ಶತಮಾನೋತ್ಸವ ಆಚರಿಸುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ತನ್ನ ಕಾರ್ಯ ಯೋಜನೆಯಲ್ಲಿ ಹಿಂದೂ ಸಮಾಜೋತ್ಸವ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಖಂಡ ಹಿಂದೂ ಸಮಾಜ ದೇಶದಲ್ಲಿ ಹರಿದು ಹಂಚಿ ಹೋಗಿರುವುದನ್ನು ಒಗ್ಗೂಡಿಸುವ ಸಲುವಾಗಿ ಶೋಭಾಯಾತ್ರೆ ನಡೆಸಲಾಗುತ್ತಿದೆ. ಹಿಂದೂ ಸಮಾಜದವರು ಜಾತಿ ಬೇಧ ಮರೆತು ಸಂಘಟಿತರಾಗಿ ನಾವೆಲ್ಲ ಒಂದು ನಾವೆಲ್ಲ ಮುಂದು ಎನ್ನುವ ಮೂಲಕ, ಯುವಕರ ಪ್ರಜ್ಞೆ ಧರ್ಮದೆಡೆಗೆ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು. ಜ. ೨೯ ರಂದು ಮದ್ಯಾಹ್ನ ೩ ಗಂಟೆಗೆ ಪಾಳ್ಯ ಹೋಬಳಿ ಸಂಕಲಾಪುರ ಮಠದಲ್ಲಿ, ನಂತರ ಕಾರ್ಜುವಳ್ಳಿ ಮಠದಲ್ಲಿಯೂ ಸಹ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.

ಕನ್ನಡಪ್ರಭ ವಾರ್ತೆ ಆಲೂರುಕಸಬಾ ಹಿಂದೂ ಸಮಾಜೋತ್ಸವ ಸಮಿತಿ ವತಿಯಿಂದ ಜ. ೨೯ ರಂದು ಬೃಹತ್ ಶೋಭಾಯಾತ್ರೆ ನಡೆಯಲಿದೆ. ತಾಲೂಕಿನ ಸಮಾಜ ಬಾಂಧವರು ತಪ್ಪದೆ ಭಾಗವಹಿಸಿ ಸಹಕರಿಸಬೇಕೆಂದು ಕಾರ್ಜುವಳ್ಳಿ ಹಿರೇಮಠ ಸಂಸ್ಥಾನ ಮಠಾಧೀಶರು ಹಾಗೂ ಗೌರವಾಧ್ಯಕ್ಷರಾದ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.ಪಟ್ಟಣದ ಹೌಸಿಂಗ್‌ಬೋರ್ಡ್‌ನಲ್ಲಿ ಕಸಬಾ ಹಿಂದೂ ಸಮಾಜೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ. ಪಿ. ರವಿಯವರ ಮನೆಯಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶತಮಾನೋತ್ಸವ ಆಚರಿಸುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ತನ್ನ ಕಾರ್ಯ ಯೋಜನೆಯಲ್ಲಿ ಹಿಂದೂ ಸಮಾಜೋತ್ಸವ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಖಂಡ ಹಿಂದೂ ಸಮಾಜ ದೇಶದಲ್ಲಿ ಹರಿದು ಹಂಚಿ ಹೋಗಿರುವುದನ್ನು ಒಗ್ಗೂಡಿಸುವ ಸಲುವಾಗಿ ಶೋಭಾಯಾತ್ರೆ ನಡೆಸಲಾಗುತ್ತಿದೆ. ಹಿಂದೂ ಸಮಾಜದವರು ಜಾತಿ ಬೇಧ ಮರೆತು ಸಂಘಟಿತರಾಗಿ ನಾವೆಲ್ಲ ಒಂದು ನಾವೆಲ್ಲ ಮುಂದು ಎನ್ನುವ ಮೂಲಕ, ಯುವಕರ ಪ್ರಜ್ಞೆ ಧರ್ಮದೆಡೆಗೆ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು. ಸಂಕಲಾಪುರ ಮಠಾಧೀಶರಾದ ಶಾಂತವೀರ ಮಲ್ಲಿಕಾರ್ಜುನ ಮಹಾಸ್ವಾಮಿಯವರು ಮಾತನಾಡಿ, ಜ. ೨೯ ರಂದು ಮದ್ಯಾಹ್ನ ೩ ಗಂಟೆಗೆ ಪಾಳ್ಯ ಹೋಬಳಿ ಸಂಕಲಾಪುರ ಮಠದಲ್ಲಿ, ನಂತರ ಕಾರ್ಜುವಳ್ಳಿ ಮಠದಲ್ಲಿಯೂ ಸಹ ಶೋಭಾಯಾತ್ರೆ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು. ಸಮಿತಿ ಅಧ್ಯಕ್ಷ ಬಿ. ಈ. ಸದಾಶಿವಪ್ಪ ರವರು, ಜ. ೨೯ ರಂದು ಬೆಳಗ್ಗೆ ೧೦ ಗಂಟೆಗೆ ಪಟ್ಟಣದ ಸೆಸ್ಕ್ ವೃತ್ತದಿಂದ ಪೂರ್ಣಕುಂಭದೊಂದಿಗೆ ಪ್ರಾರಂಭವಾದ ಶೋಭಾಯಾತ್ರೆ ಕೊನೆಪೇಟೆ ಗಣಪತಿ ಪೆಂಡಾಲಿನಲ್ಲಿ ಮುಕ್ತಾಯಗೊಳ್ಳಲಿದೆ. ನಂತರ ನಡೆಯುವ ಧಾರ್ಮಿಕ ಸಮಾರಂಭದಲ್ಲಿ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಹಾಸನ ಆದಿಚುಂಚನಗಿರಿ ಶಾಖಾ ಮಠಾಧೀಶರಾದ ಶಂಭುನಾಥಸ್ವಾಮೀಗಳು, ಸಂಕಲಾಪುರ ಮಠಾಧೀಶರಾದ ಶಾಂತವೀರ ಮಲ್ಲಿಕಾರ್ಜುನ ಮಹಸ್ವಾಮಿಗಳು ಭಾಗವಹಿಸಲಿದ್ದಾರೆ. ಹಿಂದೂ ಜಾಗರಣಾ ವೇದಿಕೆ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಕೆ. ಟಿ. ಉಲ್ಲಾಸ್ ಭಾಗವಹಿಸಲಿದ್ದಾರೆ ಎಂದರು. ಸಭೆಯಲ್ಲಿ ಜಿಲ್ಲಾ ಪ್ರಚಾರಕ್ ಪ್ರಮುಖ್ ವಿಜಯ್, ಕಾರ್ಯಾಧ್ಯಕ್ಷ ಕೆ. ಪಿ. ರವಿ, ಕೋಶಾಧ್ಯಕ್ಷ ರವಿಕುಮಾರ್, ಲೋಹಿತ್, ಹರ್ಷಿತ, ಕೃಷ್ಣೇಗೌಡ, ಮಡಬಲು ಕಾಂತರಾಜು ಮತ್ತು ನಿರ್ದೇಶಕರು ಭಾಗವಹಿಸಿದ್ದರು.