ಸಹಕಾರಿ ಎಂದರು.ಆರ್‌ಎಸ್‌ಎಸ್‌ನ ಶತಮಾನೋತ್ಸವ ಸಂದರ್ಭದಲ್ಲಿ ಇದಕ್ಕೆ ಹಿಂದೆ ಪ್ರಚಾರದ ಗೀಳು ಇರಲಿಲ್ಲ. ಇತ್ತೀಚಿನ ದಿನ ಗಳಲ್ಲಿ ಇದಕ್ಕೆ ಜನಪ್ರಿಯತೆ ತಂದು ಪ್ರಚಾರ ಮಾಡುತ್ತಿರುವವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಕಳೆದ 100 ವರ್ಷ ಗಳಲ್ಲಿ ಏನೇನು ಕಾರ್ಯಕ್ರಮ ಮಾಡಿದ್ದೇವೆ. 1925ರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಕಾಂಗ್ರೆಸ್ ತೆಗೆದುಕೊಂಡ ನಿರ್ಧಾರದ ಕುರಿತು ಜನರಿಗೆ ಮನವರಿಕೆ ಮಾಡುವ ಅಗತ್ಯ ಇದೆ ಎಂದರು.ಕಣ್ಣ ಮೇಸ್ತ್ರಿ ಅಧ್ಯಕ್ಷತೆ ವಹಿಸಿದ್ದರು, ಪ್ರಾಸ್ತಾವಿಕವಾಗಿ ದೀಪಕ್ ದಾಸರಹಳ್ಳಿ ಮಾತನಾಡಿದರು. ಬಿಜೆಪಿ ಮುಖಂಡರಾದ ಪಲ್ಲವಿ ಸಿ.ಟಿ ರವಿ, ಟಿ.ಎಸ್.ಶಿವಕುಮಾರ್, ಜೆ.ಡಿ. ಲೋಕೇಶ್, ಸೀತಾರಾಂಭರಣ್ಯ, ಜಸಿಂತಾ ಅನಿಲ್ ಕುಮಾರ್, ವೀಣಾಶೆಟ್ಟಿ, ದಾಕ್ಷಾಯಣಿ ಪೂರ್ಣೇಶ್, ಅಂಬಿಕಾ ಶಿವಕುಮಾರ್, ಶಿವರಾಜ್, ದೇವರಾಜ್, ಮಂಜುನಾಥ್, ದಾನೇಶ್, ಅವಿಲಾ ಚಂದ್ರಶೇಖರ್, ಹಂಪಾಪುರ ರಾಜೀವ್ ಮತ್ತಿತರರು ಉಪಸ್ಥಿತರಿದ್ದರು.-- ಫೋಟೋ--ಅಲ್ಲಂಪುರದ ಕೈಮರದಲ್ಲಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿ ಗೋಪೂಜೆ ಸಲ್ಲಿಸಲಾಯಿತು. ಈ ವೇಳೆ ಸತೀಶ್ ದಾವಣಗೆರೆ, ದೀಪಕ್ ದಾಸರಹಳ್ಳಿ, ಕಣ್ಣ ಮೇಸ್ತ್ರಿ, ಪಲ್ಲವಿ ಸಿ.ಟಿ.ರವಿ ಮೊದಲಾದವರಿದ್ದರು.