ಕರ್ನಾಟಕ ದರ್ಶನ ಯೋಜನೆಯಿಂದ ಸ್ಥಳ ಇತಿಹಾಸ, ವೈಶಿಷ್ಟ್ಯಪರಿಚಯ: ಹಿರೇಕಲ್ಮಠ ಸ್ವಾಮೀಜಿ

| Published : Feb 02 2024, 01:02 AM IST

ಕರ್ನಾಟಕ ದರ್ಶನ ಯೋಜನೆಯಿಂದ ಸ್ಥಳ ಇತಿಹಾಸ, ವೈಶಿಷ್ಟ್ಯಪರಿಚಯ: ಹಿರೇಕಲ್ಮಠ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾಲ್ಯದ ದಿನಗಳಲ್ಲಿ ಬಡತನದಿಂದಾಗಿ ಅಕ್ಕಪಕ್ಕದ ಊರು ನೋಡುವುದೂ ಕಷ್ಟವಾಗಿತ್ತು. ಆದರೆ ಇಂದು ಸರ್ಕಾರ ಶಿಕ್ಷಣ ಮತ್ತು ಪ್ರವಾಸೋದ್ಯಮ ಇಲಾಖೆಗಳ ಸಹಯೋಗದಲ್ಲಿ ಬಡ ಮಕ್ಕಳು ನಾಡಿನ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಇತಿಹಾಸ, ವೈಶಿಷ್ಟ್ಯಗಳ ಪರಿಚಯ ಪಡೆದುಕೊಳ್ಳಲಿ ಎಂಬ ಉದ್ದೇಶದಿಂದ ಕರ್ನಾಟಕ ದರ್ಶನ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ದೇಶ ಸುತ್ತು - ಕೋಶ ಓದು ಎನ್ನುವ ಗಾದೆಯಂತೆ ಮನುಷ್ಯ ಪರಿಪೂರ್ಣವಾಗಬೇಕಾದರೆ ಕೇವಲ ಓದು ಸಾಕಾಗಲ್ಲ. ಜೊತೆಗೆ ಪ್ರವಾಸದ ಮೂಲಕ ಜಗತ್ತಿನ ಇತರೆ ಪ್ರದೇಶ ನೋಡಬೇಕು. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಕರ್ನಾಟಕ ದರ್ಶನ ಉತ್ತಮ ಯೋಜನೆಯಾಗಿದೆ ಎಂದು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸರ್ಕಾರಿ ಮತ್ತು ವಸತಿ ಶಾಲೆಗಳಲ್ಲಿ 8ನೇ ತರಗತಿ ಓದುತ್ತಿರುವ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಬಡ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಇಲಾಖೆ ಹಮ್ಮಿಕೊಂಡಿರುವ 2023-24ನೇ ಸಾಲಿನ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮದ ಬಸ್‌ಗೆ ಹಸಿರು ನಿಶಾನೆ ತೋರಿಸಿ ಮಾತನಾಡಿ

ಬಾಲ್ಯದ ದಿನಗಳಲ್ಲಿ ಬಡತನದಿಂದಾಗಿ ಅಕ್ಕಪಕ್ಕದ ಊರು ನೋಡುವುದೂ ಕಷ್ಟವಾಗಿತ್ತು. ಆದರೆ ಇಂದು ಸರ್ಕಾರ ಶಿಕ್ಷಣ ಮತ್ತು ಪ್ರವಾಸೋದ್ಯಮ ಇಲಾಖೆಗಳ ಸಹಯೋಗದಲ್ಲಿ ಬಡ ಮಕ್ಕಳು ನಾಡಿನ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಇತಿಹಾಸ, ವೈಶಿಷ್ಟ್ಯಗಳ ಪರಿಚಯ ಪಡೆದುಕೊಳ್ಳಲಿ ಎಂಬ ಉದ್ದೇಶದಿಂದ ಕರ್ನಾಟಕ ದರ್ಶನ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಂಜರಾಜ್, ಕರ್ನಾಟಕ ದರ್ಶನ ಕಾರ್ಯಕ್ರಮದಡಿ ನಾಲ್ಕು ದಿನಗಳ ಪ್ರವಾಸಕ್ಕೆ 108 ವಿದ್ಯಾರ್ಥಿಗಳು ಎರಡು ಬಸ್ ಗಳಲ್ಲಿ ತೆರಳುತ್ತಿದ್ದಾರೆ. ಹೊನ್ನಾಳಿಯಿಂದ ಹೊರಟು ತುಮಕೂರು ಸಿದ್ದಗಂಗಾ ಮಠ, ಬೆಂಗಳೂರು, ಮೈಸೂರು, ಶ್ರೀ ರಂಗಪಟ್ಟಣ ಬೇಲೂರು, ಹಳೆಬೀಡು, ಶಿವಮಸಮುದ್ರ, ಮೇಲುಕೋಟೆ, ಮುಂತಾದ ಪ್ರೇಕ್ಷಣೀಯ ಸ್ಥಳ ವೀಕ್ಷಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕ್ಷೇತ್ರ ಸಮನ್ವಯಾಧಿಕಾರಿ ತಿಪ್ಪೇಶಪ್ಪ, ದೈಹಿಕ ಶಿಕ್ಷಣ ಪರಿವೀಕ್ಷಕ ಈಶ್ವರಪ್ಪ, ಇಸಿಓ ಅರುಣ್, ಬಸವರಾಜಪ್ಪ, ಶಿಕ್ಷಕರಸಂಘದ ಪದಾಧಿಕಾರಿಗಳು ಇದ್ದರು.