ಬಾಳೆಹೊನ್ನೂರುಸರ್ಪೇಸಿ ಕಾಯ್ದೆ ಬಗ್ಗೆ ನನಗೆ ಸಂಪೂರ್ಣ ಮಾಹಿತಿಯಿಲ್ಲ. ಆದರೆ ನಾನು ಇಂದು ಸಂಶೋಧನಾ ಕೇಂದ್ರದ ಕಾರ್ಯಕ್ರಮಕ್ಕೆ ಬರುವ ವೇಳೆ ಯುವಕನೊಬ್ಬ ಈ ಬಗ್ಗೆ ಗಮನ ಸೆಳೆದಿದ್ದು, ಸಂಪೂರ್ಣ ಮಾಹಿತಿ ಕೊಟ್ಟರೆ ನಾನು ಕೇಂದ್ರದಲ್ಲಿ ಚರ್ಚೆ ಮಾಡಿ ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭದಲ್ಲಿ ಕೇಂದ್ರ ಸಚಿವಕನ್ನಡಪ್ರಭ ವಾರ್ತೆ, ಬಾಳೆಹೊನ್ನೂ
ಸರ್ಪೇಸಿ ಕಾಯ್ದೆ ಬಗ್ಗೆ ನನಗೆ ಸಂಪೂರ್ಣ ಮಾಹಿತಿಯಿಲ್ಲ. ಆದರೆ ನಾನು ಇಂದು ಸಂಶೋಧನಾ ಕೇಂದ್ರದ ಕಾರ್ಯಕ್ರಮಕ್ಕೆ ಬರುವ ವೇಳೆ ಯುವಕನೊಬ್ಬ ಈ ಬಗ್ಗೆ ಗಮನ ಸೆಳೆದಿದ್ದು, ಸಂಪೂರ್ಣ ಮಾಹಿತಿ ಕೊಟ್ಟರೆ ನಾನು ಕೇಂದ್ರದಲ್ಲಿ ಚರ್ಚೆ ಮಾಡಿ ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ಸೋಮವಾರ ಆಯೋಜಿಸಿದ್ದ ಶತಮಾನೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ ಸರ್ಪೇಸಿ ಕಾಯ್ದೆ ಕಾಫಿ ಬೆಳೆಗಾರರಿಗೆ ಮಾರಕವಾಗಿರುವ ಬಗ್ಗೆ ತಿಳಿದು ಬಂದಿದ್ದು, ಬೆಳೆಗಾರರು ಪಡೆದ ಸಾಲ ಮರುಪಾವತಿ ಮಾಡದಿದ್ದರೆ ಬ್ಯಾಂಕುಗಳು ತೋಟ ಹರಾಜು ಹಾಕು ವುದು. ಯಾರು ಎಲ್ಲಿಯೋ ಕುಳಿತು ತೋಟಗಳನ್ನು ಹರಾಜಿನಲ್ಲಿ ಪಡೆಯಬಹುದು ಎಂಬ ಕಾಯ್ದೆಯಿದೆ ಎಂಬುದು ತಿಳಿದುಬಂದಿದೆ.ಈ ಕಾಯ್ದೆ ಬಗ್ಗೆ ನನಗೆ ಈವರೆಗೂ ಯಾರೂ ಮಾಹಿತಿ ನೀಡಿರಲಿಲ್ಲ. ಈಗ ತಿಳಿದಿದ್ದು, ಈ ಬಗ್ಗೆ ನಿಯೋಗ ಬಂದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ಕಾಫಿ ಬೆಳೆಗಾರರಿಗೆ ಶೇ.3 ಬಡ್ಡಿದರದಲ್ಲಿ ಬೆಳೆ ಸಾಲ ನೀಡಬೇಕು ಎಂದು ಕಾಫಿ ಮಂಡಳಿ ಅಧ್ಯಕ್ಷರು ಗಮನ ಸೆಳೆದಿದ್ದು, ನನ್ನ ಬಳಿಯಲ್ಲಿ ರಾಜ್ಯ ಸರ್ಕಾರದ ಅಧಿಕಾರವಿದ್ದಿದ್ದರೆ ಈ ಬಗ್ಗೆ ನಾನು ಕೇಂದ್ರದ ಬಳಿ ಯ ವರೆಗೂ ಹೋಗಲು ಬಿಡುತ್ತಿರಲಿಲ್ಲ. ಕೂಡಲೇ ಈ ಬಗ್ಗೆ ಆದೇಶ ಮಾಡುತ್ತಿದ್ದೆ. ಇದನ್ನು ಕಾರ್ಯರೂಪಕ್ಕೆ ತರಲು ಕಾಫಿ ಮಂಡಳಿ ಜೊತೆಗೆ ನಾನು ಸದಾ ಇದ್ದು, ನಿಯೋಗ ಬಂದರೆ ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಳಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.ಮಾನವ-ಪ್ರಾಣಿ ಸಂಘರ್ಷದ ಬಗ್ಗೆ ನಾನು ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ರೇಲ್ವೇ ಬ್ಯಾರಿಕೇಡ್ ನಿರ್ಮಿಸಲು ಆದೇಶ ನೀಡಿದ್ದೆ. ಬಳಿಕ ನನ್ನ ಅಧಿಕಾರವಧಿ ಮುಕ್ತಾಯದ ನಂತರ ಆ ಯೋಜನೆ ಸ್ಥಗಿತ ಗೊಳಿಸಿದ್ದಾರೆ. ಈ ಯೋಜನೆಗೆ ಕೇಂದ್ರದಲ್ಲೂ ಸಾಕಷ್ಟು ದುಡ್ಡಿದ್ದು, ಕೇಂದ್ರದ ಪರಿಸರ ಸಚಿವರಿಗೂ ಯೋಜನೆ ಜಾರಿಗೆ ತಿಳಿಸಿದ್ದೇನೆ. ವೈಜ್ಞಾನಿಕವಾಗಿ ಆರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.ಬೆಳೆಗಾರರಿಗೆ ಅನುಕೂಲವಾಗಲು ಹಾಸನದಲ್ಲಿ ರಸಗೊಬ್ಬರ ಉತ್ಪಾದನಾ ಘಟಕ ಆರಂಭಿಸಲು ಕೋರಿಕೆಯಿಟ್ಟಿದ್ದು, ಈ ಬಗ್ಗೆ ಜೆ.ಪಿ.ನಡ್ಡಾ ಬಳಿ ಚರ್ಚಿಸುವ ಭರವಸೆ ನೀಡಿದರು.ಒತ್ತುವರಿ ಸಮಸ್ಯೆ ಎರಡು ವರ್ಷ ಸುಮ್ಮನಿರಿ: ಅರಣ್ಯ ಒತ್ತುವರಿ ಸಮಸ್ಯೆ ನಿವಾರಿಸಲು ಕೋರ್ಟ್ ಆದೇಶಗಳು ಸಹ ಈ ಬಗ್ಗೆ ಹಲವು ಇದ್ದು, ಇದನ್ನು ಕಡೆಗಣಿಸಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಕ್ಯಾಬಿನೆಟ್‌ನಲ್ಲೂ ಚರ್ಚೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ 2 ವರ್ಷ ಸುಮ್ಮನಿರಿ ಎಂದು ಸಚಿವ ಕುಮಾರಸ್ವಾಮಿ ಹೇಳಿದರು. ಭಗವಂತ ನನ್ನಿಂದ ಸಮಾಜಕ್ಕೆ ಏನಾದರೂ ಕೆಲಸ ಆಗಬೇಕು ಎಂದು ನನ್ನನ್ನು 5 ಬಾರಿ ಉಳಿಸಿದ್ದಾನೆ. ಸಮಸ್ಯೆ ನಿವಾರಣೆಗೆ 5 ವರ್ಷದ ಸುಭದ್ರ ಸರ್ಕಾರ ಅಗತ್ಯವಿದ್ದು, ಇದಕ್ಕೆ ನಾನು ಪುನಃ ಮುಖ್ಯಮಂತ್ರಿ ಯಾಗಬೇಕಿದೆ.