ಸಾರಾಂಶ
ಎನ್.ಟಿ.ರಂಗನಾಥನ್ ಅವರು ವಿದ್ಯ ಪ್ರಚಾರ ಸಂಘದಲ್ಲಿ ಅಧ್ಯಾಪಕರಾಗಿ ಹಲವು ವರ್ಷಗಳ ಕಾಲ ಸೇವೆ ಮಾಡುವ ಮೂಲಕ ಸಾವಿರಾರು ಮಕ್ಕಳಿಗೆ ಉಜ್ವಲವಾದ ಭವಿಷ್ಯ ರೂಪಿಸಿದ್ದಾರೆ. ವಿದ್ಯಾ ಪ್ರಚಾರ ಸಂಘವು ಸ್ಥಾಪನೆಗೊಂಡು 75ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಈ ಕಾರ್‍ಯಕ್ರಮದಲ್ಲಿ ಎನ್.ಟಿ.ರಂಗನಾಥನ್ ಅವರನ್ನು ಅಭಿನಂಧಿಸಲಾಗುವುದು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಮನೆಗಳಲ್ಲಿ ಮಕ್ಕಳಿಗೆ ಒಳ್ಳೆಯ ಬುದ್ಧಿಮಾತು ಹೇಳುವಂತಹ ಗುರು-ಹಿರಿಯರು ಇದ್ದಾಗ ಮಾತ್ರ ಮಕ್ಕಳು ಸುಸಂಸ್ಕೃತರಾಗಿ ಉತ್ತಮ ಬದುಕು ನಡೆಸಲು ಸಾಧ್ಯ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕಸಾಪ, ಎನ್‌ಟಿಆರ್ ಅಭಿಮಾನಿ ಬಳಗದ ಸಹಯೋಗದಲ್ಲಿ ನಡೆದ ನಿವೃತ್ತ ಅಧ್ಯಾಪಕ ಎನ್.ಟಿ.ರಂಗನಾಥನ್ ಅವರ ಭರತ ಕೃತಿ ಲೋಕಾರ್ಪಣೆ ಹಾಗೂ ಎನ್‌ಟಿಆರ್ ಅವರ 95ರ ಸಂಭ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎನ್.ಟಿ.ರಂಗನಾಥನ್ ಅವರು ವಿದ್ಯ ಪ್ರಚಾರ ಸಂಘದಲ್ಲಿ ಅಧ್ಯಾಪಕರಾಗಿ ಹಲವು ವರ್ಷಗಳ ಕಾಲ ಸೇವೆ ಮಾಡುವ ಮೂಲಕ ಸಾವಿರಾರು ಮಕ್ಕಳಿಗೆ ಉಜ್ವಲವಾದ ಭವಿಷ್ಯ ರೂಪಿಸಿದ್ದಾರೆ. ವಿದ್ಯಾ ಪ್ರಚಾರ ಸಂಘವು ಸ್ಥಾಪನೆಗೊಂಡು 75ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಈ ಕಾರ್‍ಯಕ್ರಮದಲ್ಲಿ ಎನ್.ಟಿ.ರಂಗನಾಥನ್ ಅವರನ್ನು ಅಭಿನಂಧಿಸಲಾಗುವುದು ಎಂದರು.ಎನ್.ಟಿ.ರಂಗನಾಥನ್ ಅವರಂತಹ ಗುರುಗಳ ಆಶೀರ್ವಾದದಿಂದಲೇ ನಾನು ಈ ಕ್ಷೇತ್ರದಲ್ಲಿ ಮೂರುಬಾರಿ ಶಾಸಕನಾಗಿ, ಸಚಿವ, ಸಂಸದನಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ಹಾಗಾಗಿ ಪ್ರತಿಯೊಬ್ಬರು ವಿದ್ಯೆಕೊಟ್ಟಂತಹ ಗುರುಗಳನ್ನು ಗೌರವದಿಂದ ಕಾಣಬೇಕು ಎಂದರು.
ಇದೇ ವೇಳೆ ನಿವೃತ್ತ ಅಧ್ಯಾಪಕ ಎನ್.ಟಿ.ರಂಗನಾಥನ್ ಅವರು ಬರೆದ ಭರತ ಕೃತಿಯನ್ನು ವೈದ್ಯೆ ಸಾಹಿತಿ ಡಾ.ಎಚ್.ಆರ್. ಮಣಿಕರ್ಣಿಕಾ ಲೋಕಾರ್ಪಣೆ ಮಾಡಿದರು. ಪ್ರಾಧ್ಯಾಪಕ ಡಾ.ಎಚ್.ಆರ್.ತಿಮ್ಮೇಗೌಡ ಕೃತಿ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಎನ್.ಟಿ.ರಂಗನಾಥನ್ ಅವರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಭಾರತೀಯ ಸೇನೆಯ ನಿವೃತ್ತ ಗ್ರೂಪ್ ಕ್ಯಾಪ್ಟನ್ ಎನ್.ಆರ್.ರವಿ ಅವರನ್ನು ಅಭಿನಂದಿಸಲಾಯಿತು. ಎಸ್.ನಾಗರಾಜು, ಚಂದ್ರಶೇಖರಯ್ಯ, ಎಚ್.ಅರ್.ಧನ್ಯಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.