ಮಲೆಬೆನ್ನೂರಿನ ವಿವಿಧೆಡೆ ಧ್ವಜಾರೋಹಣ

| Published : Aug 16 2024, 12:50 AM IST

ಸಾರಾಂಶ

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳು ವಿವಿಧ ನಾಯಕರ ವೇಷಭೂಷಣ ತೊಟ್ಟು ಪಟ್ಟಣದ ರಾಜಬೀದಿಯಲ್ಲಿ ಮೆರವಣಿಗೆ ನಡೆಸಿ ಸಾರ್ವಜನಿಕರ ಗಮನ ಸೆಳೆದರು

ಕನ್ನಡಪ್ರಭ ವಾರ್ತೆ ಮಲೆಬೆನ್ನೂರು

ಇಲ್ಲಿನ ಪುರಸಭೆ ಆವರಣ, ಹಳೇ ವೃತ್ತದಲ್ಲಿ ಮುಖ್ಯಾಧಿಕಾರಿ ಭಜಕ್ಕನವರ್ ಮತ್ತು ನಾಡ ಕಚೇರಿ ಮುಂಭಾಗದಲ್ಲಿ ಉಪ ತಹಸೀಲ್ದಾರ್ ಆರ್.ರವಿ ಸ್ವಾತಂತ್ರೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಉಪ ನಿರೀಕ್ಷಕ ಪ್ರಭು ಕೆಳಗಿನಮನಿ, ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಪ್ರಾಚಾರ್ಯ ರಂಗಪ್ಪ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಡಳಿತ ವೈದ್ಯಾಧಿಕಾರಿ ಪ್ರಶಾಂತ್, ಕೃಷಿ ಕೇಂದ್ರದಲ್ಲಿ ಕೃಷಿ ಅಧಿಕಾರಿ ಇನಾಯತ್, ನೀರಾವರಿ ಇಲಾಖೆಯಲ್ಲಿ ಎಇಇ ಕೃಷ್ಣಮೂರ್ತಿ, ಮಾರುತಿ ಹಿ.ಪ್ರಾ.ಶಾಲೆಯಲ್ಲಿ ಪುರಸಭೆ ನಾಮಿನಿ ಸದಸ್ಯ ಟಿ.ಬಸವರಾಜ್ ಧ್ವಜಾರೋಹಣ ನೆರವೇರಿಸಿದರು. ವಿವಿಧ ಸರ್ಕಾರಿ ಕಚೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಧ್ವಜಾರೋಹಣ ನೆರವೇರಿಸಿ ವಿವಿಧ ಕಾರ್ಯಕ್ರಮಗಳು ಜರುಗಿದವು.

ಶ್ರೀ ರಂಗನಾಥಸ್ವಾಮಿ ಸಮಗ್ರ ಶಿಕ್ಷಣ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳು ವಿವಿಧ ನಾಯಕರ ವೇಷಭೂಷಣ ತೊಟ್ಟು ಪಟ್ಟಣದ ರಾಜಬೀದಿಯಲ್ಲಿ ಮೆರವಣಿಗೆ ನಡೆಸಿ ಸಾರ್ವಜನಿಕರ ಗಮನ ಸೆಳೆದರು. 10ನೇ ತರಗತಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿಲಾಯಿತು. ಸಂಸ್ಥೆ ಅಧ್ಯಕ್ಷರು, ಶಾಲಾ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರುಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

ಸಮೀಪದ ಕುಂಬಳೂರಿನ ಸ.ಪ.ಪೂ. ಕಾಲೇಜಿನಲ್ಲಿ ಸ್ವಾತಂತ್ರೋತ್ಸವ ನಿಮಿತ್ತ ಪ್ರಭಾರಿ ಪ್ರಾಚಾರ್ಯ ಹನುಮಂತಯ್ಯ, ಧೂಳೇಹೊಳೆ, ಕಡರನಾಯಕನ ಹಳ್ಳಿ, ಸ.ಹಿ.ಪ್ರಾ.ಶಾಲೆ, ಉಕ್ಕಡಗಾತ್ರಿ ಗ್ರಾಮದ ಶ್ರೀ ಕರಿಬಸವೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆ, ಕೊಕ್ಕನೂರು ಅಂಜನಾದೇವಿ ಹಿ.ಪ್ರಾ.ಶಾಲೆ, ನಂದಿತಾವರೆ ಗ್ರಾಮದ ಬಸವೇಶ್ವರ ಪ್ರೌಢಶಾಲೆಗಳಲ್ಲಿ ಧ್ವಜಾರೋಹಣ ನೆರವೇರಿಸಿ ಸಿಹಿ ಹಂಚಲಾಯಿತು.