ಶಾಲಾ ಶಿಕ್ಷಕರ ತುಲಾಭಾರ ಮಾಡಿದ್ದು ಇತಿಹಾಸ

| Published : Sep 08 2025, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಹಲಸಂಗಿ ಮದುರಚನ್ನರ ಒಡನಾಡಿಯಾಗಿದ್ದ ನಬಿಪಟೇಲ್ ವಡಗೇರಿ ಶಿಕ್ಷಕರ ಸೇವೆ ಶ್ಲಾಘನೀಯವಾಗಿದ್ದು, ಶಿಕ್ಷಣದೊಂದಿಗೆ ಸಾಮಾಜಿಕ ರಂಗದಲ್ಲೂ ಉತ್ಕೃಷ್ಠ ಸೇವೆ ಸಲ್ಲಿಸಿ ಶಿಷ್ಯಬಳಗದ ಹೃದಯದಲ್ಲಿ ಅಜರಾಮರರಾಗಿದ್ದಾರೆ ಎಂದು ಹಿರಿಯ ಸಾಹಿತಿ ಸಿದ್ದಣ್ಣ ಲಂಗೋಟಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಹಲಸಂಗಿ ಮದುರಚನ್ನರ ಒಡನಾಡಿಯಾಗಿದ್ದ ನಬಿಪಟೇಲ್ ವಡಗೇರಿ ಶಿಕ್ಷಕರ ಸೇವೆ ಶ್ಲಾಘನೀಯವಾಗಿದ್ದು, ಶಿಕ್ಷಣದೊಂದಿಗೆ ಸಾಮಾಜಿಕ ರಂಗದಲ್ಲೂ ಉತ್ಕೃಷ್ಠ ಸೇವೆ ಸಲ್ಲಿಸಿ ಶಿಷ್ಯಬಳಗದ ಹೃದಯದಲ್ಲಿ ಅಜರಾಮರರಾಗಿದ್ದಾರೆ ಎಂದು ಹಿರಿಯ ಸಾಹಿತಿ ಸಿದ್ದಣ್ಣ ಲಂಗೋಟಿ ಹೇಳಿದರು.

ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಅಲ್‌ಹಜ್ ನಬಿಪಟೇಲ್ ವಡಗೇರಿಯವರ ಸಂಸ್ಮರಣ ಗ್ರಂಥ ವಡಗೇರಿ ನಮಃ, ಬಿ.ಆರ್.ಪೊಲೀಸ್‌ಪಾಟೀಲ ರಚಿಸಿದ ತುಲಾಭಾರ ಪ್ರಸಂಗ ಹಾಗೂ ತುಲಾಭಾರ ನಾಟಕ ಗ್ರಂಥಗಳ ಲೋಕಾರ್ಪಣೆ ಹಾಗೂ ಆದರ್ಶ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಸಮಾಜದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರನ್ನು ತುಲಾಭಾರ ಮಾಡಿರುವುದು ಇತಿಹಾಸ. ನುಡಿದಂತೆ ನಡೆದು ಇಡೀ ಜೀವನವೇ ಸಮಾಜ ಪರಿವರ್ತನೆಗಾಗಿ ಶ್ರಮಿಸಿದ್ದು,ಇಡೀ ಮನುಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಸ್ಮರಿಸಿದರು.

ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಭೊಮ್ಮಯ್ಯ ಹಾಗೂ ಮನಗೂಳಿ ಸಯ್ಯದ ಪೀರಾ ಆಶ್ರಮದ ಪೀಠಾಧಿಪತಿ ಎಫ್.ಎಚ್.ಇನಮಾದಾರ ಆಶಿರ್ವಚನ ನೀಡಿ, ಸಮಾಜದಲ್ಲಿ ಗುರುವಿನ ಸ್ಥಾನ ಶ್ರೇಷ್ಠವಾಗಿದ್ದು, ಮಾನವ ಜನಾಂಗ ಗೌರವಿಸುವ ವೃತ್ತಿ. ಗುರುಗಳು ಮಾಡಿದ ಸೇವೆಗೆ ಪ್ರತಿಯಾಗಿ ಅವರನ್ನು ಸ್ಮರಿಸಿ ಸಮಾಜಮುಖಿಯಾಗಲು ಸಹಕರಿಸುವುದು ಶ್ಲಾಘನೀಯ ಕಾರ್ಯ ಎಂದು ವಿವರಿಸಿದರು.

