ಜ್ಞಾನಯೋಗಾಶ್ರಮದಲ್ಲಿ ಧರ್ಮ ಧ್ವಜಾರೋಹಣ

| Published : Dec 26 2024, 01:02 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಶ್ರೀ ಸಿದ್ಧೇಶ್ವರ ಶ್ರೀಗಳು ಮಹಾತ್ಮರು, ಮಹಾತ್ಮರ ಶಕ್ತಿ, ಕುಗ್ಗುವಂತಹದಲ್ಲ, ನಾಶವಾಗುವಂತಹದ್ದಲ್ಲ ಅದು ಯಾವಾಗಲೂ ಬೆಳಗುವಂತಹದ್ದು ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ:

ಶ್ರೀ ಸಿದ್ಧೇಶ್ವರ ಶ್ರೀಗಳು ಮಹಾತ್ಮರು, ಮಹಾತ್ಮರ ಶಕ್ತಿ, ಕುಗ್ಗುವಂತಹದಲ್ಲ, ನಾಶವಾಗುವಂತಹದ್ದಲ್ಲ ಅದು ಯಾವಾಗಲೂ ಬೆಳಗುವಂತಹದ್ದು ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿಗಳು ಹೇಳಿದರು.

ನಗರದ ಜ್ಞಾನಯೋಗಾಶ್ರಮದಲ್ಲಿ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವ ಅಂಗವಾಗಿ ಧರ್ಮ ಧ್ವಜಾರೋಹಣದಲ್ಲಿ ಭಾಗವಹಿಸಿ ಮಾತನಾಡಿದ ರು. ಸಿದ್ಧೇಶ್ವರ ಶ್ರೀಗಳು ನೀಡಿರುವ ಜ್ಞಾನ ಕೇವಲ ಜಿಲ್ಲೆ, ರಾಜ್ಯದಲ್ಲಿ ಬೆಳಗುವುದಿಲ್ಲ ಅದು ಜಗತ್ತಿನ ಬೇರೆ ದೇಶಗಳಲ್ಲಿಯೂ ಬೆಳಗುತ್ತಿದೆ. ಅಪ್ಪಾವರ ಜ್ಞಾನವಾಣಿಯನ್ನು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿರುವ ಭಕ್ತರು ಅವರ ಯೂಟ್ಯೂಬ್ ಮೂಲಕ ಭಕ್ತಿಯಿಂದ ಆಲಿಸುತ್ತಾರೆ. ಈ ವರ್ಷ ಎಲ್ಲ ಭಕ್ತರು, ಪೂಜ್ಯರು, ಸಾಹಿತಿಗಳು ಗುರುನಮನ ಮಹೋತ್ಸವ ಆಚರಣೆಯ ಮೂಲಕ ಶ್ರದ್ಧೆಯನ್ನು ಅರ್ಪಿಸೋಣ ಎಂದರು.

ಯೋಗ ಗುರು ಸುಬ್ರಮಣ್ಯ ಮಾತನಾಡಿ, ಸಹಸ್ರಮಾನದ ಸಂತ ಸಿದ್ಧೇಶ್ವರ ಸ್ವಾಮೀಜಿಗಳು ಭಾರತೀಯ ಪರಂಪರೆಯಲ್ಲಿ ಹಿಂದೆ ಇದ್ದ ಋಷಿ ಮುನಿಗಳ ಪ್ರತಿಬಿಂಬವಾಗಿದ್ದರು. ಇಂದು ಅವರ ನುಡಿನಮನ ಮಹೋತ್ಸವ ಪ್ರಾರಂಭವಾಗಿದ್ದು ಎಲ್ಲರೂ ಭಾಗವಹಿಸಿ ಅವರ ಆಶೀರ್ವಾದಕ್ಕೆ ಪಾತ್ರರಾಗೋಣ ಎಂದು ಹೇಳಿದರು.

ಬಬಲೇಶ್ವರದ ಜಗದ್ಗುರು ಮಹಾದೇವ ಮಹಾಶಿವಾಚಾರ್ಯ ಮಾತನಾಡಿ, ಸಿದ್ಧೇಶ್ವರ ಸ್ವಾಮೀಗಳು ತಮ್ಮ ಪಾದ ಸ್ಪರ್ಶದಿಂದ ವಿಜಯಪುರ ಜನರ ಜೀವನ ಪಾವನಗೊಳಿಸಿದ್ದಾರೆ. ನಡೆದಾಡುವ ದೇವರು, ಮಾತನಾಡುವ ದೇವರು, ಶತಮಾನದ ಸಂತ ಎಂದು ಕರೆಯಿಸಿಕೊಂಡಿರುವ ಅಪ್ಪಾವರ ಸೇವೆ ಮಾಡುವ ಭಾಗ್ಯ ನಮಗೆ ಸಿಕ್ಕಿರುವುದು ನಮ್ಮ ಪುಣ್ಯ ಎಂದರು.

ಜ್ಞಾನಯೋಗಾಶ್ರಮದ ಹರ್ಷಾನಂದ ಸ್ವಾಮೀಜಿ, ಶ್ರದ್ಧಾನಂದ ಸ್ವಾಮೀಜಿ, ಆಶ್ರಮದ ಸರ್ವ ಪೂಜ್ಯರು, ಭಕ್ತರು ಉಪಸ್ಥಿತರಿದ್ದರು.