ಯುದ್ಧವಾದರೆ ಭಾರತಕ್ಕೆ ಗೆಲುವಾಗಲೆಂದು ಹೋಮ, ಹವನ

| Published : May 02 2025, 12:12 AM IST

ಸಾರಾಂಶ

ಭಾರತ- ಪಾಕಿಸ್ತಾನ ಗಡಿಯಲ್ಲಿ ಯುದ್ಧದ ಕಾರ್ಮೋಡ ಕಾದಿದ್ದು, ಪಹಲ್ಗಾಂನಲ್ಲಿ ಗುಂಡಿನ ದಾಳಿಗೆ ಪ್ರತೀಕಾರಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ ಹಿನ್ನೆಲೆಯಲ್ಲಿ ಭಾರತದ ಯೋಧರಿಗೆ ಜಯ ಸಿಗಲೆಂದು ಪ್ರಾರ್ಥಿಸಿ ರಾಮದುರ್ಗ ತಾಲೂಕಿನ ಗೊಡಚಿ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ವೇಳೆ ವಿಶೇಷ ಪೂಜೆ ಹೋಮ ಹವನ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಹೋದರೆ ಗೆಲುವು ನಮ್ಮದಾಗಲಿ, ನಮ್ಮ ಭಾರತೀಯ ಯೋಧರಿಗೆ ಹೋಮದ ಮೂಲಕ ಒಳ್ಳೆಯದಾಗಲಿ ಎಂದು ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು. ಗುರುವಾರ ಗೊಡಚಿ ಗ್ರಾಮದಲ್ಲಿ ಮಾರುತಿ ದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ದ್ವಾರ ಬಾಗಿಲದ ಉದ್ಘಾಟನಾ ಕಾರ್ಯಕ್ರಮವಿತ್ತು. ಈ ಸಂದರ್ಭದಲ್ಲಿ ಮಾರುತಿ ದೇವರ ದೇವಸ್ಥಾನದಲ್ಲಿ ಶಾಸ್ತ್ರಿಗಳಾದ ಮುಪ್ಪಯ್ಯಸ್ವಾಮಿಗಳು, ಶಂಕ್ರಯ್ಯ ಸ್ವಾಮಿಗಳು, ಶಶಿಧರ ಸ್ವಾಮಿಗಳು ಮತ್ತು ವೀರೇಶ ಶಾಸ್ತ್ರಿಗಳ ನೇತೃತ್ವದಲ್ಲಿ ಹೋಮ ಕಾರ್ಯ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ದೇವರಿಗೆ ಹೋಮ ಮಾಡುವಾಗ ಉತ್ತಮ ಮಳೆ ಬೆಳೆಯಾಗಿ ನಾಡಿನ ರೈತರು ಸಂತೋಷವಾಗಿರಲಿ ಹಾಗೂ ಭಾರತ ಪಾಕಿಸ್ತಾನದ ನಡುವೆ ಯುದ್ಧ ಸಂಭವಿಸಿದರೇ ಭಾರತಕ್ಕೆ ಜಯವಾಗಲಿ ಎಂದು ಹೋಮ ಮಾಡಲಾಯಿತು.ಗ್ರಾಮದ ಮುಖಂಡರಾದ ಈರನಗೌಡ ಪಾಟೀಲ, ಬಸನಗೌಡ ಪಾಟೀಲ, ಶಿವಾನಂದ ಕಡಗದ ಶಹಜಾನಂದ ಭಾವನ್ನವರ ಮತ್ತು ಈರಣ್ಣ ಕಾಮನ್ನವರ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.