ಹಿರೀಕಾಟಿ ಗ್ರಾಮಸ್ಥರಿಂದ ನಿದ್ರಾಭಾಗ್ಯ ನೀಡುವಂತೆ ಅಳಲು

| Published : Feb 12 2024, 01:30 AM IST

ಹಿರೀಕಾಟಿ ಗ್ರಾಮಸ್ಥರಿಂದ ನಿದ್ರಾಭಾಗ್ಯ ನೀಡುವಂತೆ ಅಳಲು
Share this Article
  • FB
  • TW
  • Linkdin
  • Email

ಸಾರಾಂಶ

ಹಿರೀಕಾಟಿ ಗ್ರಾಮಸ್ಥರ ಬೆಳಗಿನ ಜಾವದ ನಿದ್ರಾಭಂಗವಾಗದಂತೆ ತಾಲೂಕು ಆಡಳಿತ ಎಚ್ಚೆತ್ತು ಬೆಳಗಿನ ಜಾವ ಆರರ ಬಳಿಕ ಕ್ರಷರ್‌ ಕಲ್ಲು ಪುಡಿ ಮಾಡಲು ಖಡಕ್‌ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಶಾಸಕರೇ ಇತ್ತ ಗಮನಹರಿಸಿ । ಎಸ್‌ಎಲ್‌ವಿ ಕ್ರಷರ್‌ನಿಂದ ರಾತ್ರಿ ನಿದ್ರಾಭಂಗವಾಗುತ್ತಿದೆಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಹಿರೀಕಾಟಿ ಬಳಿ ಎಸ್‌ಎಲ್‌ವಿ ಕ್ರಷರ್‌ ರಾತ್ರಿ ನಿದ್ರಾಭಂಗವಾಗುತ್ತಿರುವ ಬಗ್ಗೆ ಕನ್ನಡಪ್ರಭ ನಿರಂತರ ವರದಿ ಪ್ರಕಟಿಸಿದ್ದು ಜೊತೆಗೆ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಅಧ್ಯಕ್ಷತೆಯಲ್ಲಿ ಹೊರೆಯಾಲ ಗ್ರಾಪಂ ಮಟ್ಟದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಗ್ರಾಮಸ್ಥರು ಸಲ್ಲಿಸಿದ ದೂರಿನ ಬಳಿಕ ರಾತ್ರಿ ಹತ್ತರ ಬಳಿಕ ಕ್ರಷರ್‌ ಸದ್ದು ನಿಂತಿತ್ತು.ಆದರೀಗ ಪ್ರತಿ ಬೆಳಗಿನ ಜಾವ ನಾಲ್ಕು ಗಂಟೆಗೆ ಮತ್ತೆ ಕ್ರಷರ್‌ ಕಲ್ಲು ಅರೆಯುತ್ತಿರುವುದರಿಂದ ಬೆಳಗಿನ ಜಾವದಲ್ಲಿ ನಿದ್ರಾಭಂಗವಾಗುತ್ತಿದೆ ಎಂದು ಗ್ರಾಮದ ಚಂದ್ರಶೇಖರ್‌ ಮತ್ತೆ ಕನ್ನಡಪ್ರಭದೊಂದಿಗೆ ಅಳಲು ತೋಡಿಕೊಂಡಿದ್ದು ರಾತ್ರಿ ಹತ್ತರ ಬಳಿಕವೂ ೧೦ ರಿಂದ ೧೫ ನಿಮಿಷದ ತನಕ ಕ್ರಷರ್‌ ಕೆಲಸ ಮಾಡುತ್ತಿದೆ ಎಂದರು. ಆಗ ಕ್ರಷರ್‌ನ ಸಿಬ್ಬಂದಿಗೆ ಫೋನ್‌ ಮಾಡಿದಾಗ ಕ್ರಷರ್‌ ಕಲ್ಲು ಅರೆಯುವುದನ್ನು ನಿಲ್ಲಿಸುತ್ತಾರೆ. ಆದರೆ ಫೋನ್‌ ಮಾಡದಿದ್ದರೆ ಕ್ರಷರ್‌ ಕಲ್ಲು ಅರೆಯುತ್ತಲೇ ಇರುತ್ತದೆ. ಫೋನ್‌ ಮಾಡಿ ಕ್ರಷರ್‌ ನಿಲ್ಲಿಸಿದ ಬಳಿಕ ನಿದ್ರೆಗೆ ಜಾರಿದರೆ ಬೆಳಗಿನ ಜಾವ ನಾಲ್ಕು ಗಂಟೆಗೆ ಕ್ರಷರ್‌ ಕಲ್ಲು ಪುಡಿ ಮಾಡಲು ಶುರು ಮಾಡಿದರೆ ಕ್ರಷರ್‌ ಸದ್ದಿಗೆ ಬೆಳಗಿನ ಜಾವಾ ನಿದ್ರಾಭಂಗವಾಗುತ್ತಿದೆ ಎಂದು ಆರೋಪಿಸಿದ್ದಾರೆ.ಶಾಸಕರ ಅಧ್ಯಕ್ಷತೆಯಲ್ಲಿ ಹೊರೆಯಾಲ ಗ್ರಾಪಂ ಮಟ್ಟದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಗ್ರಾಮಸ್ಥರ ದೂರಿಗೆ ಸ್ಪಂದಿಸಿ ತಹಸೀಲ್ದಾರ್‌ ಟಿ.ರಮೇಶ್‌ ಬಾಬು ರಾತ್ರಿ ಹತ್ತರ ಬಳಿಕ ಕ್ರಷರ್‌ ಕೆಲಸ ಮಾಡಿದ ಬಗ್ಗೆ ಜಿಪಿಎಸ್‌ ಫೋಟೋ ಸಮೇತ ದೂರು ನೀಡಿದರೆ ಕ್ರಷರ್‌ ಸೀಜ್‌ ಮಾಡುತ್ತೇನೆ ಎಂದು ಭರವಸೆ ಮಾತನ್ನು ಹೇಳಿದ್ದರು. ಕನ್ನಡಪ್ರಭ ವರದಿ ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ರಾತ್ರಿ ಹತ್ತರ ಬಳಿಕ ಕ್ರಷರ್‌ ಸದ್ದು ಮಾಡುತ್ತಿಲ್ಲ. ಬೆಳಗಿನ ಜಾವ ನಾಲ್ಕು ಗಂಟೆಗೆ ಸದ್ದು ಮಾಡಿ ಬೆಳಗಿನ ನಿದ್ರೆ ತೊಂದರೆಯಾಗಿದೆ ಎಂದು ಚಂದ್ರಶೇಖರ್‌ ಮತ್ತೆ ಹೇಳಿದ್ದಾರೆ.ಖಡಕ್‌ ಸೂಚನೆ ನೀಡಲಿ:ಹಿರೀಕಾಟಿ ಗ್ರಾಮಸ್ಥರ ಬೆಳಗಿನ ಜಾವದ ನಿದ್ರಾಭಂಗವಾಗದಂತೆ ತಾಲೂಕು ಆಡಳಿತ ಎಚ್ಚೆತ್ತು ಬೆಳಗಿನ ಜಾವ ಆರರ ಬಳಿಕ ಕ್ರಷರ್‌ ಕಲ್ಲು ಪುಡಿ ಮಾಡಲು ಖಡಕ್‌ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.