ರೈತರಿಗೆ ಆರ್ಥಿಕ ಶಕ್ತಿ ತುಂಬಬೇಕು. ಗ್ರಾಪಂಗಳಿಗೆ ಶಕ್ತಿ ತುಂಬಿ ರೈತರು ಸಾಲಗಾರರಾಗದೇ ಮಾರುಕಟ್ಟೆ ಹೇಗೆ ಸೃಷ್ಟಿ ಮಾಡಿಕೊಳ್ಳಬೇಕು. ಸ್ಟೋರೇಜ್ ಹೇಗೆ ನಿರ್ಮಿಸಬೇಕು, ಆರೋಗ್ಯ, ಶಿಕ್ಷಣ ಮುಂತಾದ ವಿಚಾರಗಳ ಬಗ್ಗೆ ಯೋಜನೆ ಮಾಡಿಕೊಂಡಿದ್ದೇನೆ. ₹2 ಸಾವಿರಕ್ಕೆ ಯಾರೂ ಮರುಳಾಗದೆ ಅಭಿವೃದ್ಧಿಗೆ ಒತ್ತು ನೀಡಿ. ಅರಣ್ಯ ಕಾಯ್ದೆಯಿಂದ ಅರಣ್ಯ ವಿಸ್ತರಣೆ ಆಗುತ್ತಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ಕಾಯ್ದೆ ತೀರ್ಪು, ಪ್ರತಿಗಳನ್ನು ತೋರಿಸಿ ತಲೆ ತಲಾಂತರದಿಂದ ಬದುಕುತ್ತಿರುವ ಕುಟುಂಬಗಳ ನೆಮ್ಮದಿ ಹಾಳು ಮಾಡುತ್ತಿದ್ದಾರೆ. ಅಂದು ಯಾವುದೇ ಸಮಸ್ಯೆಯಿಲ್ಲದೆ ಉತ್ತಮ ಅರಣ್ಯ ಪ್ರದೇಶವಿತ್ತು. ಆದರೆ ಇಂದು ಅಧಿಕಾರಿಗಳು ಕೇವಲ ಅರಣ್ಯದ ಲೆಕ್ಕ ವನ್ನಷ್ಟೇ ತೋರಿಸುತ್ತಿದ್ದಾರೆ. ಕೋಟ್ಯಂತರ ರು. ಖರ್ಚು ಮಾಡಿ ಗಿಡ ನೆಟ್ಟಿದ್ದೇವೆ ಎಂದು ಹೇಳುತ್ತಾರೆ. ಆದರೆ ಎಲ್ಲಿ ಹುಡುಕಿದರೂ ಸಹ ಒಂದೂ ಗಿಡಗಳು ಕಾಣುವುದಿಲ್ಲ ಎಂದರು.
ಬೆಳೆಗಾರರ ಸಮಸ್ಯೆ ಅರಿತಿದ್ದೇನೆ: ಕಾಫಿ ಬೆಳೆಗಾರರ ಸಮಸ್ಯೆ ಹತ್ತಿರದಿಂದ ಅರಿತಿದ್ದೇನೆ. ಕಾಫಿ ಬೆಳೆ ಗಾರರ ಆರ್ಥಿಕ ಶಕ್ತಿ ವೃದ್ಧಿಗೆ ಉತ್ತಮ ಬೆಳೆ ಬೆಳೆಯಲು ಉತ್ತಮ ಬೀಜಗಳನ್ನು ಸಂಶೋಧಿಸಿ ಸಂಶೋಧನಾ ಕೇಂದ್ರ ಬೆಳೆಗಾರರಿಗೆ ನೀಡುತ್ತಿರುವುದು ಅಭಿನಂದನೀಯ ಎಂದರು.ದೇಶದಲ್ಲಿ ಕೃಷಿಕರು ಎಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ ನಾವು ನೋಡಿದ್ದೇವೆ. ಇತ್ತೀಚೆಗೆ ಹವಾಮಾನ ಸಮಸ್ಯೆ ಬಹಳ ಇದೆ. ಕೊಡಗು, ಮೂಡಿಗೆರೆ ಭಾಗಗಳಲ್ಲಿ ಭೂಕುಸಿತ, ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ . ದುಬೈ, ಅಬುದಾಬಿಯಲ್ಲಿ ಇಂದು ಹಿಮಪಾತ ಎಂದರೆ ನಂಬಲು ಸಾಧ್ಯವೇ. ಇಂದು ಪ್ರಕೃತಿಯ ಮೇಲೆ ಗಧಾಪ್ರಹಾರ ಮಾಡಿದ್ದೇವೆ ಇದನ್ನು ಸರಿಪಡಿಸಬೇಕಿದೆ ಎಂದರು.ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಬೇಲೂರು ಶಾಸಕ ಎಚ್.ಕೆ.ಸುರೇಶ್, ಕಾಫಿ ಮಂಡಳಿ ಸಿಇಒ ಕೂರ್ಮಾರಾವ್, ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಸಿಸಿಆರ್‌ಐನ ಸಂಶೋಧನಾ ನಿರ್ದೇಶಕ ಡಾ.