ಎಚ್‌ಕೆಇ ಚುನಾವಣೆ: ಶಶಿಲ್‌ ನಮೋಶಿ ತಂಡ ಗೆಲುವು

| Published : Mar 19 2024, 12:53 AM IST

ಎಚ್‌ಕೆಇ ಚುನಾವಣೆ: ಶಶಿಲ್‌ ನಮೋಶಿ ತಂಡ ಗೆಲುವು
Share this Article
  • FB
  • TW
  • Linkdin
  • Email

ಸಾರಾಂಶ

ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಎಂಎಲ್ಸಿ ಶಶಿಲ್ ಜಿ.ನಮೋಶಿ ಅವರು 617 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಸಂತೋಷ ಬಿಲಗುಂದಿ 502 ಮತ ಪಡೆದು ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಪ್ರತಿಷ್ಠಿತ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಎಂಎಲ್ಸಿ ಶಶಿಲ್ ಜಿ.ನಮೋಶಿ ಅವರು 617 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಸಂತೋಷ ಬಿಲಗುಂದಿ 502 ಮತ ಪಡೆದು ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದಾರೆ.

ಶರಣಬಸಪ್ಪ ಕಾಮರೆಡ್ಡಿ 249, ರಾಜಶೇಖರ ನಿಪ್ಪಾಣಿ 3 ಮತ ಪಡೆದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿ ಪರಾಭವಗೊಂಡರು. ಅಲ್ಲದೇ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹೈಕ ಶಿಕ್ಷಣ ಸಂಸ್ಥೆ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ ಅವರ ಪುತ್ರ ರಾಜು ಭೀಮಳ್ಳಿ 847 ಮತ ಪಡೆಯುವ ಮೂಲಕ ಅತೀ ಹೆಚ್ಚು ಮತಗಳ ದಾಖಲೆ ಗೆಲುವು ಪಡೆದಿದ್ದಾರೆ.

ನಮೋಶಿ ಪೇನಾಲ್‍ನಿಂದ ಕೈಲಾಸ್ ಪಾಟೀಲ್ (722), ಅರುಣಕುಮಾರ ಎಂ. ಪಾಟೀಲ್ (690), ಉದಯಕುಮಾರ ಎಸ್. ಚಿಂಚೋಳಿ (668), ರಜನೀಶ ವಾಲಿ (622), ಶರಣಬಸಪ್ಪಾ ಹರವಾಳ (538), ನಿಶಂತ ಎಲಿ (427) ಒಟ್ಟು ಆರು ಜನ ಕಾರ್ಯಕಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಸಂತೋಷ ಬಿಲಗುಂದಿ ಪೆನಾಲ್‍ದಿಂದ ಐದು ಜನ ಮತ್ತು ಡಾ.ಕಾಮರೆಡ್ಡಿ ಪೆನಾಲ್‍ನಿಂದ ಇಬ್ಬರು ಸದಸ್ಯರು ಆಯ್ಕೆಯಾಗಿದ್ದಾರೆ. ಬಿಲಗುಂದಿ ಪೆನಾಲ್‍ನಿಂದ ಆಯ್ಕೆಯಾದ ಸದಸ್ಯರು- ಡಾ.ಕಿರಣ ದೇಶಮುಖ 622, ಮಹಾದೇವಪ್ಪ ರಾಮಪುರೆ 614, ಡಾ.ನಾಗೇಂದ್ರ ಎಸ್. ಮಂಠಾಳೆ 567, ಸಾಯಿನಾಥ ಪಾಟೀಲ 530 ಮತ್ತು ಡಾ.ಅನೀಲಕುಮಾರ ಪಟ್ಟಣ 529 ಡಾ.ಕಾಮರೆಡ್ಡಿ ಪೆನಾಲ್‍- ನಾಗಣ್ಣ ಎಸ್. ಘಂಟಿ -508 ಮತ್ತು ಅನೀಲಕುಮಾರ ಎಸ್. ಮರಗೋಳ 494 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

ಒಂದು ಮತದಿಂದ ರೋಚಕ ಗೆಲುವು: ಕಾಮರೆಡ್ಡಿ ಪೆನಾಲ್‍ನಿಂದ ಕಾರ್ಯಕಾರಿ ಸಮತಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಅನೀಲಕುಮಾರ ಮರಗೋಳ ಕೇವಲ ಒಂದು ಮತದಿಂದ ಜಯಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಇಬ್ಬರು ಅಭ್ಯರ್ಥಿಗಳಾದ ಆನಂದ ದಂಡೋತಿ (493) ಮತ್ತು ವಿಜಯಕುಮಾರ ದೇಶಮುಖ (493) ಸಮಾನ ಮತಪಡೆದು ಪರಾಭವಗೊಂಡಿದ್ದಾರೆ.