ಕಾಲೇಜಿನ ದೈಹಿಕ ಶಿಕ್ಷಕ ನಿರ್ದೇಶಕ ಜೆ. ಭಾಸ್ಕರ ಮಾತನಾಡಿ ಇತ್ತೀಚೆಗೆ ಗ್ಲಾಸ್ಕೋದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಅಮೆರಿಕಾದಲ್ಲಿ ನಡೆದ ಬಿಸಿಟಿ ಟೂರ್ನಿಯಲ್ಲಿ ಗ್ರಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ ಪ್ರಶಸ್ತಿ ಗಳಿಸಿರುವುದು ಭಾರತದ ಹಿರಿಮೆಚ್ಚಿಸಿದೆ ಮುಂಬರುವ ಏಷ್ಯಾ ಕ್ರೀಡಾಕೂಟ ಮತ್ತು ೨೦೨೮ರಲ್ಲಿ ಅಮೆರಿಕಾ ದೇಶದಲ್ಲಿ ನಡೆಯಲಿರುವ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಸಹಾಯಕ ಪ್ರಾಧ್ಯಾಪಕ ಸಿದ್ಧರಾಜು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಹಾಕಿ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ ಕೀರ್ತಿ ಮೇಜರ್ ಧ್ಯಾನ್‌ಚಂದ್ ಅವರಿಗೆ ಸಲ್ಲುತ್ತದೆ ಎಂದು ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಎಂ. ಕೆ. ಮಂಜುನಾಥ್ ಹೇಳಿದರು.ಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಕಂಡ ಸರ್ವಕಾಲಿಕ ಶ್ರೇಷ್ಠ ಹಾಕಿ ಆಟಗಾರ ಅವರ ಸೇವೆ ಅನನ್ಯಾವಾದದ್ದು ೧೯೨೮, ೧೯೩೨, ಹಾಗೂ ೧೯೩೬ರ ಒಲಂಪಿಕ್ ಕ್ರೀಡಾಕೂಟದಲ್ಲಿ ಹಾಕಿಯಲ್ಲಿ ಭಾರತ ಚಿನ್ನದ ಪದಕ್ಕ ಗೆಲ್ಲುವಲ್ಲಿ ಧ್ಯಾನ್ಚಂದ್ ಅವರ ಆಟದ ಶೈಲಿ ಮುಖ್ಯವಾದದು ಇವರ ಜನ್ಮದಿನವಾದ ಆಗಸ್ಟ್ ೨೯ರಂದು ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ದಿನ ಎಂದು ದೇಶದಲ್ಲಿ ಆಚರಿಸಲಾಗುತ್ತದೆ ಭಾರತದ ಆಟಗಾರರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು. ಕಾಲೇಜಿನ ದೈಹಿಕ ಶಿಕ್ಷಕ ನಿರ್ದೇಶಕ ಜೆ. ಭಾಸ್ಕರ ಮಾತನಾಡಿ ಇತ್ತೀಚೆಗೆ ಗ್ಲಾಸ್ಕೋದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಅಮೆರಿಕಾದಲ್ಲಿ ನಡೆದ ಬಿಸಿಟಿ ಟೂರ್ನಿಯಲ್ಲಿ ಗ್ರಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ ಪ್ರಶಸ್ತಿ ಗಳಿಸಿರುವುದು ಭಾರತದ ಹಿರಿಮೆಚ್ಚಿಸಿದೆ ಮುಂಬರುವ ಏಷ್ಯಾ ಕ್ರೀಡಾಕೂಟ ಮತ್ತು ೨೦೨೮ರಲ್ಲಿ ಅಮೆರಿಕಾ ದೇಶದಲ್ಲಿ ನಡೆಯಲಿರುವ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಸಹಾಯಕ ಪ್ರಾಧ್ಯಾಪಕ ಸಿದ್ಧರಾಜು ಮಾತನಾಡಿದರು. ಕಾಲೇಜಿನ ಹಿರಿಯ ಕಬ್ಬಡಿ ಕ್ರೀಡಾಪಟುಗಳಾದ ಎಂ. ಧನುಷ್ ಮತ್ತು ಕುಮಾರಿ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಕೆ. ಸುಬ್ರಹ್ಮಣ್ಯ, ಸಂತೋಷ್, ಸುನಿಲ್, ಅನಂತರಾಜು ಮತ್ತು ಬಸವರಾಜು ಬಹುಮಾನದ ಪ್ರಾಯೋಜಕತ್ವ ವಹಿಸಿಕೊಂಡಿದ್ದರು.ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಎಚ್. ಅರ್ಪಿತ, ಡಾ. ಬಿ. ಎನ್. ಚಂದ್ರಶೇಖರ್, ಡಾ. ಎನ್.ಟಿ ನಾಗರಾಜ, ನಿಂಗರಾಜು, ಎ. ಎನ್. ಶ್ರೀಧರ್, ನರಸಿಂಹಮೂರ್ತಿ, ಡಾ. ಎಂ. ನಿರೂಪಮಾ, ಆರ್ ಕೆ ಶಿವಪ್ಪ, ಕೆ. ಬಿ. ಪಾರ್ವತಮ್ಮ, ಪವನ್, ಜಿ. ಎಸ್. ಲೋಕೇಶ್, ಬೃಂದ, ಇಮ್ರಾನ್ ಶೇಕ್, ಕೆ. ಎಮ್. ರಾಧಮ್ಮ, ಶ್ವೇತಾ, ದೀಪಿಕಾ ಭಾಗವಹಿಸಿದ್ದರು.