ಸಾರಾಂಶ
ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯಲ್ಲಿ ಮಾತನಾಡಿ, ತುಮಕೂರು ಡಿಸಿ ಶುಭಕಲ್ಯಾಣ್ ಜೊತೆ 500 ರು. ಬೆಟ್ಟಿಂಗ್ ಕಟ್ಟಿ ಸೋತಿರುವುದಾಗಿ ತಿಳಿಸಿದರು.
ತುಮಕೂರು:
ತಾನು ಜಿಲ್ಲಾಧಿಕಾರಿ ಜೊತೆ ಬೆಟ್ಟಿಂಗ್‌ನಲ್ಲಿ 500 ರುಪಾಯಿ ಸೋತಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯಲ್ಲಿ ಮಾತನಾಡಿ, ತುಮಕೂರು ಡಿಸಿ ಶುಭಕಲ್ಯಾಣ್ ಜೊತೆ 500 ರು. ಬೆಟ್ಟಿಂಗ್ ಕಟ್ಟಿ ಸೋತಿರುವುದಾಗಿ ತಿಳಿಸಿದರು.
ಚಿಕ್ಕೋಡಿ-ವಿಜಯಪುರ ತಂಡದ ಫೈನಲ್ ಪಂದ್ಯದಲ್ಲಿ ಡಿಸಿ ಯವರ ಜೊತೆ ಚಿಕ್ಕೋಡಿ ಗೆಲ್ಲುತ್ತದೆ ಎಂದು 500 ರು. ಬೆಟ್ಟಿಂಗ್ ಕಟ್ಟಿದ್ದೆ. ಚಿಕ್ಕೋಡಿ ಚೆನ್ನಾಗಿ ಆಡಿದರು ಅಂತಿಮವಾಗಿ ವಿಜಯಪುರ ಗೆದ್ದಿತು. ಬೆಟ್ಟಿಂಗ್ ಕಟ್ಟಿ 500 ರು. ಹಣ ಕಳೆದುಕೊಂಡೆ ಎಂದ ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದರು.