ಎಕ್ಸಲಂಟ್ ಕೋಚಿಂಗ್‌ನಿಂದ ಐತಿಹಾಸಿಕ ಸಾಧನೆ

| Published : May 25 2025, 03:44 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಪ್ರತಿ ವರ್ಷವೂ ಹೆಚ್ಚು ವಿದ್ಯಾರ್ಥಿಗಳನ್ನು ಸೈನಿಕ ಶಾಲೆಗಳಿಗೆ ಕಳುಹಿಸುವ ಎಕ್ಸಲೆಂಟ್ ಕೋಚಿಂಗ್ ಕ್ಲಾಸಿಸ್ ಈ ಬಾರಿಯೂ ಸಹ ಐತಿಹಾಸಿಕ ಸಾಧನೆಯ ಫಲಿತಾಂಶ ನೀಡಿದೆ. ರಾಜ್ಯಕ್ಕೆ ಎಂಟು ರ‍್ಯಾಂಕ್‌ಗಳನ್ನು ನೀಡಿದೆ. ಆ ಮೂಲಕ ಗುಣಮಟ್ಟದ ತರಬೇತಿಗೆ ಎಕ್ಸಲಂಟ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ: ಪ್ರತಿ ವರ್ಷವೂ ಹೆಚ್ಚು ವಿದ್ಯಾರ್ಥಿಗಳನ್ನು ಸೈನಿಕ ಶಾಲೆಗಳಿಗೆ ಕಳುಹಿಸುವ ಎಕ್ಸಲೆಂಟ್ ಕೋಚಿಂಗ್ ಕ್ಲಾಸಿಸ್ ಈ ಬಾರಿಯೂ ಸಹ ಐತಿಹಾಸಿಕ ಸಾಧನೆಯ ಫಲಿತಾಂಶ ನೀಡಿದೆ. ರಾಜ್ಯಕ್ಕೆ ಎಂಟು ರ‍್ಯಾಂಕ್‌ಗಳನ್ನು ನೀಡಿದೆ. ಆ ಮೂಲಕ ಗುಣಮಟ್ಟದ ತರಬೇತಿಗೆ ಎಕ್ಸಲಂಟ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.

2025-26ನೇ ಸಾಲಿನ ಅಖಿಲ ಭಾರತ ಸೈನಿಕ ಶಾಲೆಗಳ 6ನೇ ತರಗತಿಗೆ ನಡೆದ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಎಕ್ಸಲೆಂಟ್ ಕೋಚಿಂಗ್ ಕ್ಲಾಸಿನಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಒಟ್ಟು 300 ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ ಚಿರಂಜೀವಿ ಬಿ.ಜೆ. 288 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್, ಅರವ ಹೇಡ್ಡುರಶೆಟ್ಟಿ 287 ಅಂಕ ಪಡೆದು ರಾಜ್ಯಕ್ಕೆ ತೃತೀಯ ರ‍್ಯಾಂಕ್, ಸಾತ್ವಿಕ ಮೋಹಿತೆ 286 ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್, ಸಂಪ್ರೀತ ಪಾಟೀಲ 283 ಅಂಕ ಪಡೆದು ರಾಜ್ಯಕ್ಕೆ 6ನೇ ರ‍್ಯಾಂಕ್, ಅರ್ಣವ ಸಂಗಮ 282 ಹಾಗೂ ಸಾತ್ವಿಕ ಬಳಿಗಾರ 282 ಅಂಕ ಪಡೆದು ರಾಜ್ಯಕ್ಕೆ 7ನೇ ರ‍್ಯಾಂಕ್, ಖುಷಿ ರಾಠೋಡ 280 ಅಂಕಗಳನ್ನು ಪಡೆದು ರಾಜ್ಯಕ್ಕೆ 8ನೇ ರ‍್ಯಾಂಕ್, ಆದೀಶ ರಾಠೋಡ 279 ಹಾಗೂ ಪ್ರಣವ ಮದಭಾವಿ 279 ರಾಜ್ಯಕ್ಕೆ 9ನೇ ರ‍್ಯಾಂಕ್ ಹಾಗೂ ಪ್ರತೀಕ ಜಿದ್ದಿಮನಿ 278 ಅಂಕ ಪಡೆದು ರಾಜ್ಯಕ್ಕೆ 10ನೇ ರ‍್ಯಾಂಕ್ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಉಳಿದಂತೆ ಸ್ವರೂಪ ಕೊಕಟನೂರ 277, ಧನುಷ ಹೆಬ್ಬಾಳ 276, ಶ್ರೇಯಾ ತಳವಾರ 276, ಸಾಕ್ಷಿಗೌಡ ಪಾಟೀಲ 276, ರಿಶ್ಯಾನ್ ಬಗಲಿ 276, ಅಭಿಲಾಷೆ ಮಳಗಿ 276, ಅಕುಲ್ ಟಿ.ಎಸ್. 276, ಸ್ವರೂಪ ಶಿವೂರ 274, ರಾಜವರ್ಧನ ಪಾಟೀಲ 274, ಮನೋಜ ಅಮೇತಪ್ಪನವರ 273, ಸೂರ್ಯತೇಜಸ 273, ಆರ್ಷಿತಸಾಯಿ ಚವ್ಹಾಣ 273 ಅಂಕ ಪಡೆದು ದಾಖಲೆಯ ಫಲಿತಾಂಶ ನೀಡಿದ್ದಾರೆ.

