ಗ್ರಾಮದೇವಿಯ ಉತ್ಸವದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮವನ್ನೂ ಜೋಡಿಸುವ ಮೂಲಕ ಹೊಳೆಗದ್ದೆಯ ಶಾಂತಿಕಾ ಪರಮೇಶ್ವರಿ ದೇವಿಯ ಉತ್ಸವವು ನೈಜ ಅರ್ಥದಲ್ಲಿ ಜನರ ಉತ್ಸವವಾಗಿದೆ.
ಶಾಂತಿಕಾಂಬಾ ಗೆಳೆಯರ ಬಳಗದಿಂದ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕುಮಟಾಗ್ರಾಮದೇವಿಯ ಉತ್ಸವದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮವನ್ನೂ ಜೋಡಿಸುವ ಮೂಲಕ ಹೊಳೆಗದ್ದೆಯ ಶಾಂತಿಕಾ ಪರಮೇಶ್ವರಿ ದೇವಿಯ ಉತ್ಸವವು ನೈಜ ಅರ್ಥದಲ್ಲಿ ಜನರ ಉತ್ಸವವಾಗಿದೆ. ಊರಿನಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳು ಸಾಮಾಜಿಕ ಬದಲಾವಣೆಗೆ ಬಹುಮುಖ್ಯ ಪಾತ್ರ ವಹಿಸಬಲ್ಲದು ಎಂದು ಹಳದೀಪುರ ಗ್ರಾಪಂ ಉಪಾಧ್ಯಕ್ಷ ಅಜಿತ ನಾಯ್ಕ ಹೇಳಿದರು.ಇತ್ತೀಚಿಗೆ ಹೊಳೆಗದ್ದೆ ಶಾಂತಿಕಾ ಪರಮೇಶ್ವರಿ ದೇವಿಯ ಉತ್ಸವ ಪ್ರಯುಕ್ತ ಸ್ಥಳೀಯ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಶಾಂತಿಕಾಂಬಾ ಗೆಳೆಯರ ಬಳಗ ಆಯೋಜಿಸಿದ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜೆಡಿಎಸ್ ಕಾರ್ಯಕಾರಿ ಸದಸ್ಯ ಸೂರಜ ನಾಯ್ಕ, ತಾಲೂಕಿಗೆ ಮಾದರಿಯಾಗುವ ನಿಟ್ಟಿನಲ್ಲಿ ಗೆಳೆಯರ ಬಳಗ ಪ್ರತಿ ವರ್ಷ ಕಾರ್ಯಕ್ರಮ ಸಂಘಟಿಸಿ ಊರಿಗೆ ಹಬ್ಬದ ರೂಪದಲ್ಲಿ ಆಚರಿಸುವ ವಿಶಿಷ್ಟ ಕಾರ್ಯಕ್ರಮ ಇದು ಎಂದರು.ಅಧ್ಯಕ್ಷತೆ ವಹಿಸಿದ್ದ ದೇವಗಿರಿ ಗ್ರಾಪಂ ಉಪಾಧ್ಯಕ್ಷ ಎಸ್.ಟಿ. ನಾಯ್ಕ ಮಾತನಾಡಿ, ಇಲ್ಲಿನ ಗೆಳೆಯರ ಬಳಗಕ್ಕೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇದೆ ಎಂದು ಶ್ಲಾಘಿಸಿದರು.
ಜಿಪಂ ಮಾಜಿ ಸದಸ್ಯ ಶಿವಾನಂದ ಹೆಗಡೆ, ಈ ಊರಿನಲ್ಲಿ ಕಲಾವಿದರಿಗೆ ಕೊರತೆ ಇಲ್ಲ. ದೇವತಾರಾಧನೆಯ ಜತೆಗೆ ಕಲಾರಾಧನೆ ಮೇಳೈಸಿದ್ದು, ಸಂಘಟಕರ ಹಿರಿಮೆಗೆ ಮೂಡಿದ ಗರಿಯಾಗಿದೆ ಎಂದರು.ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ.ಆರ್. ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಪಂಚಾಯಿತಿ ಸದಸ್ಯರಾದ ಪಾಂಡು ಪಟಗಾರ, ದೇವೇಂದ್ರ ಶೇರುಗಾರ, ನಾಗೇಶ ನಾಯ್ಕ, ನವೀನ ನಾಯ್ಕ, ಮಾಜಿ ಸದಸ್ಯರಾದ ಸುರೇಶ ಹರಿಕಂತ್ರ, ರಾಜು ನಾಯ್ಕ, ಉದ್ಯಮಿ ಸಚಿನ ನಾಯ್ಕ, ಬಾಬಣ್ಣ ಪೈ, ರಾಮದಾಸ ಪೈ, ರೈಲ್ವೆ ಅಧಿಕಾರಿ ಮಹೇಶ ನಾಯ್ಕ, ಗಣೇಶೋತ್ಸವ ಸಮಿತಿಯ ಜೆ.ಕೆ.ನಾಯ್ಕ, ನಾಗರಾಜ ಪಟಗಾರ, ಗೆಳೆಯರ ಬಳಗದ ಅಧ್ಯಕ್ಷ ಅಶೋಕ ಭಂಡಾರಿ, ರಾಮ ಮುಕ್ರಿ ಇನ್ನಿತರರು ಉಪಸ್ಥಿತರಿದ್ದರು.
ಪ್ರೀತೇಶ ಶಾನಭಾಗ ಪ್ರಾರ್ಥಿಸಿದರು. ಶಿಕ್ಷಕ ಪಿ.ಆರ್. ನಾಯ್ಕ ಸ್ವಾಗತಿಸಿದರು. ಶಿಕ್ಷಕ ಸುದೀಶ ನಾಯ್ಕ ವಂದಿಸಿದರು. ಶಿಕ್ಷಕ ಸುರೇಶ ನಾಯ್ಕ ನಿರ್ವಹಿಸಿದರು. ಆನಂತರ ತೆಕ್ಕಟೆ ಕಲಾವಿದರಿಂದ ರಸಮಂಜರಿ ಹಾಗೂ ವಾಚ್ ಮ್ಯಾನ್ ನಾಟಕ ಪ್ರದರ್ಶನ ನೆರೆದವರನ್ನು ರಂಜಿಸಿತು.