ಹಿರೇಬೆಟ್ಟು ಲಶಿಕ್‌ ಸ್ಟ್ರೈಕರ್ಸ್‌ ತಂಡಕ್ಕೆ ಮಹಿಮ್‌ ಟ್ರೋಫಿ 2025

| Published : Mar 15 2025, 01:01 AM IST

ಹಿರೇಬೆಟ್ಟು ಲಶಿಕ್‌ ಸ್ಟ್ರೈಕರ್ಸ್‌ ತಂಡಕ್ಕೆ ಮಹಿಮ್‌ ಟ್ರೋಫಿ 2025
Share this Article
  • FB
  • TW
  • Linkdin
  • Email

ಸಾರಾಂಶ

ಹಿರೇಬೆಟ್ಟು ಪ್ರೆಂಡ್ಸ್ ವತಿಯಿಂದ ದಿ. ಮಹಿಮ್ ಕುಮಾರ್ ಹೆಗ್ಡೆ ಅವರ ಸ್ಮರಣಾರ್ಥ ನಡೆದ ಹೊನಲು ಬೆಳಕಿನ ಮಹಿಮ್ ಟ್ರೋಫಿ 2025 ಕ್ರಿಕೆಟ್ ಟೂರ್ನಿಯಲ್ಲಿ ಲಶಿಕ್ ಸ್ಟ್ರೈಕರ್ಸ್ ತಂಡ ಟ್ರೋಫಿ ಗೆದ್ದುಕೊಂಡರೆ, ಶ್ರೀ ಸಾಯಿ ಕ್ರಿಕೆಟರ್ಸ್ ತಂಡವು ರನ್ನರ್-ಅಪ್ ಟ್ರೋಫಿ ಪಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಹಿರೇಬೆಟ್ಟು ಪ್ರೆಂಡ್ಸ್ ವತಿಯಿಂದ ದಿ. ಮಹಿಮ್ ಕುಮಾರ್ ಹೆಗ್ಡೆ ಅವರ ಸ್ಮರಣಾರ್ಥ ನಡೆದ ಹೊನಲು ಬೆಳಕಿನ ಮಹಿಮ್ ಟ್ರೋಫಿ 2025 ಕ್ರಿಕೆಟ್ ಟೂರ್ನಿಯಲ್ಲಿ ಲಶಿಕ್ ಸ್ಟ್ರೈಕರ್ಸ್ ತಂಡ ಟ್ರೋಫಿ ಗೆದ್ದುಕೊಂಡರೆ, ಶ್ರೀ ಸಾಯಿ ಕ್ರಿಕೆಟರ್ಸ್ ತಂಡವು ರನ್ನರ್-ಅಪ್ ಟ್ರೋಫಿ ಪಡೆಯಿತು.

ಈ ಟೂರ್ನಿಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಶಿವಪ್ರಸಾದ್ ಹೆಗ್ಡೆ, ಕೃಷ್ಣಪ್ರಸಾದ್ ಶೆಟ್ಟಿ, ಪ್ರವೀಣ್ ಪೂಜಾರಿ, ಪುರೋಹಿತ ಶ್ರೀಧರ್ ಭಟ್, ಆತ್ರಾಡಿ ಹಿರೇಬೆಟ್ಟು ಗ್ರಾ.ಪಂ. ಅಧ್ಯಕ್ಷ ಹರೀಶ್ ಶೆಟ್ಟಿ ಬಾಳ್ಕಟ್ಟ, ಗ್ರಾ.ಪಂ. ಸದಸ್ಯರಾದ ಸುಧೀರ್‌ ಕುಮಾರ್ ಪಟ್ಲ ಮತ್ತು ಸುರೇಶ್‌ ನಾಯ್ಕ ಹಿರೇಬೆಟ್ಟು, ಖ್ಯಾತ ವಕೀಲ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಗುರುದಾಸ್ ಭಂಡಾರಿ, ಸ್ಥಳೀಯ ಗಣ್ಯರಾದ ನಾರಾಯಣ ಪೂಜಾರಿ ನೆಲ್ಲಿಕಟ್ಟೆ, ಸ್ನೇಹ ಯೂತ್‌ ಕ್ಲಬ್ ಗೌರವಾಧ್ಯಕ್ಷ ಸುಜಿತ್ ಹೆಗ್ಡೆ ಬಾಳ್ಕಟ್ಟ ಮತ್ತಿತರು ಉಪಸ್ಥಿತರಿದ್ದರು

ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಗೆದ್ದ ತಂಡಗಳಿಗೆ ಟ್ರೋಫಿಯ ಜೊತೆಗೆ ಲಶಿಕ್ ಸ್ಟ್ರೈಕರ್ಸ್ ತಂಡದ ಶಿವಪ್ರಸಾದ್‌ ಅವರಿಗೆ ಪಂದ್ಯಶ್ರೇಷ್ಠ ಮತ್ತು ಕೀರ್ತನ್‌ ಶೆಟ್ಟಿ ಅವರಿಗೆ ಸರಣಿ ಶ್ರೇಷ್ಠ, ಶ್ರೀ ಸಾಯಿ ಕ್ರಿಕೆಟರ್ಸ್ ತಂಡ ವಿಕ್ರಮ್‌ ಭಟ್‌ ಅವರಿಗೆ ಉತ್ತಮ ದಾಂಡಿಗ ಹಾಗೂ ಮೈಟಿ ಸಾಗು ತಂಡದ ಸುಧಾಕರ್‌ ಅವರಿಗೆ ಉತ್ತಮ ಎಸೆತಗಾರ ವೈಯುಕ್ತಿಕ ಪ್ರಶಸ್ತಿಗಳನ್ನು ನೀಡಲಾಯಿತು.