ಸಾರಾಂಶ
ಸರ್ಪನಕಟ್ಟೆಯ ಯಲ್ವಡಿಯಲ್ಲಿ ನಡೆದ ಐತಿಹಾಸಿಕ ಕಂಬಳ ಮಹೋತ್ಸವಕ್ಕೆ ಕುಂಟುವಾಣಿ ಕೋಣನ ಕಂಬಳದ ರೂವಾರಿ ಹಿರಿಯ ಸೋಮಯ್ಯ ಗೊಂಡ ಅಂಕಣ ಉದ್ಘಾಟಿಸಿ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಭಟ್ಕಳ
ಸರ್ಪನಕಟ್ಟೆಯ ಯಲ್ವಡಿಯಲ್ಲಿ ನಡೆದ ಐತಿಹಾಸಿಕ ಕಂಬಳ ಮಹೋತ್ಸವಕ್ಕೆ ಕುಂಟುವಾಣಿ ಕೋಣನ ಕಂಬಳದ ರೂವಾರಿ ಹಿರಿಯ ಸೋಮಯ್ಯ ಗೊಂಡ ಅಂಕಣ ಉದ್ಘಾಟಿಸಿ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಯಲ್ವಡಿಕವೂರಿನ ಕಂಬಳವು ಅನಾದಿಕಾಲದಿಂದ ನಡೆದು ಬರುತ್ತಿದ್ದು, ಗ್ರಾಮೀಣ ಕ್ರೀಡೆ-ಸಂಸ್ಕೃತಿಗಳ ಸಂರಕ್ಷಣೆಗೆ ಇದು ಪ್ರಮುಖ ವೇದಿಕೆ ಆಗಿದೆ ಎಂದು ಹೇಳಿದರು.
41 ವರ್ಷಗಳಿಂದ ನಾನು ಕುಂಟವಾಣಿಯಲ್ಲಿ ಕೋಣನ ಕಂಬಳ ನಡೆಸುತ್ತಿದ್ದೇನೆ. ಯಲ್ವಡಿ ಕಂಬಳವೇ ನನಗೆ ಪ್ರೇರಣೆ ಎಂದು ಹೇಳಿದರು.ಉಡುಪಿ, ದ.ಕ., ಉ.ಕ. ಸೇರಿದಂತೆ ಹಲವಾರು ತಾಲೂಕುಗಳಿಂದ ಬಂದ ಕೋಣಗಳ ಭಾಗವಹಿಸುವಿಕೆಯಿಂದ ಕಂಬಳಗದ್ದೆ ಸಡಗರ-ಸಂತೋಷದಿಂದ ಕಂಗೊಳಿಸಿತು.ಸ್ಪರ್ಧಾ ಫಲಿತಾಂಶ:ಸಬ್ ಜೂನಿಯರ್ ವಿಭಾಗದಲ್ಲಿ ಸುಬ್ಬಯ್ಯ ನಾಯ್ಕ ಆಸಿಕಾನ ಅವರ ಕೋಣ ಪ್ರಥಮ, ಶಂಕುಮಾಸ್ತಿ ಸಂಕದ ಗುಂಡಿ ಶಿರೂರ ಅವರ ಕೋಣ ದ್ವಿತೀಯ, ಹಗ್ಗ ಜೂನಿಯರ್ ವಿಭಾಗದಲ್ಲಿ ದಿಗಂತ ಸಂಜು ಪೂಜಾರಿ ಅವರ ಕೋಣ ಪ್ರಥಮ, ಶಂಕರ್ ನಾಯ್ಕರ ಕೋಣ ದ್ವಿತೀಯ ಸ್ಥಾನ ಗಳಿಸಿತು.
ಹಲಗೆ ವಿಭಾಗದಲ್ಲಿ ಪಸ್ನಗ ಹೆಬ್ಬಾರ್ ಅವರ ಕೋಣ ಪ್ರಥಮ, ಶಂಕ ಮಹಾಸತಿ ಗೊರ್ಟೆ ಅರ ಕೋಣ ದ್ವಿತೀಯ ಸ್ಥಾನ ಗಳಿಸಿದೆ.ಓಟದಲ್ಲಿ 40ಕ್ಕೂ ಹೆಚ್ಚು ಕೋಣಗಳು ಭಾಗವಹಿಸಿ ಪ್ರೇಕ್ಷಕರ ಗಮನ ಸೆಳೆದವು. ಹಗ್ಗ ಜಗ್ಗಾಟ ಸೇರಿದಂತೆ ಹಲವು ಗ್ರಾಮೀಣ ಕ್ರೀಡೆಗಳ ಜಾತ್ರೆಯೂ ಗದ್ದೆಯಲ್ಲಿ ಜರುಗಿತು. ನೂರಾರು ಮಂದಿ ಪ್ರೇಕ್ಷಕರು ಹಾಜರಿದ್ದರು.ಕಾರ್ಯಕ್ರಮದಲ್ಲಿ ಕಂಬಳ ಸಮಿತಿಯ ಅಧ್ಯಕ್ಷ ಮಾದೇವ ಗೋಯ್ತಪ್ಪ ನಾಯ್ಕ, ಉಪಾಧ್ಯಕ್ಷ ವಾಸು ಮಾಸ್ತಿ ಗೊಂಡ, ಕಾರ್ಯದರ್ಶಿ ಸುಬ್ರಾಯ ನಂದಯ ನಾಯ್ಕ, ಮಾಸ್ತಯ್ಯ ನಂದಯ ನಾಯ್ಕ, ಮಂಜುನಾಥ ನಾಯ್ಕ ಕರಾವಳಿ, ಗೋಯ್ತಪ್ಪ ನಾಯ್ಕ ಯಲ್ವಡಿ, ಮಂಜುನಾಥ ನಾಯ್ಕ, ಮಾಸಿ ಬಿಂ ಗೊಂಡ ಸೇರಿದಂತೆ ಸಮಿತಿ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.;Resize=(128,128))
;Resize=(128,128))