ನೂರಾರು ತಾಯಂದಿರಿಗೆ ಪಾದಪೂಜೆ ಮೂಲಕ ನಮನ

| Published : May 15 2024, 01:42 AM IST

ಸಾರಾಂಶ

ಅಮ್ಮ ದಿನದ ಅಂಗವಾಗಿ ಬಾಗಲಕೋಟೆ ನಗರದ ಭುವನೇಶ್ವರಿ ಕೋಚಿಂಗ್ ಸೇಟರ್ ವತಿಯಿಂದ ಅಮ್ಮ ನಮನ ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಜನ ತಾಯಂದಿರಿಗೆ ಮಕ್ಕಳು ಪಾದಪೂಜೆ ಮಾಡಿ ಆಶೀರ್ವಾದ ಪಡೆದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಗರದ ಭುವನೇಶ್ವರಿ ಕೋಚಿಂಗ್ ಸೆಂಟರ್ ವತಿಯಿಂದ ಸಕ್ರಿ ಹೈಸ್ಕೂಲ್ ಸಭಾಂಗಣದಲ್ಲಿ ಅಮ್ಮ ದಿನದ ಅಂಗವಾಗಿ ಅಮ್ಮ ನಮನ ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಜನ ತಾಯಂದಿರಿಗೆ ಮಕ್ಕಳು ಪಾದಪೂಜೆ ಮಾಡಿ ಆಶೀರ್ವಾದ ಪಡೆದರು.

ತಾಯಂದಿರನ್ನ ಖುರ್ಚಿ ಮೇಲೆ ಕೂರಿಸಿ ಅವರ ಪಾದವನ್ನ ಮಕ್ಕಳು ತೊಳೆದು ಪೂಜಿಸಿ ವಿಶೇಷ ನಮನ ಸಲ್ಲಿಸಿದರು, ಪಾದಪೂಜೆಯಲ್ಲಿ ಭಾಗಿಯಾಗಿ ಮಗನಿಂದ ಪಾದಪೂಜೆಗೊಳಪಟ್ಟ ಮುಸ್ಲಿಂ ತಾಯಿಯೊಬ್ಬಳು ಗಮನ ಸೆಳೆದಳು. ತಾಯಂದಿರಿಗೆ ಮಹಿಳೆಯರಿಂದ ಉಡಿ ತುಂಬವ ಕಾರ್ಯಕ್ರಮ ನಡೆಯಿತು.

ಇದೇ ಸಂದರ್ಭದಲ್ಲಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದು ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಮುತ್ತು ಅರಗಿಣಶೆಟ್ಟಿ, ವಿಶ್ವದಲ್ಲಿ ತಾಯಿಗಿಂತ ಮತ್ತೊಬ್ಬ ಶ್ರೇಷ್ಠ ವ್ಯಕ್ತಿಗಳಿಲ್ಲ, ತಾಯಿಗೆ ವಿಶೇಷ ನಮನ ಸಲ್ಲಿಸಬೇಕೆಂದೇ ನೂರಕ್ಕೂ ಅಧಿಕ ಜನ ತಾಯಂದಿರಿಗೆ ಪಾದಪೂಜೆ ಕಾರ್ಯಕ್ರಮ ನಡೆಸಲಾಯಿತು ಎಂದರು.