ಎಚ್‌ಐವಿ ಸೊಂಕು ಹರಡುವಿಕೆ ಪ್ರಮಾಣ ವರ್ಷದಿಂದ ವರ್ಷ ಕಡಿಮೆಯಾಗುತ್ತಿದ್ದರೂ ಯುವ ಜನತೆಯಲ್ಲಿನ ಎಚ್ಐವಿ ಬಗೆಗಿನ ತಪ್ಪು ಮಾಹಿತಿ, ಬದಲಾಗುತ್ತಿರುವ ಲೈಂಗಿಕ ನಡುವಳಿಕೆಗಳು ಎಚ್ಐವಿ ಬಗೆಗಿನ ಆತಂಕ ಹಾಗೇ ಉಳಿದಿದೆ.
ಎಚ್‌ಐವಿ/ಏಡ್ಸ್ ಕುರಿತ ಉಪನ್ಯಾಸ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹೊನ್ನಾವರಎಚ್ಐವಿ ಸೊಂಕು ಹರಡುವಿಕೆ ಪ್ರಮಾಣ ವರ್ಷದಿಂದ ವರ್ಷ ಕಡಿಮೆಯಾಗುತ್ತಿದ್ದರೂ ಯುವ ಜನತೆಯಲ್ಲಿನ ಎಚ್ಐವಿ ಬಗೆಗಿನ ತಪ್ಪು ಮಾಹಿತಿ, ಬದಲಾಗುತ್ತಿರುವ ಲೈಂಗಿಕ ನಡುವಳಿಕೆಗಳು ಎಚ್ಐವಿ ಬಗೆಗಿನ ಆತಂಕ ಹಾಗೇ ಉಳಿದಿದೆ. ಲೈಂಗಿಕ ನಡುವಳಿಕೆಗಳು ಸುರಕ್ಷಿತವಾಗಿದ್ದರೆ ಎಚ್‌ಐವಿಯಿಂದ ದೂರ ಇರಲು ಸಾಧ್ಯ ಎಂದು ತಾಲೂಕ ಆಸ್ಪತ್ರೆಯ ಆಪ್ತ ಸಮಾಲೋಚಕ ವಿನಾಯಕ ಪಟಗಾರ ತಿಳಿಸಿದರು.
ಎಸ್.ಡಿ.ಎಂ ಪದವಿ ಕಾಲೇಜಿನಲ್ಲಿ ರೆಡ್ ರಿಬ್ಬನ್ ಕ್ಲಬ್ ಮತ್ತು ಐಕ್ಯೂಎಸಿ ಆಶ್ರಯದಲ್ಲಿ ಏರ್ಪಡಿಸಲಾದ ಎಚ್‌ಐವಿ/ಏಡ್ಸ್ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.ಮಾನವ ದೇಹದಲ್ಲಿ ಮಾತ್ರ ಬದುಕುಳಿಯಬಹುದಾದ ಎಚ್‌ಐವಿ ವೈರಸ್ ನಮ್ಮ ದೇಹಕ್ಕೆ ಸೇರಲು ಮುಖ್ಯವಾಗಿ ಅಸುರಕ್ಷಿತ ಲೈಂಗಿಕತೆ ಕಾರಣವಾಗಿದೆ. ಯುವಜನತೆ ಲೈಂಗಿಕ ನಡುವಳಿಕೆಗಳ ಬಗ್ಗೆ ಸದಾ ಜಾಗೃತವಾಗಿರಬೇಕು. ಲೈಂಗಿಕತೆ ವಿಚಾರದಲ್ಲಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಬಾರದು. ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದಾಗ ಅಪಾಯಕಾರಿ ಸಾಧ್ಯತೆ ಜಾಸ್ತಿ. ನಮ್ಮ ಆದ್ಯತೆಗಳು ಕುಟುಂಬಕ್ಕೆ ಆಗಿರಬೇಕು ಹೊರತು ಅತಿಯಾದ ಗೆಳತನಕ್ಕೆ ಅಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಚ್‌ಐವಿ ಪರೀಕ್ಷೆ ಉಚಿತವಾಗಿದ್ದು ರಕ್ತ ಪರೀಕ್ಷೆ ಮೂಲಕ ಎಚ್‌ಐವಿ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಇತ್ತೀಚೆಗೆ ಹೆಚ್ಚುತ್ತಿರುವ ಸಲಿಂಗತೆಯ ಬಗ್ಗೆ ಎಚ್ಚರಿಕೆ ಅಗತ್ಯ. ೨೦೩೦ರ ವೇಳೆಗೆ ಭಾರತ ಸರಕಾರದ ಆಶಯದಂತೆ ಹೊಸ ಎಚ್‌ಐವಿ ಸೊಂಕನ್ನು ಶೂನ್ಯಕ್ಕೆ ತರುವ ಕಾರ್ಯದಲ್ಲಿ ನಾವೆಲ್ಲ ಕೈಜೋಡಿಸೋಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜು ಪ್ರಾಂಶುಪಾಲ ಡಾ. ಡಿ.ಎಲ್. ಹೆಬ್ಬಾರ ಮಾತನಾಡಿ, ಇಂತಹ ಉಪನ್ಯಾಸ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ ಎಂದು ಹೇಳಿದರು. ರೆಡ್ ರಿಬ್ಬನ್ ಮುಖ್ಯಸ್ಥ ಡಾ. ಎಂ.ಜಿ. ಹೆಗಡೆ ಪ್ರಾಸ್ತವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಅಧ್ಯಾಪಕ ಡಾ. ಸುರೇಶ ಎಸ್. ವಂದಿಸಿದರು. ಪ್ರಾಧ್ಯಾಪಕ ಡಾ. ಜಿ.ಎನ್. ಭಟ್ಟ, ಎಸ್. ರಾಮನಾಥ ಭಟ್ ಉಪಸ್ಥಿತರಿದ್ದರು.