ಕನ್ನಡಪ್ರಭ ವರದಿ ಬೆನ್ನಲ್ಲೇ ಸರ್ವೆಗೆ ಆದೇಶಿಸಿದ್ದ ತಹಸೀಲ್ದಾರ್ । ಸಮೀಕ್ಷಾ ವರದಿಯಲ್ಲಿ ಕಬಳಿಕೆ ಸ್ಥಳ ಗುರುತು । ರಸ್ತೆ, ಮನೆ, ಹೋಟೆಲ್ ನಿರ್ಮಾಣ
---ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಸರ್ಕಾರಿ ಜಮೀನು ಒತ್ತುವರಿ ಸಂಬಂಧ ‘ಕನ್ನಡಪ್ರಭ’ ಪ್ರಕಟಿಸಿದ್ದ ಸರಣಿ ವರದಿಗೆ ಫಲ ದೊರೆತಿದ್ದು, ಇಲ್ಲಿ ಹಿರೀಕಾಟಿ ಬಳಿ ಸರ್ಕಾರಿ ಕಟ್ಟೆ ಜಾಗ ಒತ್ತುವರಿಯಾಗಿರುವುದು ಸಾಬೀತಾಗಿದೆ.ಜೂ.9ರಂದು ‘ಹಿರೀಕಾಟಿ ಸರ್ಕಾರಿ ಕಟ್ಟೆ ಜಾಗವೇ ಕ್ರಷರ್ ರಸ್ತೆ’ ಶೀರ್ಷಿಕೆಯಡಿ ಕನ್ನಡಪ್ರಭ ವರದಿ ಪ್ರಕಟಿಸಿ 1.21 ಎಕರೆ ಖರಾಬು ಜಾಗ ಒತ್ತುವರಿಯಾಗಿರುವ ಬಗ್ಗೆ ಕಂದಾಯ ಇಲಾಖೆಯನ್ನು ಎಚ್ಚರಿಸುವ ಕೆಲಸ ಮಾಡಿತ್ತು.
ಕನ್ನಡಪ್ರಭ ವರದಿ ಗಮನಿಸಿದ ತಹಸೀಲ್ದಾರ್ ಎಂ.ಎಸ್. ತನ್ಮಯ್ ಅವರು ಜೂ.9ರಂದೇ ಹಿರೀಕಾಟಿ ಒತ್ತುವರಿಯನ್ನು ಸಮೀಕ್ಷೆ ಮಾಡಿ 3 ದಿನಗಳಲ್ಲಿ ವರದಿ ಕೊಡುವಂತೆ ಬೇಗೂರು ಕಂದಾಯ ಅಧಿಕಾರಿಗಳಿಗೆ ಸೂಚಿಸಿದ್ದರು.
ವರದಿಯಿಂದ ಎಚ್ಚೆತ್ತ ಹಿರೀಕಾಟಿ ಗ್ರಾಮದ ಆಡಳಿತಾಧಿಕಾರಿ ವಿನಯ್ ಕುಮಾರ್ ಅವರು ತಹಸೀಲ್ದಾರ್ ಸೂಚನೆ ಮೇರೆಗೆ ಹಿರೀಕಾಟಿ ಸ.ನಂ.೧೯೯ ರಲ್ಲಿ ೧.೨೧ ಎಕರೆ ಸರ್ಕಾರಿ ಕಟ್ಟೆ ಖರಾಬು ಜಾಗವನ್ನು ಸರ್ವೇಯರ್ ವೆಂಕಟೇಶ್‌ರಿಂದ ಅಳತೆ ಮಾಡಿಸಿದ್ದಾರೆ. ಈ ಸಮಯದಲ್ಲಿ 1.21 ಎಕರೆ ಜಾಗದಲ್ಲಿ ಕ್ರಷರ್‌ಗೆ ಹೋಗುವ ರಸ್ತೆ, ಮನೆ ಮತ್ತು ಹೋಟೆಲ್ ನಿರ್ಮಿಸಿರುವುದು ಗುರುತಿಸಲಾಗಿದೆ.
ಮೈಸೂರು-ಊಟಿ ಹೆದ್ದಾರಿಯಿಂದ ಅಪೆಕ್ಸ್ ಕ್ರಷರ್‌ವರೆಗೆ ಸರ್ಕಾರಿ ಕಟ್ಟೆ ಜಾಗ ಸುಮಾರು 250ಕ್ಕೂ ಹೆಚ್ಚು ಅಡಿ ಒತ್ತುವರಿಯಾಗಿದೆ. ಅಲ್ಲದೇ ಕಟ್ಟೆಯ ಉತ್ತರ ಭಾಗದಲ್ಲಿರುವ ಮನೆ, ಹೋಟೆಲ್‌ಗಳೂ ಸಹ ಸರ್ಕಾರದ್ದೇ ಎಂದು ಗುರುತಿಸಲಾಗಿದೆ.ಸರ್ಕಾರಿ ಕಟ್ಟೆ ಖರಾಬು ಜಾಗದ ಮೂಲಕ ಹಲವಾರು ವರ್ಷಗಳಿಂದ ಕ್ರಸರ್‌ಗೆ ಹೋಗುವ ರಸ್ತೆಯಾಗಿ ಮಾಡಿಕೊಂಡು ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗಿದೆ. ಅಲ್ಲದೆ ಹೋಟೆಲ್ ಕೂಡ ನಡೆಸುತ್ತಿದ್ದಾರೆ. ಇದೆನ್ನೆಲ್ಲ ಕಂಡು ಕಾಣದಂತೆ ಇದ್ದ ಕಂದಾಯ ಇಲಾಖೆಗೆ ‘ಕನ್ನಡಪ್ರಭ’ದ ವರದಿ ಬಳಿಕ ಸರ್ಕಾರಿ ಕಟ್ಟೆ ಖರಾಬು ೧.೨೧ ಎಕರೆ ಜಾಗ ಗಡಿ ಗುರುತು ಮಾಡುವ ಮೂಲಕ ಒತ್ತುವರಿದಾರರಿಗೆ ಶಾಕ್ ನೀಡಿದೆ.
---ತೆರವಿಗೆಂದು ಮುಹೂರ್ತ?
ಗುಂಡ್ಲುಪೇಟೆ: ಕನ್ನಡಪ್ರಭ ವರದಿ ಬೆನ್ನಲ್ಲೇ ಒತ್ತುವರಿಯಾಗಿರುವ ಸ್ಥಳವನ್ನು ಗುರುತಿಸಲಾಗಿದೆ. ಆದರೆ 1.21 ಎಕರೆ ಒತ್ತುವರಿಯನ್ನು ಎಂದು ತೆರವುಗೊಳಿಸಲಾಗುತ್ತದೆ ಎಂದು ಜನರು ಪ್ರಶ್ನಿಸಿದ್ದಾರೆ.--೨೦ಜಿಪಿಟಿ೨ಒತ್ತುವರಿ ಸರ್ವೇ ಕಾರ್ಯ--೨೦ಜಿಪಿಟಿ೩
ಜೂ.9ರಂದು ‘ಹಿರೀಕಾಟಿ ಸರ್ಕಾರಿ ಕಟ್ಟೆ ಜಾಗವೇ ಕ್ರಷರ್ ರಸ್ತೆ!’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.೨೦ಜಿಪಿಟಿ೪ಜೂ.9ರ ವರದಿ ಬೆನ್ನಲ್ಲೇ ಒತ್ತುವರಿ ಸಮೀಕ್ಷೆಗೆ ತಹಸೀಲ್ದಾರ್ ಆದೇಶ ಹೊರಡಿಸಿದ್ದರು.