ಹಿರಿಯ ಜೀವಿಗಳು ಅಂತ್ಯದ ಸಮಯ ಕಳೆಯಲು ವೃದ್ಧಾಶ್ರಮ ಸಹಕಾರಿ

| Published : Nov 30 2024, 12:51 AM IST

ಸಾರಾಂಶ

ಪ್ರತಿಯೊಂದು ತಾಲೂಕಿನಲ್ಲಿ ವೃದ್ಧಾಶ್ರಮ ಸ್ಥಾಪನೆಯಾಗುವ ಮೂಲಕ ನೊಂದ ಹಿರಿಯ ಜೀವಿಗಳಿಗೆ ಅಂತ್ಯದ ಸಮಯವನ್ನು ಕಳೆಯಲು ತುಂಬಾ ಸಹಾಯವಾಗುತ್ತದೆ ಎಂದು ಸೊರಬ ತಾಲೂಕಿನ ಶಿಗ್ಗಾ ಗ್ರಾಮದ ಮೂರುಜವಧೀಶ್ವರ ಮಠದ ಗುರು ಪಣಿ ಭೂಷಣ ಸ್ವಾಮೀಜಿ ಹೇಳಿದರು.

ಹಿರೇಕೆರೂರು: ಪ್ರತಿಯೊಂದು ತಾಲೂಕಿನಲ್ಲಿ ವೃದ್ಧಾಶ್ರಮ ಸ್ಥಾಪನೆಯಾಗುವ ಮೂಲಕ ನೊಂದ ಹಿರಿಯ ಜೀವಿಗಳಿಗೆ ಅಂತ್ಯದ ಸಮಯವನ್ನು ಕಳೆಯಲು ತುಂಬಾ ಸಹಾಯವಾಗುತ್ತದೆ ಎಂದು ಸೊರಬ ತಾಲೂಕಿನ ಶಿಗ್ಗಾ ಗ್ರಾಮದ ಮೂರುಜವಧೀಶ್ವರ ಮಠದ ಗುರು ಪಣಿ ಭೂಷಣ ಸ್ವಾಮೀಜಿ ಹೇಳಿದರು.ಪಟ್ಟಣದ ಸಾಯಿಬಾಬಾ ಮಂದಿರದಲ್ಲಿ ರಾಘವೇಂದ್ರ ವೃದ್ಧಾಶ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೆಲವು ಮಕ್ಕಳು ಇಂದು ತಮ್ಮ ತಂದೆ ತಾಯಂದಿರನ್ನು, ಗುರು ಹಿರಿಯರನ್ನು ತಮ್ಮ ಬಳಿ ಇಟ್ಟುಕೊಳ್ಳುವ ಕಾಲ ದೂರವಾಗುತ್ತಾ ಸಾಗುತ್ತಿದ್ದು, ಇದು ಹೀಗೆ ಮುಂದುವರೆದರೆ ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರಯುತ ಜೀವನಕ್ಕೆ ಬಹು ದೊಡ್ಡ ಕೊಡಲಿ ಪೆಟ್ಟು ಬೀಳಲಿದ್ದು, ಇದರಿಂದ ಗಂಡಾಂತರ ತಪ್ಪಿದ್ದಲ್ಲ. ಜಗತ್ತಿಗೆ ಮಾದರಿಯಾದ ನಮ್ಮ ಭಾರತದಲ್ಲಿ ಇಂದು ಅನಾಚಾರ, ತಂದೆ, ತಾಯಂದರಿಗೆ, ಗುರು ಹಿರಿಯರ ಮೇಲೆ ಶ್ರದ್ಧೆ, ಪ್ರೀತಿ ಹಾಗೂ ಗೌರವ ಕೊಡುವುದು ಕಡಿಮೆಯಾಗುತ್ತಾ ಸಾಗಿದ್ದು, ಯುವ ಪಿಳಿಗೆಗೆ ಇದು ಮಾರಕವಾಗಲಿದೆ. ವೃದ್ಧಾಶ್ರಮ ಸ್ಥಾಪನೆಯಿಂದ ನೊಂದ ಹಿರಿಯ ಜೀವಿಗಳಿಗೆ ಅಂತಿಮ ಜೀವನ ಸಾಗಿಸಲು ತುಂಬಾ ಉಪಕಾರಿಯಾಗಲಿದ್ದು, ಇದಕ್ಕೆ ಎಲ್ಲರ ಸಹಾಯ, ಸಹಕಾರ ಅತಿ ಅಗತ್ಯವಿದೆ ಎಂದರು.ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು.ಟ್ರಸ್ಟಿನ ಸಂಸ್ಥಾಪಕ ಡಾ.ವಿನಾಯಕ ಬಡಿಗೇರ, ರಾಣಿಬೆನ್ನೂರಿನ ಅಂಧರ ಜೀವ ಬೆಳಕು ಸಂಸ್ಥೆಯ ಅಧ್ಯಕ್ಷ ನಾಗನಗೌಡ ಬೆಳ್ಳುಳ್ಳಿ, ನಿವೃತ್ತ ಐಎಫ್‌ಎಸ್ ಅಧಿಕಾರಿ ಮಂಜುನಾಥ್ ತಂಬಾಕದ, ಪಪಂ ಸದಸ್ಯರಾದ ಮಹೇಂದ್ರಣ್ಣ ಬಡಳ್ಳಿ, ಹರೀಶ್ ಕಲಾಲ, ತಾಲೂಕು ಕರವೇ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ಭರಮಪ್ಪ ಡಮ್ಮಳ್ಳಿ, ಪ್ರಕಾಶ್ ನಿಟ್ಟೂರು, ರಾಜಶೇಖರ್ ಬಳ್ಳಾರಿ, ಡಾ.ಬಸವರಾಜ್ ಪೂಜಾರ, ಸಿದ್ದಲಿಂಗೇಶ ತಂಬಾಕದ, ಮಾರುತಿ ಮಧೂರಕರ ಹಾಗೂ ಗಣ್ಯರು ಇದ್ದರು.