ಸಾರಾಂಶ
ಕಾರ್ಕಳ ಅನಂತಶಯನ ಸೇವಾಭಾರತಿ ಟ್ರಸ್ಟ್ ಸಂಸ್ಥೆಯ ಆವರಣದಲ್ಲಿ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಸ್ಮರಣಾರ್ಥ ಹೊಸಸಂಜೆ ಬಳಗದಿಂದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ ನಡೆಯಿತು. ಎಂದು ಹಿರ್ಗಾನ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಲಯದ ಮುಖ್ಯನಿಲಯ ಪಾಲಕಿ ಲಲಿತಾ ಮುದ್ರಾಡಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕಾರ್ಕಳ
ದೇಹಶಕ್ತಿ ಮತ್ತು ಬುದ್ಧಿಶಕ್ತಿ ಭಗವಂತನು ನಮಗೆ ನೀಡಿದ ಬಲುದೊಡ್ಡ ಸಂಪತ್ತು. ಟೀಕಿಸುವವರನ್ನು ನಿರ್ಲಕ್ಷಿಸಿ ಸ್ವಸಾಮರ್ಥ್ಯದಿಂದ ಗುರಿ ಮುಟ್ಟುವ ಛಲ ಮೂಡಿದಾಗ ಯಶಸ್ಸಿನ ದಾರಿ ತಂತಾನೆ ತೆರೆದುಕೊಳ್ಳುತ್ತದೆ. ಅನ್ಯಾಯ, ಸುಳ್ಳು, ಮೋಸ, ವಂಚನೆಗಳಿಲ್ಲದ ಸ್ವಚ್ಛ ಪ್ರಾಮಾಣಿಕ ಬದುಕು ದೇಶಕ್ಕೆ ನಾವು ನೀಡುವ ದೊಡ್ಡ ಉಡುಗೊರೆ ಎಂದು ಹಿರ್ಗಾನ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಲಯದ ಮುಖ್ಯನಿಲಯ ಪಾಲಕಿ ಲಲಿತಾ ಮುದ್ರಾಡಿ ಹೇಳಿದರು.ಕಾರ್ಕಳ ಅನಂತಶಯನ ಸೇವಾಭಾರತಿ ಟ್ರಸ್ಟ್ ಸಂಸ್ಥೆಯ ಆವರಣದಲ್ಲಿ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಸ್ಮರಣಾರ್ಥ ಹೊಸಸಂಜೆ ಬಳಗ ಆಯೋಜಿಸಿದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತಾಡಿದರು.ಅಧ್ಯಕ್ಷತೆ ವಹಿಸಿ ಮಾತಾಡಿದ ಕಾರ್ಕಳ ಸಾಹಿತ್ಯ ಸಂಘದ ಗೌರವಾಧ್ಯಕ್ಷ ತುಕಾರಾಮ ನಾಯಕ್, ಸಮಾಜದಲ್ಲಿ ಇನ್ನೊಬ್ಬರಿಗೆ ಉಪಕಾರ ಮಾಡುವುದು ದೊಡ್ಡ ಹೆಗ್ಗಳಿಕೆಯಾಗಿರದೆ, ಅದು ನಮ್ಮ ಕರ್ತವ್ಯವೆಂದು ತಿಳಿಯಬೇಕು. ಭಗವಂತ ಕೊಟ್ಟ ಶಕ್ತಿ ಸಾಮರ್ಥ್ಯವನ್ನು ಸಮಾಜದ ಒಳಿತಿಗಾಗಿ ಬಳಸುವುದೇ ಮನುಷ್ಯನ ನಿಜವಾದ ಹಾದಿ ಎಂದರು.ಉದ್ಯಮಿ ಬೋಳ ರಘುರಾಮ ಕಾಮತ್, ಟ್ರಸ್ಟ್ ಪದಾಧಿಕಾರಿಗಳಾದ ವಿಘ್ನೇಶ್ ಫಾಟಕ್ ಮತ್ತು ಆನಂದ ಭಟ್ ಉಪಸ್ಥಿತರಿದ್ದರು.
ಹೊಸಸಂಜೆ ಬಳಗದ ಅಧ್ಯಕ್ಷ ಆರ್. ದೇವರಾಯ ಪ್ರಭು ಕಾರ್ಯಕ್ರಮ ಸಂಯೋಜಿಸಿದರು.