ಹಿಂದೂ ಧರ್ಮ ಉಳಿಸಲು, ಸನಾತನ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಮಾಜದ ಅಭಿವೃದ್ಧಿ, ಏಕತೆಗೆ ಜ.11ರಂದು ಭಾನುವಾರ ಮಧ್ಯಾಹ್ನ 2ಗಂಟೆಗೆ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಿಂದ ಭವ್ಯ ಶೋಭಾಯಾತ್ರೆ ಮೂಲಕ ಹಿಂದೂ ಸಮ್ಮೇಳನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ವಸಂತಕುಮಾರ ಆರ್.ಚಿದ್ರಿ ಹೇಳಿದರು.
ಕನ್ನಡಪ್ರಭ ವಾರ್ತೆ ಹುಮನಾಬಾದ್
ಹಿಂದೂ ಧರ್ಮ ಉಳಿಸಲು, ಸನಾತನ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಮಾಜದ ಅಭಿವೃದ್ಧಿ, ಏಕತೆಗೆ ಜ.11ರಂದು ಭಾನುವಾರ ಮಧ್ಯಾಹ್ನ 2ಗಂಟೆಗೆ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಿಂದ ಭವ್ಯ ಶೋಭಾಯಾತ್ರೆ ಮೂಲಕ ಹಿಂದೂ ಸಮ್ಮೇಳನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ವಸಂತಕುಮಾರ ಆರ್.ಚಿದ್ರಿ ಹೇಳಿದರು.ಪಟ್ಟಣದ ಕರ್ನಾಟಕ ಆರ್ಯ ಪ್ರತಿನಿಧಿ ಸಭಾ ರಾಜ್ಯ ಉಪಾಧ್ಯಕ್ಷರ ನಾರಾಯಣ ಚಿದ್ರಿ ಅವರ ಗೃಹ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಭದ್ರೇಶ್ವರ ದೇವಸ್ಥಾನ, ಪಂಡಿತ ಶಿವಚಂದ್ರ ನೆಲ್ಲಗಿ ಮಾರ್ಗವಾಗಿ, ಬಸವೇಶ್ವರ ವೃತ್ತ, ಬಾಲಾಜಿ ಮಂದಿರ, ಸರದಾರ ಪಟೇಲ್ ವೃತ್ತ, ಡಾ.ಅಂಬೇಡ್ಕರ್ ವೃತ್ತದ ಮೂಲಕ ಥೇರ್ ಮೈದಾನ ದವರೆಗೆ ಜರುಗಲಿದೆ ಎಂದು ಮಾಹಿತಿ ನೀಡಿದರು.
ಹಿರಿಯ ಮುಖಂಡ ವಿನಾಯಕ ಮಂಡಾ ಮಾತನಾಡಿ, ಶೋಭಾಯಾತ್ರೆ ಸಂದರ್ಭದಲ್ಲಿ ಪಟ್ಟಣದ ನೂರಾರು ಮಾತೆಯರಿಂದ ಕುಂಭಕಳಸ, ಡೊಳ್ಳುಕುಣಿತ, ಹಲಗೆ, ಮಕ್ಕಳಿಂದ ಮಹಾಪುರುಷರ ವೇಷಭೂಷಣ, ದೇಶದ ಮಹಾನ್ ಸಂತರು, ಮಹಾ ಪುರುಷರು ಸೇರಿದಂತೆ ತೆರೆದ ವಾಹನಗಳಲ್ಲಿ ವಿವಿಧ ಧರ್ಮದ ಗುರುಗಳ ಭಾವಚಿತ್ರ ಭವ್ಯ ಮೆರವಣಿಗೆ ಜರುಗಲಿದೆ.ಬಳಿಕ ಥೇರ್ ಮೈದಾನದಲ್ಲಿ ಸಾಮಾಜಿಕ ಕಾರ್ಯಕರ್ತ ನಾಗೇಶ ಚಿನ್ನಾರೆಡ್ಡಿ ಮುಖ್ಯ ಭಾಷಣಕಾರ ರಾಗಿ ಆಗಮಿಸಲಿದ್ದಾರೆ, ಸ್ವಂತ ಮಠದ ಬಾಲಯೋಗಿ ದತ್ತ ದಿಗಂಬರ ಶರಣ ಶಂಕರಲಿಂಗ ಮಹಾರಾಜರು, ರಾಜೇಶ್ವರ ಹಿರೇಮಠ ಸಂಸ್ಥಾನದ ಘನಲಿಂಗ ರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.