ಗುಂಡ್ಲುಪೇಟೆಯಲ್ಲಿ ಹೆಸರಿಗೆ ಮಾತ್ರ ಹಿರೀಕಾಟಿ ಖನಿಜ ತನಿಖಾ ಠಾಣೆ

| Published : Oct 09 2024, 01:40 AM IST

ಗುಂಡ್ಲುಪೇಟೆಯಲ್ಲಿ ಹೆಸರಿಗೆ ಮಾತ್ರ ಹಿರೀಕಾಟಿ ಖನಿಜ ತನಿಖಾ ಠಾಣೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಲ್ಟಿ ವಂಚನೆ ತಡೆಯಲು ಆರಂಭವಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಸ್ತುವಾರಿಯಲ್ಲಿ ನಡೆಯುತ್ತಿರುವ ಹಿರೀಕಾಟಿ ಬಳಿ ಖನಿಜ ತನಿಖಾ ಠಾಣೇಲಿ ಕಾಟಾಚಾರದ ತಪಾಸಣೆ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕ್ವಾರಿಯ ರಾ ಮೆಟೀರಿಯಲ್‌ನ ರಾಯಲ್ಟಿ ಹಾಗೂ ಕ್ರಷರ್‌ನ ಉತ್ಪನ್ನಗಳ ಸಾಗಾಣಿಕೆ ಎಂಡಿಪಿ, ರಾಯಲ್ಟಿ ವಂಚನೆ ತಡೆಯಲು ಆರಂಭವಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಸ್ತುವಾರಿಯಲ್ಲಿ ನಡೆಯುತ್ತಿರುವ ಹಿರೀಕಾಟಿ ಬಳಿ ಖನಿಜ ತನಿಖಾ ಠಾಣೇಲಿ ಕಾಟಾಚಾರದ ತಪಾಸಣೆ ನಡೆಯುತ್ತಿದೆ.

ಕನ್ನಡಪ್ರಭ ಪತ್ರಿಕೆಯ ನಿರಂತರ ವರದಿ ಫಲವಾಗಿ ಆರಂಭವಾದ ಹಿರೀಕಾಟಿ ಖನಿಜ ತನಿಖಾ ಠಾಣೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸುತ್ತಿಲ್ಲ. ಬದಲಿಗೆ ಹೋಂ ಗಾರ್ಡ್‌ಗಳು ತಪಾಸಣೆ ಮಾಡುತ್ತಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಸ್ತುವಾರಿಯಲ್ಲಿ ನಡೆಯುತ್ತಿರುವ ಖನಿಜ ತನಿಖಾ ಠಾಣೆಯಲ್ಲಿ ಬೆಳಗ್ಗೆಯಿಂದ ಸಂಜೆ ತನಕ ಹೋಂ ಗಾರ್ಡ್‌ಗಳು ಇರುತ್ತಾರೆ. ನಿಂತ ಟಿಪ್ಪರ್‌ಗಳ ತಪಾಸಣೆ ಮಾಡುತ್ತಿದ್ದಾರೆ. ಕೆಲ ಕ್ರಷರ್‌, ಕ್ವಾರಿ ಲೀಸ್‌ ದಾರರು ವಂಚನೆಯೇ ನಿತ್ಯದ ಕಸುಬಾಗಿಸಿಕೊಂಡವರು ತಪಾಸಣಾ ಕೇಂದ್ರದ ಮುಂದೆ ಟಿಪ್ಪರ್‌ ನಿಲ್ಲಿಸುತ್ತಿಲ್ಲ ಎಂದು ಸಾರ್ವಜನಿಕರ ಆರೋಪಿಸಿದ್ದಾರೆ.

