ಪ್ಯಾಲೇಸ್ತೀನ್ ಧ್ವಜ ಹಿಡಿದು, ಇಸ್ರೇಲ್ ವಿರುದ್ಧ ಘೋಷಣೆ
KannadaprabhaNewsNetwork | Published : Nov 04 2023, 12:30 AM IST
ಪ್ಯಾಲೇಸ್ತೀನ್ ಧ್ವಜ ಹಿಡಿದು, ಇಸ್ರೇಲ್ ವಿರುದ್ಧ ಘೋಷಣೆ
ಸಾರಾಂಶ
ಸುಗಂಧ ದ್ರವ್ಯ ವ್ಯಾಪಾರಿ ಇತರರ ಬಗ್ಗೆ ಪೊಲೀಸ್ ಇಲಾಖೆ ಪರಿಶೀಲನೆ: ಎಸ್ಪಿ ಉಮಾ
* ಸುಗಂಧ ದ್ರವ್ಯ ವ್ಯಾಪಾರಿ ಇತರರ ಬಗ್ಗೆ ಪೊಲೀಸ್ ಇಲಾಖೆ ಪರಿಶೀಲನೆ: ಎಸ್ಪಿ ಉಮಾ ಕನ್ನಡಪ್ರಭ ವಾರ್ತೆ ದಾವಣಗೆರೆ ಐ ಸ್ಟ್ಯಾಂಡ್ ವಿತ್ ಪಾಲೇಸ್ತೀನ್ ಎಂಬ ಬರಹವಿದ್ದ ಪ್ಯಾಲೇಸ್ತೀನ್ ಧ್ವಜ ಹಿಡಿದು ನಗರದ ವಿವಿಧೆಡೆ ಸಂಚರಿಸುತ್ತಾ, ಪ್ಯಾಲೇಸ್ತೀನ್ ಗೆ ಬೆಂಬಲಿಸುವ ಜೊತೆಗೆ ಇಸ್ರೇಲ್ ವಿರುದ್ಧ ಘೋಷಣೆ ಕೂಗುತ್ತಾ ಸಾಗಿದ್ದ ವ್ಯಕ್ತಿಗಳು ಹಾಗೂ ಘಟನೆ ಬಗ್ಗೆ ಪೊಲೀಸ್ ಇಲಾಖೆ ಪರಿಶೀಲನೆ ನಡೆಸಿದೆ. ಇಲ್ಲಿನ ಆಜಾದ್ ನಗರದ ನಿವಾಸಿ, ಸುಗಂಧ ದ್ರವ್ಯ ವ್ಯಾಪಾರಿಯಾದ ಅಕ್ತರ್ ಮುನ್ನಾ(55 ವರ್ಷ) ಹಾಗೂ ಆತನ ಜೊತೆ ಮುಸ್ಲಿಂ ವ್ಯಕ್ತಿ ಸೇರಿದಂತೆ ಕೆಲವರು ಶುಕ್ರವಾರ ಮಧ್ಯಾಹ್ನ 2.30ರ ವೇಳೆ ಪ್ಯಾಲೇಸ್ತೀನ್ ದೇಶದ ರಾಷ್ಟ್ರ ಧ್ವಜ ಹಿಡಿದು, ಅದರಲ್ಲಿ ಐ ಸ್ಟ್ಯಾಂಡ್ ವಿತ್ ಪ್ಯಾಲೇಸ್ತೀನ್ ಎಂಬ ಬರಹ ಹೊಂದಿರುವ ಫ್ಲಾಗ್ ಹಿಡಿದು, ಇಸ್ರೇಲ್-ಪ್ಯಾಲೇಸ್ತೀನ್ ಯುದ್ಧದಲ್ಲಿ ಪ್ಯಾಲೇಸ್ತೀನ್ ಪರ ಬೆಂಬಲ ಘೋಷಿಸಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಪರಿಶೀಲನೆಗೆ ಮುಂದಾಗಿದೆ. ಆಜಾದ್ ನಗರದ ಬಳಿಯಿಂದ ನೂರಾನಿ ಮಸೀದಿ, ಇಮಾಂ ನಗರಗಳಲ್ಲೆಲ್ಲಾ ಸಂಚರಿಸಿದ ಅಕ್ತರ್ ಮುನ್ನಾ ಹಾಗೂ ಬೆಂಬಲಿಗರು ಇಸ್ರೇಲ್ ವಿರುದ್ಧ ಘೋಷಣೆ ಕೂಗುತ್ತಾ, ಪ್ಯಾಲೇಸ್ತೀನ್ ಬೆಂಬಲಿಸುತ್ತಾ ಸಾಗಿದ್ದು, ಸೋಷಿಯಲ್ ಮೀಡಿಯಾಗಳಲ್ಲೂ ಈ ಎಲ್ಲಾ ವಿಚಾರ ಹರಿದಾಡಿತ್ತು. ಪೊಲೀಸ್ ಇಲಾಖೆ ಗಮನಕ್ಕೆ ಈ ವಿಚಾರ ಬರುತ್ತಿದ್ದಂತೆ ಜಿಲ್ಲಾ ಪೊಲೀಸ್ ಇಲಾಖೆಯೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿರುವ ದಾವಣಗೆರೆ ನಗರದಲ್ಲಿ ಪ್ಯಾಲೇಸ್ತೀನ್ ಧ್ವಜದಲ್ಲಿ ಐ ಸ್ಟ್ಯಾಂಡ್ ವಿತ್ ಪ್ಯಾಲೇಸ್ತೀನ್ ಎಂಬುದಾಗಿ ಬರೆದಿರುವ ಪೋಸ್ಟರ್ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ. .......