ಬಿಜೆಪಿ ಹಿರಿಯ ಹಾದಿ ಅನುಸರಿಸೋಣ: ಶಾಸಕ ವೇದವ್ಯಾಸ್‌ ಕಾಮತ್‌

| Published : Feb 05 2024, 01:46 AM IST

ಬಿಜೆಪಿ ಹಿರಿಯ ಹಾದಿ ಅನುಸರಿಸೋಣ: ಶಾಸಕ ವೇದವ್ಯಾಸ್‌ ಕಾಮತ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಹಿರಿಯ ಕಾರ್ಯಕರ್ತರ ಮನೆ ಭೇಟಿ ಅಭಿಯಾನದ ಅಂಗವಾಗಿ ಸ್ಥಳೀಯ ಹಿರಿಯ ಕಾರ್ಯಕರ್ತ ಚಂದ್ರಹಾಸ ಅವರ ಮನೆಗೆ ಭೇಟಿ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರ ತ್ಯಾಗ, ಪರಿಶ್ರಮದಿಂದ ಪಕ್ಷ ದೇಶದಾದ್ಯಂತ ಬಲಿಷ್ಠವಾಗಿ ಬೆಳೆದು ನಿಂತಿದ್ದು ಮಾತ್ರವಲ್ಲದೇ ಜಗತ್ತಿನಲ್ಲಿಯೇ ಅತಿ ದೊಡ್ಡ ಪಕ್ಷವಾಗಿ ಬೆಳೆದು ನಿಂತಿದೆ. ಇಂಥಹ ಸಂದರ್ಭದಲ್ಲಿ ಅವರೆಲ್ಲರನ್ನು ಸ್ಮರಿಸುವುದು, ಅವರು ತೋರಿದ ಹಾದಿಯಲ್ಲಿ ಸಾಗುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಹೇಳಿದರು.

ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಹಿರಿಯ ಕಾರ್ಯಕರ್ತರ ಮನೆ ಭೇಟಿ ಅಭಿಯಾನದ ಅಂಗವಾಗಿ ಸ್ಥಳೀಯ ಹಿರಿಯ ಕಾರ್ಯಕರ್ತ ಚಂದ್ರಹಾಸ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಈ ಮಾತು ಹೇಳಿದರು.ಜನಸಂಘದ ಕಾಲದಿಂದಲೂ ಪಕ್ಷದ ಕಾರ್ಯಕರ್ತರಾದ ಚಂದ್ರಹಾಸ ಮಾತನಾಡಿ, ತುರ್ತು ಪರಿಸ್ಥಿತಿಯ ಕರಾಳ ದಿನಗಳು, 1992ರ ಕರಸೇವೆ, ರಾಮ ಮಂದಿರ ನಿರ್ಮಾಣ ಹೋರಾಟ, ಬಿಜೆಪಿಯ ಆರಂಭಿಕ ದಿನಗಳಲ್ಲಿನ ಪಕ್ಷ ಸಂಘಟನೆ, ಸೇರಿದಂತೆ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದರು.

ಈ ಸಂದರ್ಭದಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಂಡಲದ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ,ಪಾಲಿಕೆ ಸದಸ್ಯರಾದ ಪೂರ್ಣಿಮಾ, ಗಣೇಶ್ ಕುಲಾಲ್, ಲೀಲಾವತಿ, ಜಯಲಕ್ಷ್ಮಿ ಶೆಟ್ಟಿ, ಲೋಕಸಭಾ ಚುನಾವಣೆಯ ಜಿಲ್ಲಾ ಸಂಚಾಲಕ ನಿತಿನ್ ಕುಮಾರ್, ರೂಪಾ.ಡಿ ಬಂಗೇರ, ರಾಜಗೋಪಾಲ್ ರೈ, ರಮೇಶ್ ಹೆಗ್ಡೆ ಮತ್ತಿತರರಿದ್ದರು.