ಕಮಲನಗರ ತಾಲೂಕಿನ ವಿವಿಧೆಡೆ ಸಂಭ್ರಮದ ಹೋಳಿ ಆಚರಣೆ

| Published : Mar 26 2024, 01:20 AM IST

ಸಾರಾಂಶ

ತಾಲೂಕಿನಾದ್ಯಂತ ಹೋಳಿ ಹುಣ್ಣಿಮೆಯನ್ನು ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಯುವಕ-ಯುವತಿಯರು ಗುಂಪು-ಗುಂಪಾಗಿ ಸಮೀಪದ ಗೆಳೆಯರ ಮನೆಗೆ ತೆರಳಿ ಬಣ್ಣ ಎರಚಿ ಸಂತಸಪಟ್ಟರು. ಬಣ್ಣ ಹಚ್ಚಿಕೊಂಡು ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದ ಯುವಕರ ಗುಂಪು ಹೋಳಿಗೆ ವಿಶೇಷ ಮೆರುಗು ತಂದುಕೊಟ್ಟಿತು.

ಕಮಲನಗರ: ತಾಲೂಕಿನಾದ್ಯಂತ ಹೋಳಿ ಹುಣ್ಣಿಮೆಯನ್ನು ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಬೆಳಗ್ಗೆಯಿಂದ ಮಕ್ಕಳು, ಯುವಕರು, ಮಹಿಳೆಯರು ಪರಸ್ಟರ ಬಣ್ಣ ಎರಚಿಕೊಂಡು ಸಂಭ್ರಮದಿಂದ ರಂಗಿನಾಟ ಆಚರಿಸಿದರು.

ಯುವಕ-ಯುವತಿಯರು ಗುಂಪು-ಗುಂಪಾಗಿ ಸಮೀಪದ ಗೆಳೆಯರ ಮನೆಗೆ ತೆರಳಿ ಬಣ್ಣ ಎರಚಿ ಸಂತಸಪಟ್ಟರು. ಬಣ್ಣ ಹಚ್ಚಿಕೊಂಡು ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದ ಯುವಕರ ಗುಂಪು ಹೋಳಿಗೆ ವಿಶೇಷ ಮೆರುಗು ತಂದುಕೊಟ್ಟಿತು.

ಮಾಜಿ ಗ್ರಾ.ಪಂ. ಅಧ್ಯಕ್ಷ ಶಿವರಾಜ ಝಲ್ಪೆ, ಗ್ರಾಪಂ ಸದಸ್ಯ ಬಾಲಾಜಿ ತೇಲಂಗೆ, ಮಹಾದೇವ ಠಾಕೂರ, ರಾಜಕುಮಾರ ಗಾಯಕವಾಡ, ಮುಖಂಡರಾದ ಶಿವಾನಂದ ವಡ್ಡೆ, ರಾಜಕುಮಾರ ಬಿರಾದಾರ, ನಾಗೇಶ ಪತ್ರೆ, ಡಾ. ರಾಜಕುಮಾರ ಬಿರಾದಾರ, ಬಾಲಾಜಿ ಬಿರಾದಾರ, ಸಂತೋಷ ಸೋಲ್ಲಾಪೂರೆ, ಶಿವಕುಮಾರ ಪಾಟೀಲ್, ಸಂಜುಕುಮಾರ ನಿಟ್ಟೂರೆ, ಮಹೇಶ ಸಜ್ಜನ, ವೀರೇಂದ್ರ ತೋರಣೆಕರ್, ಸಂತೋಷ ಸುಲಾಕೆ, ಶಿವಕುಮಾರ ನವಾಡೆ, ಶ್ಯಾಮ ಬಿರಾದಾರ ಹಾಗೂ ಅನೇಕರು ಇದ್ದರು.