ಒಟ್ಟು 87 ವಿದ್ಯಾರ್ಥಿಗಳು 250 ಕ್ಕಿಂತ ಹೆಚ್ಚು ಅಂಕ ಪಡೆದರೆ 341 ವಿದ್ಯಾರ್ಥಿಗಳು 200ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಗಣಿತದಲ್ಲಿ 1 ವಿದ್ಯಾರ್ಥಿ 150 ಕ್ಕೆ150. ಐ.ಕ್ಯೂ.ದಲ್ಲಿ 52 ವಿದ್ಯಾರ್ಥಿಗಳು, 50ಕ್ಕೆ 50 ಹಾಗೂ ಸಾಮಾನ್ಯ ಜ್ಞಾನದಲ್ಲಿ 5 ವಿದ್ಯಾರ್ಥಿಗಳು 50 ಕ್ಕೆ 50 ಅಂಕ ಪಡೆದಿದ್ದಾರೆ. ಈ ವರ್ಷ ಸುಮಾರು 400 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ದೇಶದ ವಿವಿಧ ಸೈನಿಕ ಶಾಲೆಗಳಿಗೆ ಪ್ರವೇಶ ಪಡೆಯುವ ಸಾಧ್ಯತೆಯಿದೆ.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಮಕ್ಕಳ ಸಾಧನೆಯನ್ನು ಶ್ಲಾಘಿಸಿದ್ದಾರೆ. ಎಕ್ಸಲಂಟ್ ತರಬೇತಿ ಕೇಂದ್ರವೂ ಗುಣಮಟ್ಟದ ತರಬೇತಿ ನೀಡಿ ಪಾಲಕರ ಕನಸನ್ನು ನನಸು ಮಾಡುತ್ತಿದೆ. ಅದಕ್ಕಾಗಿಯೇ ಪ್ರತಿ ವರ್ಷ ಉತ್ತಮ ಫಲಿತಾಂಶ ನೀಡುತ್ತಿದ್ದೇವೆ. ಉತ್ತಮ ಕಲಿಕಾ ವಾತಾವರಣದ ಜೊತೆಗೆ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಮುಂದೆ ಇನ್ನೂ ಹೆಚ್ಚಿನ ಸಾಧನೆಯನ್ನು ಮಕ್ಕಳು ಮಾಡುತ್ತಾರೆ ಎಂಬ ಭರವಸೆಯಿದೆ. ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ, ಅಣಿಗೊಳಿಸಿದ ಸಿಬ್ಬಂದಿಗೆ ಅನಂತ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.