ಕಾವೇರಿ ಕಾಲೇಜು ಗೋಣಿಕೊಪ್ಪ ವಿರುದ್ಧದ ಫೈನಲ್‌ ಪಂದ್ಯ ರೋಚಕವಾಗಿ ಸಾಗಿತು. ಪಂದ್ಯದ ಪೂರ್ಣ ಅವಧಿಯಲ್ಲಿ ಗೋಲು ರಹಿತವಾಗಿ ಮುಕ್ತಾಯಗೊಂಡಿತು. ಕೊನೆಗೆ ಪೆನಾಲ್ಟಿ ಶೂಟೌಟ್‌ನಲ್ಲಿ 3-1 ಗೋಲಿನಿಂದ ಪರಾಭವಗೊಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್‌ ಕಾಲೇಜು ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಕೂಡಿಗೆಯ ಡಿವೈಇಎಸ್‌ ಕ್ರೀಡಾಂಗಣದಲ್ಲಿ ಕುಶಾಲನಗರದ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಡೆಸಿದ ಪಂದ್ಯಾವಳಿಯಲ್ಲಿ ಪ್ರಥಮ ಸುತ್ತಿನಲ್ಲಿ ದ್ವಿತೀಯ ಬಿಕಾಂನ ದೇವ್ ಪೊನ್ನಣ್ಣ ಹೊಡೆದ ಗೋಲಿನೊಂದಿಗೆ ಸಂತ ಅಲೋಶಿಯಸ್ ಕಾಲೇಜನ್ನು ಮಣಿಸಿತು. ಸೆಮಿಫೈನಲ್‌ನಲ್ಲಿ ಕಳೆದ ವರ್ಷದ ಚಾಂಪಿಯನ್ ಕಾವೇರಿ ಕಾಲೇಜು ವಿರಾಜಪೇಟೆ ತಂಡದ ವಿರುದ್ಧ ಒಂದು ಗೋಲಿನಿಂದ ಗೆದ್ದಿತು. ಈ ಪಂದ್ಯದಲ್ಲಿ ದ್ವಿತೀಯ ಬಿಕಾಂನ ದೇವಯ್ಯ ಎನ್‌.ಬಿ. ಗೋಲು ಸಿಡಿಸಿದರು.

ಕಾವೇರಿ ಕಾಲೇಜು ಗೋಣಿಕೊಪ್ಪ ವಿರುದ್ಧದ ಫೈನಲ್‌ ಪಂದ್ಯ ರೋಚಕವಾಗಿ ಸಾಗಿತು. ಪಂದ್ಯದ ಪೂರ್ಣ ಅವಧಿಯಲ್ಲಿ ಗೋಲು ರಹಿತವಾಗಿ ಮುಕ್ತಾಯಗೊಂಡಿತು. ಕೊನೆಗೆ ಪೆನಾಲ್ಟಿ ಶೂಟೌಟ್‌ನಲ್ಲಿ 3-1 ಗೋಲಿನಿಂದ ಪರಾಭವಗೊಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು.

ಕಾಲೇಜಿನ ಪ್ರಾಂಶುಪಾಲರಾದ ಡಾ. ರೇಖಾ ಚಿಣ್ಣಪ್ಪ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.