ಹಿರೇಮಾಗಿ ರಾಮಲಿಂಗೇಶ್ವರ ಅದ್ಧೂರಿ ರಥೋತ್ಸವ

| Published : Mar 06 2025, 12:33 AM IST

ಸಾರಾಂಶ

ಅಮೀನಗಡ ಸಮೀಪದ ಹಿರೇಮಾಗಿ ಗ್ರಾಮದಲ್ಲಿ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಬುಧವಾರ ಸಂಭ್ರಮದ ರಥೋತ್ಸವ ಜರುಗಿತು.

ಕನ್ನಡಪ್ರಭ ವಾರ್ತೆ ಅಮೀನಗಡ

ಸಮೀಪದ ಹಿರೇಮಾಗಿ ಗ್ರಾಮದಲ್ಲಿ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಬುಧವಾರ ಸಂಭ್ರಮದ ರಥೋತ್ಸವ ಜರುಗಿತು.

ಹಿರೇಮಾಗಿ, ಗಂಗೂರ, ಖೈರವಾಡಗಿ, ಇನಾಂಬೂದಿಹಾಳ, ಚಿತ್ತರಗಿ, ಹುಲಗಿನಾಳ, ಕಲ್ಲಗೋನಾಳ, ಹಡಗಲಿ, ಬೆಳಗಲ್, ಅಮೀನಗಡ, ಕಮತಗಿ, ರಕ್ಕಸಗಿ ಇತರೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಉತ್ತತ್ತಿ, ಖರ್ಜೂರ ಎಸೆದು ಭಕ್ತಿ ಸಮರ್ಪಿಸಿದರು.

ಬೆಳಗಿನ ಜಾವ ರಾಮಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ, ವಿಶೇಷ ಪೂಜೆ, ಅಲಂಕಾರ,ಮಹಾಮಂಗಳಾರತಿ ಜರುಗಿತು. ಬಳಿಕ ಸಕಲ ಮಂಗಳವಾದ್ಯಗಳೊಂದಿಗೆರಾಮಲಿಂಗೇಶ್ವರ ಅಡ್ಡಪಾಲಕಿ ಉತ್ಸವ ಜರುಗಿತು. ಮಹಾಪ್ರಸಾದ ಏರ್ಪಡಿಸಲಾಗಿತ್ತು.

ಮಧ್ಯಾಹ್ನ ಹರಗುರು ಚರಮೂರ್ತಿಗಳಿಂದ ಧರ್ಮಸಭೆ ಜರುಗಿತು. ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘದಿಂದ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಮೊಗ್ಗಿ ಮಾಯಿದೇವರ ಪ್ರಶಸ್ತಿ ಪ್ರದಾನ ಮಾಡಲಾಯಿತು.