ವಿಜಯಪುರ: ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹಾಗೂ ಲಿಂಗಾಯತರ ಅಭಿವೃದ್ಧಿಗಾಗಿ ಆಗ್ರಹಿಸಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್‌ನಲ್ಲಿ 5 ದಿನಗಳಿಂದ ನಡೆಯುತ್ತಿರುವ ಲಿಂಗಾಯತ ಧರ್ಮ ಮಾನ್ಯತೆಯ ಅಮರಣಾಂತ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಶುಕ್ರವಾರ ಸ್ವಾಮೀಜಿಗಳು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.

ಬೀದರ ಜಿಲ್ಲೆಯ ಬಸವಕಲ್ಯಾಣದ ಡಾ.ಬಸವಪ್ರಭು ಸ್ವಾಮೀಜಿ, ಡಾ.ಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ಷಡಕ್ಷರಿ ಸ್ವಾಮೀಜಿಗಳು ಸ್ಥಳಕ್ಕೆ ಭೇಟಿ ಅಮರಾಣಂತ ಉಪವಾಸ ಕೂತಿರುವ ಸಾಗರ ಕೋರೆ, ಕಿರಣ ಬಿಜ್ಜರಗಿ, ಬಾಳಾಸಾಹೇಬ ತಂಗಡಿ, ಪ್ರಶಾಂತ ಅಂಕಲಗಿ, ಕುಶಾಲ ಬಿಜ್ಜರಗಿ, ಸಿದ್ದರಾಯ ಬಿರಾದಾರ ಮುಂತಾದವರಿಗೆ ಬಂಬಲ ವ್ಯಕ್ತಪಡಿಸಿದರು.