ನಾಳೆಯಿಂದ ಇತಿಹಾಸ ರಾಷ್ಟ್ರೀಯ ಸಮ್ಮೇಳನ

| Published : Nov 07 2024, 11:48 PM IST

ನಾಳೆಯಿಂದ ಇತಿಹಾಸ ರಾಷ್ಟ್ರೀಯ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ನ.9, 10, 11ರಂದು 38ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.

ಹೊಸಪೇಟೆ: ಕರ್ನಾಟಕ ಇತಿಹಾಸ ಅಕಾಡೆಮಿ ಸಹಯೋಗದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನ.9, 10, 11ರಂದು 38ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ತಿಳಿಸಿದರು.

ವಿವಿಯ ಮಂಟಪ ಸಭಾಂಗಣದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಎಚ್.ಕೆ. ಪಾಟೀಲ್‌ ಸಮ್ಮೇಳನ ಉದ್ಘಾಟಿಸುವರು. ಶಾಸಕ ಎಚ್.ಆರ್. ಗವಿಯಪ್ಪ ‘ಇತಿಹಾಸ ದರ್ಶನ’ ಸಂಪುಟ ಬಿಡುಗಡೆಗೊಳಿಸುವರು. ಹಿರಿಯ ವಿದ್ವಾಂಸ ಡಾ.ಆರ್.ಶೇಷಶಾಸ್ತ್ರೀ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿ ಸದಸ್ಯರ ಪುಸ್ತಕಗಳನ್ನು ಬಿಡುಗಡೆಗೊಳಿಸುವರು ಎಂದು ಮಾಹಿತಿ ನೀಡಿದರು.

ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿ ಮಾತನಾಡಿ, ನ.11ರಂದು ಸಮಾರೋಪ ಸಮಾರಂಭದಲ್ಲಿ ಕೊಟ್ಟೂರು ಬಸವಲಿಂಗ ಶ್ರೀ ಪಿಎಚ್‌ಡಿ ಮತ್ತು ಡಿ.ಲಿಟ್ ಪದವೀಧರ ಸದಸ್ಯರಿಗೆ ಪ್ರಶಸ್ತಿ ಪ್ರದಾನಿಸಲಿದ್ದಾರೆ. 3 ದಿನಗಳ ಕಾರ್ಯಕ್ರಮದಲ್ಲಿ ಎರಡು ವೇದಿಕೆಯಲ್ಲಿ ಸಂಶೋಧನಾ ಗೋಷ್ಠಿಗಳು ಜರುಗಲಿವೆ ಎಂದರು.ಪ್ರಶಸ್ತಿಗಳು:

‘ಇತಿಹಾಸ ಸಂಸ್ಕೃತಿ ಶ್ರೀ'''''''' ಪ್ರಶಸ್ತಿಗೆ ಪ್ರೊ.ಕೆ.ಆರ್. ನರಸಿಂಹನ್, ಡಾ.ಹರಿಹರ ಶ್ರೀನಿವಾಸ ರಾವ್‌ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಜೊತೆಗೆ ₹1 ಲಕ್ಷ ನಗದು ಪುರಸ್ಕಾರ ನೀಡಲಾಗುವುದು ಎಂದರು.