ಖನಿಜ ತನಿಖಾ ಠಾಣೆ ಇದೆ. ಹೋಂ ಗಾರ್ಡ್‌ಗಳು ದಬಾಯಿಸಿ ಟಿಪ್ಪರ್‌ ಚಾಲಕರಿಂದ ಮಾಹಿತಿ ಪಡೆಯಲು ಆಗುತ್ತಿಲ್ಲ, ಕಾರಣ ಹೋಂ ಗಾರ್ಡ್‌ಗಳಿಗೆ ೧೦ಟನ್‌ ಎಂಡಿಪಿ ಹಾಕಿಸಿ ೨೫ ರಿಂದ ೩೦ ಟನ್‌ ಸಾಗಿಸುತ್ತಿದ್ದಾರೆ ಇದರಿಂದ ರಾಜಧನ ಸರ್ಕಾರಕ್ಕೆ ನಷ್ಟವಾಗುತ್ತಿದೆ. ರಾತ್ರಿ, ಹಗಲೆನ್ನದೆ ಎಡೆಬಿಡದೆ ಓವರ್ ಲೋಡ್ ತುಂಬಿದ ಟಿಪ್ಪರ್‌ಗಳು ರಾಯಲ್ಟಿ, ಜಿಎಸ್‌ಟಿ ವಂಚಿಸಿ ತೆರಳುತ್ತಿವೆ. ಆದರೆ ಜಿಲ್ಲಾ ಟಾಸ್ಕ್‌ ಫೋರ್ಸ್‌ ಸಮಿತಿ ಮಾತ್ರ ತಮಗೆ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿದೆ.

ಕ್ವಾರಿಯಿಂದ ಬರುವ ರಾ ಮೆಟೀರಿಯಲ್‌ಗೆ ಬಹುತೇಕರು ಪರ‍್ಮಿಟ್ ಹಾಕಲ್ಲ, ಹಾಕಿದರೂ ೭,೮ ಟನ್ ಗೆ ಹಾಕಿ ಆರೇಳು ಟ್ರಿಪ್ ಕಲ್ಲು ಸಾಗಾಣಿಕೆ ಆಗುತ್ತಿದೆ. ಇನ್ನೂ ಜಿಎಸ್‌ಟಿ ಹಾಕೋ ಮಾತೇ ಇಲ್ಲ. ಇದು ಕ್ವಾರಿ ರಾ ಮೆಟೀರಿಯಲ್ ಕಥೆಯಾದರೆ, ಇನ್ನೂ ಕ್ರಷರ್‌ನ ಉತ್ಪನ್ನಗಳಿಗೂ ಜಿಎಸ್‌ಟಿ ಹಾಕಲ್ಲ, ಮಟೀರಿಯಲ್ ಸಾಗಾಣಿಕೆ ಪರ್ಮಿಟ್‌ ಹಾಕುವುದಿಲ್ಲ, ಹಾಕಿದರೂ ಒಂದೋ ಎರಡಕ್ಕೇ ಹಾಕುತ್ತಾರೆ.

ಆದಾಯ ಸೋರಿಕೆ:

ಕ್ವಾರಿಯ ರಾ ಮೆಟೀರಿಯಲ್, ಕ್ರಷರ್‌ನ ಉತ್ಪನ್ನಗಳ ಮಾರಾಟಕ್ಕೆ ಎಲ್ಲದಕ್ಕೂ ಜಿಎಸ್‌ಟಿ/ರಾಯಲ್ಟಿ/ಎಂಡಿಪಿ ಹಾಕುತ್ತಿಲ್ಲ. ಹಿರೀಕಾಟಿ ಖನಿಜ ತನಿಖಾ ಠಾಣೆ ದಿನದ ೨೪ ಗಂಟೆ ಕಾರ್ಯ ನಿರ್ವಹಿಸಿದರೆ ಸರ್ಕಾರಕ್ಕೆ ಬರುವ ಆದಾಯ ಹೆಚ್ಚಾಗುತ್ತದೆ. ಆದರೀಗ ಆದಾಯ ಸೋರಿಕೆ ಆಗುತ್ತಿದೆ. ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುವವರ ಮೇಲೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡಲಿ ಎಂಬುದು ಜನರ ಆಗ್ರಹವಾಗಿದೆ.

ಕ್ರಷರ್‌ ಹಾಗೂ ಕ್ವಾರಿ ನಡೆಸುವ ಬಹುತೇಕರು ರಾಜಧನ ವಂಚಿಸುವುದೇ ಅವರ ನಿತ್ಯದ ಕೆಲಸವಾಗಿದೆ. ರಾಜಧನ ವಂಚನೆ ತಡೆಯಲು ಜಿಲ್ಲಾ ಟಾಸ್ಕ್‌ ಫೋರ್ಸ್‌ ಸಮಿತಿ ವಿಫಲವಾಗಿದೆ. ಕಾಟಾಚಾರಕ್ಕೆ ತಪಾಸಣೆ ನಡೆಯುತ್ತಿದೆ.

-ಸುರೇಶ್, ಗುಂಡ್ಲುಪೇಟೆ