ವಡಗೇರಿ ನಮಃ ಗ್ರಂಥ ಪರಿಚಯ ಮಾಡಿದ ಪ್ರೊ.ಬಿ.ಆರ್.ಪೊಲೀಸ್‌ಪಾಟೀಲ, ತುಲಾಭಾರ ಪ್ರಸಂಗ ಗ್ರಂಥ ಪರಿಚಯಿಸಿದ ಡಾ.ವಿ.ಎಂ.ಬಾಗಾಯತ, ತುಲಾಭಾರ ನಾಟಕ ಪರಿಚಯ ಮಾಡಿದ ಡಾ.ಪಾಟೀಲ ಮಾತನಾಡಿದರು. ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಬಿ.ಎನ್.ವಡಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸಾಹಿತಿ ಆರ್.ಕೆ.ಕುಲಕರ್ಣಿ, ಡಾ.ಎಂ.ಎಸ್ ಮದಭಾವಿ, ಡಾ.ವ್ಹಿ.ಡಿ.ಐಹೊಳ್ಳಿ ಮಾತನಾಡಿದರು. ಹಿರಿಯ ಸಾಹಿತಿ ಪ್ರೊ..ಎನ್.ಜಿ.ಕರೂರ ಸಮಾರಂಭ ಉದ್ಘಾಟಿಸಿದರು. ಈ ವೇಳೆ ವಿವಿಧ ಕ್ಷೇತ್ರದ ಸಾಧಕರನ್ನು ಹಾಗೂ ಶಿಕ್ಷಣ ಕ್ಷೇತ್ರದ ಸಾಧಕರನ್ನು ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮಾಜಿ ಶಾಸಕ ಅಶೋಕ ಶಾಬಾದಿ, ನಿವೃತ್ತ ನ್ಯಾಯಾಧೀಶ ಎ.ಎನ್.ಹಕೀಮ್, ಸಂಪಾದಕ ಮಂಡಳಿಯ ಡಾ.ಶ್ರೀಶೈಲ ತರಡಿ, ಜಗದೇವ ಗಲಗಲಿ, ಮಲ್ಲಪ್ಪ ಮದಭಾವಿ, ಇ.ರಾ.ಸಾರವಾಡ, ಕಬೂಲ್ ಕೊಕಟನೂರ, ಎಂ.ಜಿ.ಕಾಚೂರ, ಬಸನಗೌಡ ಛಾಯಾಗೋಳ, ಅಲ್ಲಮಪ್ರಭು ಗಲಗಲಿ, ಅದಿತಿ ಬಿದರಿ, ಮಂಜುನಾಥ ಅಲೇಗಾವಿ, ಜಿ.ಡಿ.ಕೊಟ್ನಾಳ, ಪಾಚಾರ್ಯ ಎ.ಎಸ್.ಪಾಟೀಲ, ಈರಣ್ಣ ಶಹಾಪೂರ, ಕೆ.ಎನ್.ಬಿರಾದಾರ, ಅಮೀನಪಟೇಲ ಕಾಚೂರ, ಡಾ.ಬಿ.ಎಂ.ಕೋರಬು, ಮಹಮ್ಮದ ಇರ್ಫಾನ ಸಾರವಾಡ, ಎಸ್.ಎಂ.ಶೇಖ, ಡಿ.ಕೆ.ದಾಸರ, ಬಿ.ಆರ್.ಬನಸೋಡೆ, ಬಿ.ಜಿ.ಚಿಮ್ಮಲಗಿ, ದರೆಪ್ಪ ಸಲಗರ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಎನ್.ಆರ್.ಕುಲಕರ್ಣಿ ಸೇರಿದಂತೆ ಹಲವರು ಇದ್ದರು.