ಸಾರಾಂಶ
ಕುಕನೂರು: ಪಟ್ಟಣದ ಶ್ರೀಅನ್ನದಾನೀಶ್ವರ ಮಠದಲ್ಲಿ ಹಿಂದೂಸ್ತಾನಿ ವಚನ ಗಾಯನ ಮತ್ತು ಜಾನಪದ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚೆನ್ನಬಸವೇಶ್ವರ ಜಾನಪದ ಮತ್ತು ಸಾಂಸ್ಕೃತಿಕ ಕಲಾ ಸಂಘ ಬನ್ನಿಕೊಪ್ಪ ಸಂಯೋಗದೊಂದಿಗೆ ರಾಜ್ಯೋತ್ಸವ ಹಾಗೂ ೫೦ನೇ ವರ್ಷದ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಜರುಗಿದ ಹಿಂದುಸ್ತಾನಿ ವಚನ ಗಾಯನ ಮತ್ತು ಜಾನಪದ ಕಾರ್ಯಕ್ರಮ ಅನ್ನದಾನೇಶ್ವರ ಮಠದ ಮಹಾದೇವ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು.ಸಂಗೀತವನ್ನು ಎಲ್ಲರೂ ಆಲಿಸಬೇಕು. ಇತರರಿಗೆ ಸಂಗೀತದ ಬಗ್ಗೆ ಆಸಕ್ತಿ ಬೆಳೆಸುವಂತಹ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಬೇಕು. ಯಾಂತ್ರಿಕ ಜೀವನದಲ್ಲಿ ಬರಿ ದುಡ್ಡು ಮಾಡುವ ಕೆಲಸವಾಗಿದೆ. ಆದರೆ ಮನಸ್ಸಿಗೆ ನೇಮ್ಮದಿ ಇಲ್ಲವಾಗಿದೆ. ಎಲ್ಲ ಪ್ರಕಾರ ಸಂಗೀತ ಗಾಯನದಲ್ಲಿ ಹಿಂದೂಸ್ತಾನಿ ಸಂಗೀತ ವಿಭಿನ್ನ ಮತ್ತು ವಿಶೇಷ. ಹಿಂದೂಸ್ತಾನಿ ಗಾಯನ ಎಲ್ಲರೂ ಮೆಚ್ಚುವಂತಹ ಗಾಯನವಾಗಿದೆ ಎಂದು ಹೇಳಿದರು.ಹಿಂದೂಸ್ತಾನಿ ವಚನ ಗಾಯನ ಮತ್ತು ಜಾನಪದ ಕಾರ್ಯಕ್ರಮವನ್ನು ಗಾಯಕ ಮಹಮ್ಮದ ಶರೀಫಸಾಬ ಯಲಿಗಾರ ನಡೆಸಿಕೊಟ್ಟರು. ತಬಲಾ ವಾದಕ ಖಾದರಸಾಬ ಸಿದ್ನೇಕೊಪ್ಪ, ಹಂತಿಪದಗಳನ್ನು ನಾಗಯ್ಯ ವೀರುಪಾಪುರ ಹಾಡಿದರು.ಶರಣಯ್ಯ ಇಟಗಿ, ಮೇಘರಾಜ ಜಿಡಗಿ, ಕಸಾಪ ಅಧ್ಯಕ್ಷ ಕಳಕಪ್ಪ ಕುಂಬಾರ, ಹುಚ್ಚಿರಪ್ಪ ಕೌದಿ, ವೀರಯ್ಯ ಹಿರೇಮಠ ಇದ್ದರು.