ಕನ್ನಡಪ್ರಭ ವಾರ್ತೆ ಹಾಸನ
ನಗರದ ಪ್ರಸಿದ್ಧ ಪ್ರೈಡ್ ಪಿಯು ಮತ್ತು ಪದವಿ ಕಾಲೇಜು ವಿದ್ಯಾರ್ಥಿನಿಯರಾದ ವರ್ಷಾ ಮತ್ತು ಡಿಂಪಲ್ ಅವರು ಜಾಗತಿಕ ಮಟ್ಟದ ಪ್ರತಿಷ್ಠಿತ ಯುಎಸ್ ಸಿಎಂಎ ಪರೀಕ್ಷೆ-1 ಮತು ಪರೀಕ್ಷೆ-2 ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿ ಕಾಲೇಜಿಗೆ ಹಾಗೂ ಹಾಸನ ಜಿಲ್ಲೆಗೆ ಅಪಾರ ಕೀರ್ತಿ ತಂದಿದ್ದಾರೆ.ಈ ಸಾಧನೆ ಕೇವಲ ಇವರ ವೈಯಕ್ತಿಕ ಯಶಸ್ಸು ಮಾತ್ರವಲ್ಲ, ಗ್ರಾಮೀಣ ಹಾಗೂ ನಗರ ಭಾಗದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಅವಕಾಶಗಳನ್ನು ನೀಡುತ್ತಿರುವ ನಮ್ಮ ಕಾಲೇಜಿನ ಗುಣಮಟ್ಟ ಮತ್ತು ಮಾರ್ಗದರ್ಶನದ ಪ್ರತಿಫಲವಾಗಿದೆ. ವಿಶೇಷವಾಗಿ, ಹಾಸನ ಜಿಲ್ಲೆಯಲ್ಲೇ ಈ ಸಾಧನೆಯನ್ನು ಸಾಧಿಸಿದ ವಿದ್ಯಾರ್ಥಿನಿಯರು ಇವರಿಬ್ಬರೇ ಎಂಬುದು ಹೆಮ್ಮೆಯ ವಿಷಯವಾಗಿದೆ.
ಯುಎಸ್ ಸಿಎಂಎ ಸರ್ಟಿಪೈಡ್ ಮೇನೆಜ್ಮೆಂಟ್ ಅಕೌಂಟೆಂಟ್ ಯುಎಸ್‌ಎ ಕೋರ್ಸ್ 150ಕ್ಕೂ ಹೆಚ್ಚು ದೇಶಗಳಲ್ಲಿ ಮಾನ್ಯತೆ ಪಡೆದಿದ್ದು, ಆರ್ಥಿಕ ಯೋಜನೆ ಫೈನಾನ್ಸಿ ಪ್ಲಾನಿಂಗ್, ವಿಶ್ಲೇಷಣೆ ಅನಾಲಿಸಸ್ ಮತ್ತು ತಂತ್ರಾತ್ಮಕ ನಿರ್ಧಾರಗಳಲ್ಲಿ ಪರಿಣತಿ ನೀಡುವ ಜಾಗತಿಕ ಅರ್ಹತೆಯಾಗಿದೆ. ಸಿಎಂಎ ಇಂಡಿಯಾ ಭಾರತೀಯ ಕಾಸ್ಟ್ ಅಕೌಂಟಿಂಗ್ ಮತ್ತು ತೆರಿಗೆ ವ್ಯವಸ್ಥೆಗೆ ಕೇಂದ್ರೀಕೃತವಾಗಿದ್ದರೆ, ಯು.ಎಸ್. ಸಿಎಂಎ ಜಾಗತಿಕ ಕಂಪನಿಗಳಲ್ಲಿ ಉನ್ನತ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಈ ಮಹತ್ವದ ಸಾಧನೆಯ ಹಿಂದೆ ವಿದ್ಯಾರ್ಥಿನಿಯರಾದ ವರ್ಷಾ ಮತ್ತು ಡಿಂಪಲ್ ಅವರ ಪರಿಶ್ರಮ, ಸಮರ್ಪಣೆ ಹಾಗೂ ದೃಢಸಂಕಲ್ಪದ ಜೊತೆಗೆ, ಕಾಲೇಜಿನ ಅನುಭವ ಸಂಪನ್ನ ಶಿಕ್ಷಕರ ಮಾರ್ಗದರ್ಶನವೂ ಪ್ರಮುಖ ಪಾತ್ರ ವಹಿಸಿದೆ. ಇವರ ಸಾಧನೆ ಇನ್ನಷ್ಟು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ, ಹಾಗೂ ಇವರ ಭವಿಷ್ಯ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಉಜ್ವಲವಾಗಲಿ ಎಂದು ಕಾಲೇಜಿನ ಆಡಳಿತ ಮಂಡಳಿ ಹಾರೈಸಿದೆ.