ಸೆಂಥಿಲ್‌ಕುಮಾರ್, ಉಗಾಂಡ ಕಾಫಿ ಸಂಶೋಧನಾ ಕೇಂದ್ರದ ಸಂಶೋಧನಾ ನಿರ್ದೇಶಕ ಡಾ.ಜೆಫ್ರಿ, ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಅಲ್ನೂರಿ ಸೀತಾ ರಾಮ್ ಜಿಲ್ಲೆಯ ಜಿಲ್ಲಾಧಿಕಾರಿ ದಿನೇಶ್, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜೆಡಿಎಸ್ ಮುಖಂಡ ಸುಧಾಕರ ಶೆಟ್ಟಿ, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಕಾಫಿ ಮಂಡಳಿ ಸದಸ್ಯರಾದ ಭಾಸ್ಕರ್ ವೆನಿಲ್ಲಾ, ಎ.ಜಿ. ದಿವಿನ್‌ರಾಜ್, ಡಾ.ಮಹಾಬಲರಾವ್, ಡಾ.ಕೃಷ್ಣಾನಂದ ಮತ್ತಿತರರು ಹಾಜರಿದ್ದರು.-- (ಬಾಕ್ಸ್)--
ಕಾಫಿ ಮುಕ್ತ ಮಾರುಕಟ್ಟೆಗೆ ಎಚ್‌ಡಿಡಿ ಕಾರಣ ಎರಡು ಬಾರಿ ಆಕಸ್ಮಿಕವಾಗಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ರೈತರ ಸಾಲಮನ್ನಾದಂತಹ ಜನಪರ ಕಾರ್ಯ ಮಾಡಿದ್ದೇನೆ. ಇಂದು ಕಾಫಿ ಮುಕ್ತ ಮಾರುಕಟ್ಟೆಯಲ್ಲಿ ವ್ಯಾಪಾರ ವಾಗುತ್ತಿದೆ ಎಂದಾದರೆ ಅದಕ್ಕೆ ಎಚ್.ಡಿ.ದೇವೇಗೌಡರು ಕಾರಣ ಎಂಬುದನ್ನುತಿಳಿದುಕೊಳ್ಳಬೇಕಿದೆ ಎಂದು ಹೇಳಿದರು.ನಮ್ಮ ಪ್ರಧಾನಮಂತ್ರಿ ಹಲವು ದೇಶಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಹಲವು ಒಪ್ಪಂದಗಳಾಗುತ್ತಿವೆ. ರೈತ ಕೆಲವು ಉತ್ಪನ್ನಗಳನ್ನು ಸರಬರಾಜು ಮಾಡುವಾಗ ತೆರಿಗೆ ರಹಿತದ ಒಪ್ಪಂದ ಮಾಡಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಕಾಫಿ ಸಹ ಮುಂದಿನ ದಿನಗಳಲ್ಲಿ ಹಲವು ದೇಶಗಳಿಗೆ ತೆರಿಗೆ ರಹಿತ ವಾಗಿ ಪೂರೈಕೆ ಆಗುವಂತೆ ಮಾಡಬೇಕಿದೆ ಎಂದರು.- (ಬಾಕ್ಸ್) -5 ಕಂಪೆನಿಗಳಿಗೆ ಮ್ಯಾಗ್ನೆಟ್ ಉತ್ಪಾದನೆಗೆ ಅವಕಾಶ
ಚೈನಾ ಉತ್ಪಾದನೆ ಮಾಡಿದ ರೇರರ್ ಮ್ಯಾಗ್ನೆಟ್ ಭಾರತಕ್ಕೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಈ ಬಗ್ಗೆ ಕೆಲವು ಆಟೋಮೊಬೈಲ್ ಇಂಡಸ್ಟ್ರೀಯವರು ನನ್ನನ್ನು ಭೇಟಿ ಮಾಡಿ ಸಮಸ್ಯೆ ತಿಳಿಸಿದರು. ನಮ್ಮ ಇಲಾಖೆಯಿಂದ ಇದರ ಉತ್ಪಾದನೆ ತೀರ್ಮಾನ ಮಾಡಿ ಪ್ರಧಾನಿಗಳ ಜೊತೆ ಚರ್ಚಿಸಿ ₹7280 ಕೋಟಿ ವೆಚ್ಚದಲ್ಲಿ ಇಲಾಖೆಯಿಂದ 5 ಕಂಪೆನಿಗಳಿಗೆ ಮ್ಯಾಗ್ನೆಟ್ ಉತ್ಪಾದನೆಗೆ ಅವಕಾಶ ಕೊಡಲಾಗಿದೆ. ಇದೀಗ ಚೈನಾದ ಮುಂದೆ ಕೈಯೊಡ್ಡುವ ಪರಿಸ್ಥಿತಿ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.-- (ಬಾಕ್ಸ್)-- 100 ವರ್ಷಕ್ಕೆ ಹಾದಿ ತೋರಿದ ಶತಮಾನೋತ್ಸವಕಾಫಿ ಸಂಶೋಧನಾ ಕೇಂದ್ರ ಆಯೋಜಿಸಿರುವ ಶತಮಾನೋತ್ಸವದಲ್ಲಿ ಮುಂದಿನ 100 ವರ್ಷಗಳಿಗೆ ಕಾಫಿ ಕೃಷಿಗೆ ಉತ್ತಮ ಹಾದಿ ತೋರಿದೆ ಎಂದು ಕಾಫಿ ಮಂಡಳಿ ಸಿಇಒ ಕೂರ್ಮಾರಾವ್ ಹೇಳಿದರು. ಇಲ್ಲಿ ಪ್ರದರ್ಶನಗೊಂಡ ಕಾಫಿ ಮಳಿಗೆಗಳು, ವಿವಿಧ ಸ್ವಾದ ಹೊಂದಿದ ಆರೆಂಜ್ ಕಾಫಿ, ಲೆಮನ್ ಕಾಫಿ, ಸ್ಪೈಸೆಸ್ ಕಾಫಿ ಮುಂತಾದವು ಕಾಫಿ ವಿಭಿನ್ನತೆ ಪರಿಚಯಿಸಿದೆ. ಈ ಸಂಭ್ರಮಕ್ಕೆ ಒಂದು ವರ್ಷದ ಮಗುವಿನಿಂದ ಹಿಡಿದು 100 ವರ್ಷದ ವಯಸ್ಕರವರೆಗೂ ಬಂದಿದ್ದಾರೆ. ಇದು ನಮ್ಮೆಲ್ಲರ ಹೆಮ್ಮೆಯ ಕಾರ್ಯಕ್ರಮ. ಇದು ಈ ಭಾಗದಲ್ಲಿ ನಡೆದ ಅತೀ ದೊಡ್ಡ ಮತ್ತು ಅತ್ಯುನ್ನತ ಕಾರ್ಯಕ್ರಮ ಎಂದರು.(ಬಾಕ್ಸ್)ಕಲ್ಪವೃಕ್ಷವಾಗಲಿದೆ ಕಾಫಿ
ವಿಶ್ವದಲ್ಲಿ ಮುಂದಿನ ದಿನಗಳಲ್ಲಿ ಕಾಫಿ ಬೆಳೆ ಕಲ್ಪವೃಕ್ಷವಾಗಲಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ದೇವವೃಂದ ಹೇಳಿದರು.ಪ್ರಸ್ತುತ ಕಾಫಿ ಎಲೆಗಳಿಂದ ಚಹಾ, ಕಾಫಿ ಸಿಪ್ಪೆಯಿಂದ ವಿವಿಧ ಉತ್ಪನ್ನಗಳ ತಯಾರಿಕೆ, ಬಯೋ ಫ್ಯೂಯೆಲ್ ತಯಾರಿಕೆ ಪ್ರಯೋಗ ನಡೆದಿದ್ದು, ಇದರಿಂದ ಈ ಕೃಷಿ ಕಲ್ಪವೃಕ್ಷವಾಗಲಿದೆ. ನಾವು ಸಣ್ಣ ಬೆಳೆಗಾರರನ್ನು ತಲುಪುವ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿದ್ದೇವೆ. ನಾಗಾ ಲ್ಯಾಂಡ್‌ನಲ್ಲಿ 1 ಕೆಜಿ ಕಾಫಿ ₹10 ಸಾವಿರಕ್ಕೆ ಮಾರಾಟ ಮಾಡ ಲಾಗುತ್ತಿದೆ. ಇದೇ ಬೆಲೆ ಇಲ್ಲಿಯೂ ಬರ ಬೇಕು ಎಂಬುದು ನಮ್ಮ ಆಶಯ. ಆದರೆ ಎಲ್ಲ ದಿನಗಳಲ್ಲೂ ಇದೇ ಬೆಲೆ ಸಿಗುತ್ತದೆ ಎಂಬ ನಂಬಿಕೆ ಇರಲ್ಲ. ಇದನ್ನು ಗಮನಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ವ್ಯವಸ್ಥೆಯಾಗಬೇಕಿದೆ ಎಂದರು.(ಬಾಕ್ಸ್)ಪ್ಲೇವರ್ ಆಫ್ ಇಂಡಿಯಾ ಫೈನ್ ಕಪ್ ಪ್ರಶಸ್ತಿ ವಿತರಣೆಶತಮಾನೋತ್ಸವದಲ್ಲಿ ನೌ ಯುವರ್ ಕಾಫಿ- ಪ್ಲೇವರ್ ಆಫ್ ಇಂಡಿಯಾ ಫೈನ್ ಕಪ್ ಪ್ರಶಸ್ತಿಗಳನ್ನು ಪ್ರಧಾನ ಮಾಡಿದ್ದು, ವಿವಿಧ ವಿಭಾಗಗಳಲ್ಲಿ ತಮಿಳುನಾಡಿನ ರಜಾಕ್ ಸೈಟ್, ಚಿಕ್ಕಮಗಳೂರಿನ ಜಾಕಬ್ ಮಮ್ಮೆನ್, ತಮಿಳುನಾಡು ನೀಲಗಿರಿಸ್‌ನ ಸಂದೀಪ್ ಮ್ಯಾಥ್ಯೂ, ಕೊಡಗಿನ ಜಿ.ಜಿ.ಪದ್ಮಶ್ರೀ ಅವರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಅತ್ಯುತ್ತಮ ಮಳಿಗೆ ಪ್ರದರ್ಶಿಸಿದ ಹಟ್ಟಿ ಕಾಫಿ ಸಂಸ್ಥೆ (ಪ್ರಥಮ), ಅಮೃತ್ ಆರ್ಗ್ಯಾನಿಕ್ ಫರ್ಟಿಲೈಸರ್ (ದ್ವಿತೀಯ), ಮಾರ್ಶಲ್ ಪಾವ್ಲರ್ ಎಂಜಿನಿಯ ರ‍್ಸ್ ಇಂಡಿಯಾ ಸಂಸ್ಥೆ (ತೃತೀಯ) ಬಹುಮಾನ ಪಡೆಯಿತು. ಸಿಸಿಆರ್‌ಐ ನೂರರ ನೆನಪಿನ ಕಾಫಿ ಕೃಷಿಕರ ಕಥನ ಕೈಪಿಡಿ ಬಿಡುಗಡೆ ಮಾಡಲಾಯಿತು.
೨೨ಬಿಹೆಚ್‌ಆರ್ ೨:ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರ ಆಯೋಜಿಸಿದ್ದ ಶತಮಾನೋತ್ಸವ ಸಮಾರೋಪದಲ್ಲಿ ಸಿಸಿಆರ್‌ಐ ನೂರರ ನೆನಪಿನ ಕಾಫಿ ಕೃಷಿಕರ ಕಥನ ಕೈಪಿಡಿಯನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆಗೊಳಿಸಿದರು. ೨೨ಬಿಹೆಚ್‌ಆರ್ ೩:
ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿ ಸಚಿವ ಕುಮಾರಸ್ವಾಮಿ ಮಾಹಿತಿ ಪಡೆದುಕೊಂಡರು.೨೨ಬಿಹೆಚ್‌ಆರ್ ೪:ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ನೌ ಯುವರ್ ಕಾಫಿ- ಪ್ಲೇವರ್ ಆಫ್ ಇಂಡಿಯಾ ಫೈನ್ ಕಪ್ ಪ್ರಶಸ್ತಿಗಳನ್ನು ವಿವಿಧ ಸಾಧಕರಿಗೆ ಪ್ರಧಾನ ಮಾಡಲಾಯಿತು. ೨೨ಬಿಹೆಚ್‌ಆರ್ ೫:
ಸಮಾರಂಭದ ಯಶಸ್ವಿಗೆ ಶ್ರಮಿಸಿದ ಕಾಫಿ ಮಂಡಳಿ ಸಿಇಓ ಕೂರ್ಮಾರಾವ್ ಅವರನ್ನು ಸಚಿವ ಕುಮಾರಸ್ವಾಮಿ ಗೌರವಿಸಿದರು.೨೨ಬಿಹೆಚ್‌ಆರ್ ೬:ಸಮಾರಂಭದಲ್ಲಿ ಭಾಗವಹಿಸಿದ್ದ ವಿವಿಧೆಡೆಯ ಬೆಳೆಗಾರರು.