ಘಟಪ್ರಭದಲ್ಲಿ ಹೋಳಿ ಸಂಭ್ರಮ ಜೋರು

| Published : Mar 27 2024, 01:02 AM IST

ಸಾರಾಂಶ

ಘಟಪ್ರಭಾ: ಪಟ್ಟಣದಲ್ಲಿ ಸಂಭ್ರಮ ಹಾಗೂ ಸಡಗರದಿಂದ ಬಣ್ಣಗಳ ಹಬ್ಬ ಹೋಳಿ ಹಬ್ಬವನ್ನು ಆಚರಿಸಲಾಯಿತು. ತರಹೇವಾರಿ ತರಹದ ಬಣ್ಣಗಳನ್ನು ಎರಚುವ ಮೂಲಕ ಯುವಕ- ಯುವತಿಯರು, ಮಕ್ಕಳು ಹೋಳಿ ಹಬ್ಬದ ಶುಭಾಶಯ ಹೇಳುತ್ತ ಹಬ್ಬ ಆಚರಣೆಯಲ್ಲಿ ತೊಡಗಿದ್ದರು. ಹೋಳಿ ಹುಣ್ಣಿಮೆಗೆ ಭಾನುವಾರದ ರಾತ್ರಿಯಿಂದಲೇ ಹಲಗೆ, ತಮಟೆ, ಬಾರಿಸುವುದರ ಜೊತೆಗೆ ರಾತ್ರಿಯೆಲ್ಲಾ ಜಾಗರಣೆ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಘಟಪ್ರಭಾ

ಪಟ್ಟಣದಲ್ಲಿ ಸಂಭ್ರಮ ಹಾಗೂ ಸಡಗರದಿಂದ ಬಣ್ಣಗಳ ಹಬ್ಬ ಹೋಳಿ ಹಬ್ಬವನ್ನು ಆಚರಿಸಲಾಯಿತು. ತರಹೇವಾರಿ ತರಹದ ಬಣ್ಣಗಳನ್ನು ಎರಚುವ ಮೂಲಕ ಯುವಕ- ಯುವತಿಯರು, ಮಕ್ಕಳು ಹೋಳಿ ಹಬ್ಬದ ಶುಭಾಶಯ ಹೇಳುತ್ತ ಹಬ್ಬ ಆಚರಣೆಯಲ್ಲಿ ತೊಡಗಿದ್ದರು. ಹೋಳಿ ಹುಣ್ಣಿಮೆಗೆ ಭಾನುವಾರದ ರಾತ್ರಿಯಿಂದಲೇ ಹಲಗೆ, ತಮಟೆ, ಬಾರಿಸುವುದರ ಜೊತೆಗೆ ರಾತ್ರಿಯೆಲ್ಲಾ ಜಾಗರಣೆ ಮಾಡಲಾಗಿತ್ತು. ಬೆಳ್ಳಿಗ್ಗೆ ಕಾಮಣ್ಣ ದಹನ ಮಾಡುವ ಮೂಲಕ ಹೋಳಿ ರಂಗಿನಾಟಕ್ಕೆ ಚಾಲನೆ ನೀಡಲಾಯಿತು. ಪಟ್ಟಣದ ಹಲವು ಪ್ರದೇಶಗಳಲ್ಲಿ ವಿವಿಧ ಬಗೆಯ ಬಣ್ಣಗಳನ್ನು ಒಬ್ಬರ ಮೇಲೊಬ್ಬರು ಎರಚಿ ಮಹಿಳೆಯರು, ಯುವಕರು ಹೋಳಿ ಹಬ್ಬದ ಶುಭಾಶಯ ಕೋರಿ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು