ಸಾರಾಂಶ
ಗುಂಡ್ಲುಪೇಟೆಯಲ್ಲಿ ನಡೆದ ಪಂಚಾಯತ್ ಸಬಲೀಕರಣ ದಿನಾಚರಣೆ ಸಮಾರಂಭದಲ್ಲಿ ಕೊಡಗು ಜಿಲ್ಲೆಯ ಹೊದ್ದೂರು ಮತ್ತು ಹೊಸ್ಕೇರಿ ಗ್ರಾಮ ಪಂಚಾಯತಿ ಪಿಡಿಒ ಆಗಿರುವ ಎ.ಎ. ಅಬ್ದುಲ್ಲ ಅವರಿಗೆ ಅತ್ಯುತ್ತಮ ಪಿಡಿಒ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಬೆಂಗಳೂರು ವತಿಯಿಂದ ಕರ್ನಾಟಕ ಪಂಚಾಯತ್ ರಾಜ್ ಹರಿಕಾರ ಅಬ್ದುಲ್ ನಜೀರ್ ಸಾಬ್ ಜನ್ಮ ದಿನದ ಅಂಗವಾಗಿ ನಜೀರ್ ಸಾಬರ ಹುಟ್ಟೂರು ಗುಂಡ್ಲುಪೇಟೆಯಲ್ಲಿ ಪಂಚಾಯತ್ ಸಬಲೀಕರಣ ದಿನಾಚರಣೆ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಕೊಡಗು ಜಿಲ್ಲೆಯ ಹೊದ್ದೂರು ಮತ್ತು ಹೊಸ್ಕೇರಿ ಗ್ರಾಮ ಪಂಚಾಯತಿ ಪಿಡಿಒ ಆಗಿರುವ ಎ.ಎ. ಅಬ್ದುಲ್ಲ ಅವರಿಗೆ ಅತ್ಯುತ್ತಮ ಪಿಡಿಒ ಪ್ರಶಸ್ತಿಯ ನೀಡಿ ಗೌರವಿಸಲಾಯಿತು. ಈ ಸಂದರ್ಭ 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ ನಾರಾಯಣಸ್ವಾಮಿ , ಮಾಜಿ ಕಾನೂನು ಸಚಿವರಾದ ಜೆ.ಸಿ. ಮಾಧುಸ್ವಾಮಿ, ಡಿ.ಆರ್.ಪಾಟೀಲ್, ವೆಂಕಟರಾವ್ ವೈ ಘೋರ್ಪಡೆ, ಕಾಡ ಶೆಟ್ಟಹಳ್ಳಿ ಸತೀಶ್, ಗಣೇಶ್ ಪ್ರಸಾದ್, ಗುಂಡ್ಲುಪೇಟೆ ಶಾಸಕರು, ವಿಧಾನ ಪರಿಷತ್ ಸದಸ್ಯ ಡಾ. ತಿಮ್ಮಯ್ಯ ರಮೊದಲಾದವರು ಹಾಜರಿದ್ದರು. ಪಿಡಿಒ ಎ.ಎ. ಅಬ್ದುಲ್ಲ ಪ್ರಸ್ತುತ ಮಡಿಕೇರಿ ತಾಲೂಕಿನ ಹೊದ್ದೂರು ಮತ್ತು ಹೊಸ್ಕೇರಿ ಗ್ರಾಮ ಪಂಚಾಯತಿ ಪಿಡಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ 2010-2019ರ ವರೆಗೆ ವಿರಾಜಪೇಟೆ ತಾಲೂಕಿನ ಮಾಲ್ದಾರೆ, ಪಾಲಿಬೆಟ್ಟ ಗ್ರಾಪಂನಲ್ಲಿ ಪಿಡಿಒ ಆಗಿದ್ದರು. ಇವರು 2022ರ ರಾಜ್ಯ ಸರ್ಕರಾದ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದಿದ್ದಾರೆ. ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿ ಗ್ರಾಮದ ನಿವಾಸಿಯಾಗಿದ್ದು, ದಿವಂಗತ ಆಲಿಕುಟ್ಟಿ ಹಾಜಿ ಹಾಗೂ ಫಾತಿಮಾ ದಂಪತಿ ಪುತ್ರ.