ಸಭೆಗಳನ್ನು ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ

| Published : Mar 01 2025, 01:00 AM IST

ಸಭೆಗಳನ್ನು ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಯಡಿಯೂರಪ್ಪನವರು ಹಾಗೂ ನನ್ನ ವಿರುದ್ಧ ಕೆಲವರು ಲಿಂಗಾಯತ ಸಮಾಜ ಮುಖಂಡರೆಂದು ಸಭೆ ಕರೆದಿದ್ದರು. ಅದರಲ್ಲಿ ಕೆಲವು ಪ್ರಮುಖರನ್ನು ಬಿಟ್ಟರೆ ಉಳಿದವರು ಯಾರು ಅಂಥ ಅವರ ಬೀದಿ, ಕೇರಿಯಲ್ಲೂ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು. ಯಾರು ಸಭೆಯನ್ನು ಮಾಡ್ತಿದ್ದಾರೆ ಅವರು ಕೂರಿಸಿ ನಾನು ಮಾತನಾಡುತ್ತೇನೆ. ವಾತಾವರಣ ತಿಳಿಯಾಗುತ್ತಿರುವ ಸಂದರ್ಭದಲ್ಲಿ ಸಭೆಗಳನ್ನು ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ.‌ ನಮಗೂ ಕೂಡ ಯಾವುದೇ ರೀತಿಯ ಅನುಕೂಲ ಆಗಲ್ಲ ಎಂದರು.

ಹಾಸನ: ಇತ್ತೀಚಿಗೆ ಯಡಿಯೂರಪ್ಪನವರು ಹಾಗೂ ನನ್ನ ವಿರುದ್ಧ ಕೆಲವರು ಲಿಂಗಾಯತ ಸಮಾಜ ಮುಖಂಡರೆಂದು ಸಭೆ ಕರೆದಿದ್ದರು. ಅದರಲ್ಲಿ ಕೆಲವು ಪ್ರಮುಖರನ್ನು ಬಿಟ್ಟರೆ ಉಳಿದವರು ಯಾರು ಅಂಥ ಅವರ ಬೀದಿ, ಕೇರಿಯಲ್ಲೂ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವನ್ನು ಇಟ್ಟುಕೊಂಡು ನಾವು ಸಮಾಜದ ಮುಖಂಡರ ಸಭೆ ಕರೆಯುವುದು ಖಂಡಿತ ಸರಿಯಲ್ಲ. ಅವರು ಮಾಡ್ತಾರೆ ಅಂಥ ನಾವು ಮಾಡಿದ್ರೆ ನೋ ಎಂಡ್. ಬಿಜೆಪಿ ರಾಜ್ಯಾಧ್ಯಕ್ಷನಾಗಿ ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು. ಇಂತಹ ಸಭೆಗಳಿಗೆ ನೇರವಾಗಿ, ಪರೋಕ್ಷವಾಗಿ ಬೆಂಬಲ ಇಲ್ಲ, ರೇಣುಕಾಚಾರ್ಯ ಆದಿಯಾಗಿ ಎಲ್ಲರಿಗೂ ಒತ್ತಾಯ ಹಾಗೂ ಆಗ್ರಹವನ್ನು ಮಾಡುತ್ತೇನೆ.‌ ಈ ರೀತಿಯ ಸಭೆ ಮಾಡುವುದು ಶೋಭೆ ತರುವುದಿಲ್ಲ. ಅದರಿಂದ ಪಕ್ಷಕ್ಕಂತೂ ಲಾಭ ಆಗುವುದಿಲ್ಲ ಎನ್ನೋದು ಸತ್ಯ. ರೇಣುಕಾಚಾರ್ಯ ಅವರ ಜೊತೆ ವೈಯುಕ್ತಿಕವಾಗಿ ಮಾತನಾಡುತ್ತೇನೆ ಎಂದು ಹೇಳಿದರು. ಮೊದಲೇ ಪಕ್ಷದಲ್ಲಿ ಅನೇಕ‌ ಗೊಂದಲಗಳಿವೆ. ಗೊಂದಲಗಳ ಮಧ್ಯೆ ಹೊಸ ಗೊಂದಲಕ್ಕೆ ನಾಂದಿ ಹಾಡಬಾರದು. ಈ‌ ರೀತಿಯ ಸಭೆಗಳನ್ನು ಮಾಡಬಾರದು. ನಾನು ಇದರ ಬಗ್ಗೆ ಬಹಿರಂಗವಾಗಿ ಮಾತನಾಡಲು ಹೋಗಲ್ಲ. ಯಾರು ಸಭೆಯನ್ನು ಮಾಡ್ತಿದ್ದಾರೆ ಅವರು ಕೂರಿಸಿ ನಾನು ಮಾತನಾಡುತ್ತೇನೆ. ವಾತಾವರಣ ತಿಳಿಯಾಗುತ್ತಿರುವ ಸಂದರ್ಭದಲ್ಲಿ ಸಭೆಗಳನ್ನು ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ.‌ ನಮಗೂ ಕೂಡ ಯಾವುದೇ ರೀತಿಯ ಅನುಕೂಲ ಆಗಲ್ಲ ಎಂದರು.