ಇತಿಹಾಸ ಪ್ರಸಿದ್ಧ ಎಮ್ಮೆಮಾಡು ವಾರ್ಷಿಕ ಉರೂಸ್‌ಗೆ ಚಾಲನೆ

| Published : Apr 27 2024, 01:15 AM IST

ಇತಿಹಾಸ ಪ್ರಸಿದ್ಧ ಎಮ್ಮೆಮಾಡು ವಾರ್ಷಿಕ ಉರೂಸ್‌ಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಇತಿಹಾಸ ಪ್ರಸಿದ್ಧ ಮಖಾಂ ಉರೂಸ್‌ಗೆ ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಪಿ.ಎ.ಅಬೂಬಕ್ಕರ್ ಸಖಾಫಿ ಧ್ವಜಾರೋಹಣದ ಮೂಲಕ ಚಾಲನೆ ನೀಡಿದರು. ಬೆಳ್ತಂಗಡಿ ದಾರುಸ್ಸಲಾಂ ಚೇರ್ಮೆನ್ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ನೇತೃತ್ವ ವಹಿಸಿದ್ದರು. ಧ್ವಜಾರೋಹಣಕ್ಕೂ ಮೊದಲು ಸಾಮೂಹಿಕ ನಮಾಜಿನ ಬಳಿಕ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಎಮ್ಮೆಮಾಡು ಹಝ್ರತ್ ಸೂಫಿ ಶಹೀದ್(ರ) ಮತ್ತು ಸಯ್ಯುದ್ ಹಸನ್ ಸಖಾಫ್ ಹಳ್ರಮಿ(ರ) ಮಹಾನುಭಾವರ ಹೆಸರಿನಲ್ಲಿ ವರ್ಷಂಪ್ರತಿ ನಡೆಯುವ ಇತಿಹಾಸ ಪ್ರಸಿದ್ಧ ಮಖಾಂ ಉರೂಸ್‌ಗೆ ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಪಿ.ಎ.ಅಬೂಬಕ್ಕರ್ ಸಖಾಫಿ ಧ್ವಜಾರೋಹಣದ ಮೂಲಕ ಚಾಲನೆ ನೀಡಿದರು.

ಬೆಳ್ತಂಗಡಿ ದಾರುಸ್ಸಲಾಂ ಚೇರ್ಮೆನ್ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ನೇತೃತ್ವ ವಹಿಸಿದ್ದರು.

ಧ್ವಜಾರೋಹಣಕ್ಕೂ ಮೊದಲು ಸಾಮೂಹಿಕ ನಮಾಜಿನ ಬಳಿಕ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭ ಖತೀಬರು ಸೇರಿದಂತೆ ಜಮಾಅತ್‌ನ ಹಾಲಿ, ಮಾಜಿ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.ರಾತ್ರಿ 8 ಗಂಟೆಗೆ ಕೊಡಗು ನಾಇಬ್ ಖಾಝಿ ಅಬ್ದುಲ್ಲ ಫೈಝಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಎಮ್ಮೆಮಾಡು ಮುದರ್ರಿಸ್ ಹಂಝ ಸಖಾಫಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೆ.ಐ.ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ್ಲ ಪ್ರಶ್ನಂಙಳುಂ ಪರಿಹಾರವುಂ ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ.

ಎಮ್ಮೆಮಾಡು ಮಾಜಿ ಖತೀಬ ಸಯ್ಯಿದ್ ಅಬ್ದುಲ್ ಅಝೀಝ್ ಅಲ್ ಹೈದರೂಸಿ, ಹಾಫಿಳ್ ಜುನೈದ್ ಜಲಾಲಿ, ಎಮ್ಮೆಮಾಡು ಶಹೀದಿಯ ಅನಾಥಾಲಯ ಅಧ್ಯಕ್ಷ ಹಸೈನಾರ್ ಹಾಜಿ ಚಕ್ಕೇರ, ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಮಾಜಿ ಅಧ್ಯಕ್ಷ ಬಿ.ಎಂ.ಉಮರ್ ಮುಸ್ಲಿಯಾರ್ ಬೆಲಿಯತ್ ಕಾರಂಡ, ಹಸೈನಾರ್ ಹಾಜಿ ಚಂಬಾರಾಂಡ, ಮೂಸ ಹಾಜಿ ಚಂಬಾರಾಂಡ, ಹಂಸ ಮುಸ್ಲಿಯಾರ್ ಮಂಙರಿ, ಉಪಾಧ್ಯಕ್ಷ ಅಶ್ರಫ್ ಬೆಲಿಯತ್ ಕಾರಂಡ, ಪಡಿಯಾನಿ ಜಮಾಅತ್ ಅಧ್ಯಕ್ಷ ಇಬ್ರಾಹಿಂ ಮುಸ್ಲಿಯಾರ್, ಪಳ್ಳಿರಾಣೆ ಜಮಾಅತ್ ಅಧ್ಯಕ್ಷ ಇಬ್ರಾಹಿಂ, ಪಳಂಗೋಟು ಮಸೀದಿ ಇಮಾಂ ಮುತ್ತಲಿಬ್ ಮುಸ್ಲಿಯಾರ್ ಪಾಲ್ಗೊಳ್ಳಲಿದ್ದಾರೆ.