ಡಾ.ಬಾ.ರಾ.ಗೋಪಾಲ್ ಶಾಸನ ದತ್ತಿ ಪ್ರಶಸ್ತಿಗೆ ವಿಜಯಪುರದ ಡಾ.ಎಸ್.ಕೆ. ಕೊಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ₹10 ಸಾವಿರ ನಗದು ಪುರಸ್ಕಾರ ನೀಡಲಾಗುವುದು. ‘ನೊಳಂಬಶ್ರೀ'''''''' ಪ್ರಶಸ್ತಿಗೆ ಬೆಂಗಳೂರಿನ ಡಾ.ಟಿ.ವಿ. ನಾಗರಾಜ ಅವರನ್ನು ಆಯ್ಕೆ ಮಾಡಲಾಗಿದೆ. ₹10 ಸಾವಿರ ನಗದು ಪುರಸ್ಕಾರ ನೀಡಲಾಗುವುದು. ‘ಸಂಶೋಧನ ಶ್ರೀ'''''''' ಪ್ರಶಸ್ತಿಗೆ ಬೆಂಗಳೂರಿನ ಸಂಶೋಧಕ ಆದಪ್ಪ ಪಾಸೋಡಿ ಅವರನ್ನು ಆಯ್ಕೆ ಮಾಡಲಾಗಿದೆ. ₹25 ಸಾವಿರ ನಗದು ಪುರಸ್ಕಾರ ನೀಡಲಾಗುವುದು. ‘ನಾಯಕಶ್ರೀ'''''''' ಪ್ರಶಸ್ತಿಗೆ ಮೂಡುಬಿದಿರೆಯ ಹಿರಿಯ ವಿದ್ವಾಂಸ ಡಾ.ಪುಂಡಿಕ್ಯಾ ಗಣಪಯ್ಯ ಭಟ್ ಆಯ್ಕೆ ಮಾಡಲಾಗಿದೆ. ₹15 ಸಾವಿರ ನಗದು ಪುರಸ್ಕಾರ ಇದೆ. ‘ಸುಮಂಗಲ ಪಾಟೀಲ್‌ ಮಹಿಳಾ'''''''' ಪ್ರಶಸ್ತಿಗೆ ಬೆಂಗಳೂರು ಸಂಶೋಧಕಿ ಡಾ.ಸ್ಮಿತಾ ರೆಡ್ಡಿ ಆಯ್ಕೆ ಮಾಡಲಾಗಿದ್ದು, ₹10 ಸಾವಿರ ನಗದು ಪುರಸ್ಕಾರ ಒಳಗೊಂಡಿದೆ. ‘ಸೂರ್ಯ ಕೀರ್ತಿ'''''''' ಪ್ರಶಸ್ತಿಗೆ ನಾಗಮಂಗಲ ಸಂಶೋಧಕ ಮಹಮದ್ ಕಲೀಂಉಲ್ಲ ಆಯ್ಕೆ ಮಾಡಲಾಗಿದೆ. ‘ಡಾ.ಶ್ರೀನಿವಾಸ ಹಾವನೂರ ಸ್ಮರಣಾರ್ಥ'''''''' ಪ್ರಶಸ್ತಿಗೆ ಧಾರವಾಡದ ಡಾ.ಮಹೇಶಕುಮಾರ್ ಹ. ಪಾಟೀಲ ಆಯ್ಕೆ ಮಾಡಲಾಗಿದೆ. ‘ಡಾ.ಪ್ರತಿಭಾ ಚಿಣ್ಣಪ್ಪ ಸ್ಮರಣಾರ್ಥ’ ಪ್ರಶಸ್ತಿಗೆ ಬಾಗಲಕೋಟೆಯ ಡಾ.ಯಾದಪ್ಪ ಪರದೇಶಿ ಆಯ್ಕೆ ಮಾಡಲಾಗಿದೆ.

ಹುಲ್ಲೂರು ಶ್ರೀನಿವಾಸ ಜೋಯಿಸ ಸ್ಮಾರಕ ಅತ್ಯುತ್ತಮ ಗ್ರಂಥ ಪ್ರಶಸ್ತಿಗೆ ಚಿತ್ರದುರ್ಗದ ಡಾ.ಸಿ.ಎಂ.ತಿಪ್ಪೇಸ್ವಾಮಿರವರ ‘ರಕ್ಕಸದಂಗಡಿ ಕದನ'''''''' ಗ್ರಂಥವನ್ನು ಆಯ್ಕೆ ಮಾಡಲಾಗಿದೆ. ‘ಡಾ.ಎಂ.ಎಚ್.ಕೃಷ್ಣ ಮೆರಿಟ್ ಅವಾರ್ಡ್''''''''ಗೆ ತುಮಕೂರು ಹಿರಿಯ ವಿಜ್ಞಾನಿ ಬಿ.ಎಸ್.ಸೋಮಶೇಖರ್‌ರನ್ನು ಆಯ್ಕೆ ಮಾಡಲಾಗಿದೆ.

ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ, ಕರ್ನಾಟಕ ಇತಿಹಾಸ ಅಕಾಡೆಮಿ ಉಪಾಧ್ಯಕ್ಷ ಪ್ರೊ.ಲಕ್ಷಣ್ ತೆಲಗಾವಿ, ಅಧ್ಯಯನಾಂಗ ವಿಭಾಗದ ನಿರ್ದೇಶಕ ಡಾ.ಅಮರೇಶ್ ಯತಗಲ್, ಪ್ರಾಧ್ಯಾಪಕ ಡಾ.ಎಸ್.ವೈ.ಸೋಮಶೇಖರ್, ವಿವಿಯ ಡಾ. ಎ. ವೆಂಕಟೇಶ್‌, ಮಾಹಿತಿ ಕೇಂದ್ರದ ಉಪನಿರ್ದೇಶಕಿ ಡಾ.ಡಿ.ಮೀನಾಕ್ಷಿ ಇದ್ದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಮಾತನಾಡಿದರು.