ಕಲ್ಯಾಣ ಭಾಗದಲ್ಲೂ ಜೇನು ಕೃಷಿ ಸಾಧ್ಯ: ಮಧುಕೇಶ್ವರ ಹೆಗಡೆ

| Published : Dec 24 2023, 01:45 AM IST

ಕಲ್ಯಾಣ ಭಾಗದಲ್ಲೂ ಜೇನು ಕೃಷಿ ಸಾಧ್ಯ: ಮಧುಕೇಶ್ವರ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಆಳಂದದ ತಡಕಲ್‍ನಲ್ಲಿ ಪ್ರಗತಿಪರ ಕೃಷಿಕ ದಿ.ರುಕ್ಮಯ್ಯಾನವರ ಪುಣ್ಯಸ್ಮರಣೆ, ರೈತ ದಿನಾಚರಣೆ, ಧಾರ್ಮಿಕ ಸಮಾರಂಭ ಹಾಗೂ ಕೃಷಿ ಸಾಧಕರಿಗೆ ಆಳಂದ ಕೃಷಿಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಆಳಂದ

ಸಾಂಪ್ರದಾಯಿಕ ಬೇಸಾಯದ ಜೊತಗೆ ಜೇನು ಕೃಷಿ ಮೈಗೂಡಿಸಿಕೊಂಡರೆ ಆರ್ಥಿಕ ಅಭಿವೃದ್ಧಿ ಹೊಂದಬಹುದಾಗಿದೆ ಎಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಗ್ರಾಮದ ಹೆಸರಾಂತ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಅವರು ಸಲಹೆ ನೀಡಿದರು.

ತಾಲೂಕಿನ ತಡಕಲ್ ಗ್ರಾಮದಲ್ಲಿ ಸ್ವಾತಂತ್ರ್ಯ ಸೇನಾನಿ ಶತಾಯುಷಿ ಪ್ರಗತಿಪರ ಕೃಷಿ ಆಗಿದ್ದ ದಿ. ರುಕ್ಮಯ್ಯಾ ಸಾಬಯ್ಯಾ ಗುತ್ತೇದಾರ ಅವರ 11ನೇ ಪುಣ್ಯಸ್ಮರಣೆಯ ಅಂಗವಾಗಿ ರಾಷ್ಟ್ರೀಯ ರೈತ ದಿನಾಚರಣೆ, ಧಾರ್ಮಿಕ ಸಮಾರಂಭ ಹಾಗೂ ಕೃಷಿ ಸಾಧಕರಿಗೆ ಆಳಂದ ಕೃಷಿಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಜೇನು ಕೃಷಿಯಲ್ಲಿ ಆದಾಯ ಗಳಿಸೋದರ ಒಟ್ಟಿಗೆ ನಾವು ಜನರಿಗೆ ಉದ್ಯೋಗ ಸೃಷ್ಟಿ ಮಾಡಬಹುದು. ಈ ಕೃಷಿಯಲ್ಲಿ ನಾನು ವಾರ್ಷಿಕವಾಗಿ 2.28 ಕೋಟಿ ರು. ವರೆಗೆ ವ್ಯವಹಾರ ಮಾಡುತ್ತಿದ್ದೇನೆ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲೂ ಜೇನು ಕೃಷಿಯನ್ನು ಬಹಳಷ್ಟು ಉತ್ತಮವಾಗಿ ಮಾಡಬಹುದು. ಹೆಚ್ಚಾಗಿ ತೊಗರಿ ಇಲ್ಲಿದೆ. ಜೀನು ಉತ್ಪಾದನೆಗೆ ಅವಕಾಶಗಳು ಸಾಕಷ್ಟಿವೆ. ಜೇನು ಸಾಕಾಣಿಕೆ ಮತ್ತು ಉಪ ಸಾಮಗ್ರಿ ತಯಾರಿಕೆಗೆ ನಿಮಗೆ ಜೇನು ಪೆಟ್ಟಿಗೆಗಳ ಸಹಿತ ಬಂದು ಇಲ್ಲಿ ತರಬೇತಿಯನ್ನು ಕೊಡಲಿಕ್ಕೆ ಸಿದ್ಧನಾಗಿದ್ದೇನೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಹಾರಕೂಡ ಮಠದ ಡಾ. ಚೆನ್ನವೀರ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ನಂದಗಾಂವ ಮಠದ ಶ್ರೀ ರಾಜಶೇಖರ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ದೇಶಿಸಿ ಆಶೀರ್ವಚನ ನೀಡಿದರು.

ಅಧ್ಯಕ್ಷತೆಯನ್ನು ಕಡಗಂಚಿಯ ವೀರಭದ್ರ ಶಿವಾಚಾರ್ಯರು ವಹಿಸಿದ್ದರು. ಮಾಡಿಯಾಳದ ಒಪ್ಪತ್ತೇಶ್ವರ ಸ್ವಾಮೀಜಿ, ಮಾದನಹಿಪ್ಪರ್ಗಾದ ಅಭಿನವ ಶ್ರೀ ಶಿವಲಿಂಗ ಸ್ವಾಮೀಜಿ, ಶ್ರೀ ಶಾಂತವೀರ ಶಿವಾಚಾರ್ಯರು, ಚಿಣಮಗೇರಿಯ ಶ್ರೀ ವೀರಮಹಾಂತ ಶಿವಾಚಾರ್ಯರು, ಕೇಸರ ಜವಳಗಾದ ಶ್ರೀ ವೀರಂತೇಶ್ವರ ಶಿವಾಚಾರ್ಯರು, ಬಂಗರಗಾದ ಶ್ರೀ ಗುರುಲಿಂಗ ಶಿವಾಚಾರ್ಯರು, ಕಿಣ್ಣಿಸುಲ್ತಾನದ ಶ್ರೀ ಶಿವಶಾಂತಲಿಂಗ ಶಿವಾಚಾರ್ಯರು, ತಡಕಲನ ಶ್ರೀ ಸಿದ್ಧಮಲ್ಲ ಶಿವಾಚಾರ್ಯರು ಸೇರಿದಂತೆ ವಿಠ್ಠಲರಾವ್ ಪಾಟೀಲ, ವೀರಣ್ಣಾ ಮಂಗಾಣೆ, ಹರ್ಷಾನಂದ ಗುತ್ತೇದಾರ, ಸಂತೋಷ ಗುತ್ತೆದಾರ, ಅಶೋಕ ಗುತ್ತೇದಾರ, ಕುಪೇಂದ್ರ ಗುತ್ತೇದಾರ ಸೇರಿದಂತೆ ಅನೇಕರು ಉಪಸ್ಥಿತಿದ್ದರು.

ಮಾಜಿ ಶಾಸಕ ಸುಭಾಷ ಗುತ್ತೇದಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಅಧ್ಯಕ್ಷ ಹಣಮಂತ ಶೇರಿ ಖಜೂರಿ, ಸಾಹಿತಿ ಅಪ್ಪಾಸಾಬ ಗುಂಡೆ ನಿರೂಪಿಸಿದರು. ಶರಣಬಸಪ್ಪ ವಡಗಾಂವ ವಂದಿಸಿದರು.

ಆಳಂದ ಕೃಷಿಸಿರಿ ಪ್ರಶಸ್ತಿ ಪ್ರದಾನ: ನರ್ಸರಿ ಮತ್ತು ಕೃಷಿಯಲ್ಲಿ ಧಂಗಾಪೂರದ ನಾಗರಾಜ ಶೇಗಜಿ, ನುಗಾರಿಕೆ ಕೃಷಿಯಲ್ಲಿ ಗುರುಬಾಯಿ ಎಂ. ಆಳಂದ, ತೀರ್ಥ ಸಾಧಕ ದೇವಿಂದ್ರಪ್ಪ ಅಂದಪ್ಪಾ ಹಳ್ಳೆ, ಮಲ್ಲಿನಾಥ ಸಾಯಬಣ್ಣಾ ಯಳಸಂಗಿ, ಬಸಣ್ಣಪ್ಪ ಸಿರೂರ, ಬೋಳಣಿಯ ಬಂಡಪ್ಪ ಬಿ. ಸಂಗೋಳಗಿ, ಯಳಸಂಗಿಯ ಬುದ್ಧಪ್ಪ ಸಿದ್ಧಪ್ಪ ಕುಮಸಗಿ, ಖಜೂರಿಯ ಬಸವರಾಜ ಕಲ್ಯಾಣಪ್ಪ ನಗರೆ, ಶಿವರಾಜ ಶ್ರೀಮಂತರಾಯ ಕುಂಬಾರ ಸುಂಟನೂರ, ಮಾದನಹಿಪ್ಪರಗಾದ ಶಿವಲಿಂಗಪ್ಪ ಬಸವರಾಜ ಹುಡಗಿ, ಆಲೂರದ ಸುಭಾಷ ಅಂಬಾರಾಯ ಹಂಗರಗಿ ಅವರನ್ನು ಪ್ರಶಸ್ತಿ ಪ್ರದಾನ ಮಾಡಿ ಮಾಜಿ ಶಾಸಕ ಸುಭಾಷ ಗುತ್ತೇದಾರ ಸನ್ಮಾನಿಸಿದರು.