ಚನ್ನಪಟ್ಟಣ: ಮನೆಯೇ ಮಕ್ಕಳಿಗೆ ಮೊದಲ ಪಾಠಶಾಲೆ, ಪೋಷಕರೇ ಮೊದಲ ಗುರುಗಳು. ಹುಟ್ಟಿನಿಂದ ಮಕ್ಕಳು ಮನೆಯಲ್ಲೇ ಕಲಿಕೆ ಆರಂಭಿಸುವುದರಿಂದ ಪೋಷಕರು ಸದಾ ನಿಗಾ ವಹಿಸಬೇಕು ಎಂದು ರಾಮನಗರ ಡಯಟ್‌ನ ಹಿರಿಯ ಉಪನ್ಯಾಸಕರಾದ ಸ್ವರೂಪ ಹೇಳಿದರು.
ಚನ್ನಪಟ್ಟಣ: ಮನೆಯೇ ಮಕ್ಕಳಿಗೆ ಮೊದಲ ಪಾಠಶಾಲೆ, ಪೋಷಕರೇ ಮೊದಲ ಗುರುಗಳು. ಹುಟ್ಟಿನಿಂದ ಮಕ್ಕಳು ಮನೆಯಲ್ಲೇ ಕಲಿಕೆ ಆರಂಭಿಸುವುದರಿಂದ ಪೋಷಕರು ಸದಾ ನಿಗಾ ವಹಿಸಬೇಕು ಎಂದು ರಾಮನಗರ ಡಯಟ್‌ನ ಹಿರಿಯ ಉಪನ್ಯಾಸಕರಾದ ಸ್ವರೂಪ ಹೇಳಿದರು.
ತಾಲೂಕಿನ ಚಕ್ಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವತಿಯಿಂದ ಆಯೋಜಿಸಿದ್ದ ಪೋಷಕರ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳ ಆಸಕ್ತಿ, ಆದ್ಯತೆ ಹಾಗೂ ಭವಿಷ್ಯದ ಕನಸುಗಳನ್ನು ಅರಿತು, ಬಾಲ್ಯದಲ್ಲಿಯೇ ಪೂರಕ ವಾತಾವರಣ ನಿರ್ಮಿಸಿಕೊಡುವ ಜವಾಬ್ದಾರಿ ಪೋಷಕರದ್ದೇ ಆಗಿರುತ್ತದೆ ಎಂದು ತಿಳಿಸಿದರು.ಶಾಲೆಯ ಮುಖ್ಯ ಶಿಕ್ಷಕ ಯೋಗೇಶ್ ಚಕ್ಕೆರೆ ಮಾತನಾಡಿ, ಪೋಷಕರು ಮಕ್ಕಳಿಗೆ ತಿದ್ದಿ ಬುದ್ಧಿ ಹೇಳಿ ಸರಿಯಾದ ಮಾರ್ಗದರ್ಶನ ನೀಡಿದರೆ, ಶಾಲಾ ಹಂತದಲ್ಲಿ ಶಿಕ್ಷಕರು ಅವರನ್ನು ಸರಿದಾರಿಯಲ್ಲಿ ಮುನ್ನಡೆಸಲು ಸಾಧ್ಯವಾಗುತ್ತದೆ. ಸೃಜನಶೀಲ ಕಲಿಕೆ ಮತ್ತು ಗುಣಮಟ್ಟದ ಶಿಕ್ಷಣ ದೊರೆತರೆ ಮಕ್ಕಳು ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು. ಪೋಷಕರು ಮಕ್ಕಳಿಗೆ ಸದಾ ಸಕಾರಾತ್ಮಕವಾಗಿ ಬೆಂಬಲ ನೀಡಬೇಕು ಎಂದು ಮನವರಿಕೆ ಮಾಡಿದರು.
ಪೋಷಕರ-ಶಿಕ್ಷಕರ ಸಭೆಯಲ್ಲಿ ಎಸ್ಸೆಸ್ಸೆಲ್ಸಿ ತರಗತಿಯ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯ ಬಗ್ಗೆ ಪೋಷಕರಿಗೆ ಸಮಗ್ರ ಮಾಹಿತಿ ನೀಡಲಾಯಿತು. ಶಾಲೆಯಲ್ಲಿ ಹಮ್ಮಿಕೊಂಡಿರುವ ಶೈಕ್ಷಣಿಕ ಹಾಗೂ ಸಹಪಠ್ಯ ಚಟುವಟಿಕೆಗಳ ಕುರಿತು ವಿವರಿಸಲಾಯಿತು. ಮಕ್ಕಳಿಗೆ ಮನೆಯಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಾಣ ಮಾಡುವಂತೆ, ಓದಿಗೆ ಪ್ರೋತ್ಸಾಹ ನೀಡುವಂತೆ ಹಾಗೂ ಪರೀಕ್ಷೆಯನ್ನು ಭಯವಿಲ್ಲದೆ ಸಂಭ್ರಮದಿಂದ ಸ್ವಾಗತಿಸಲು ಪೋಷಕರಿಗೆ ಸಲಹೆ ನೀಡಲಾಯಿತು.ಈ ಸಂದರ್ಭದಲ್ಲಿ ಶಿಕ್ಷಕರಾದ ಮಧುಸೂದನ್, ಲತಾ, ಪುಟ್ಟಮ್ಮ, ವಸಂತರಾಜ್, ಪ್ರಥಮ ದರ್ಜೆ ಸಹಾಯಕ ಶಶಿಕುಮಾರ್, ಎಸ್‌ಡಿಎಂಸಿ ಪದಾಧಿಕಾರಿಗಳಾದ ರಾಜು, ಧನಲಕ್ಷ್ಮಿ, ಪೋಷಕರು, ವಿದ್ಯಾರ್ಥಿಗಳಿದ್ದರು.
ಪೊಟೋ೪ಸಿಪಿಟಿ೧: :ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವತಿಯಿಂದ ಪೋಷಕರ ಸಭೆ ನಡೆಯಿತು.