ಸಾರಾಂಶ
ಕಳೆದ ೮-೧೦ ತಿಂಗಳಿನಿಂದ ಖಾಲಿಯಾಗಿದ್ದ ಸ್ಥಾಯಿ ಸಮಿತಿ ಅಧ್ಯಕ್ಷಗಾದಿಗೆ ಸದಸ್ಯರಲ್ಲಿ ಯಾವುದೇ ಪೈಪೋಟಿ ಇಲ್ಲದೇ ಕಾಂಗ್ರೆಸ್ ದಿಂದ ಹೊನ್ನಪ್ಪ ಶಿರಹಟ್ಟಿ ಆಯ್ಕೆ
ಶಿರಹಟ್ಟಿ: ಶಿರಹಟ್ಟಿ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 17ನೇ ವಾರ್ಡ್‌ನಿಂದ ಆಯ್ಕೆಯಾದ ಕಾಂಗ್ರೆಸ್ ಸದಸ್ಯ ಹೊನ್ನಪ್ಪ ಶಿರಹಟ್ಟಿ ಶುಕ್ರವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ ಹಾಗೂ ಕಾಂಗ್ರೆಸ್ ಸದಸ್ಯರ ಹಾಗೂ ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ಸಮ್ಮುಖದಲ್ಲಿ ಅಧಿಕೃತವಾಗಿ ಪ್ರಕಟಿಸಲಾಯಿತು. ಒಟ್ಟು ೧೮ ಸದಸ್ಯ ಬಲದ ಪಟ್ಟಣ ಪಂಚಾಯತಿಯಲ್ಲಿ ೧೧ ಜನ ಕಾಂಗ್ರೆಸ್ ಸದಸ್ಯರು ಇದ್ದು, ೭ಬಿಜೆಪಿ ಸದಸ್ಯರಿದ್ದಾರೆ. ೧೧ ಜನ ಕಾಂಗ್ರೆಸ್ ಸದಸ್ಯರ ಬೆಂಬಲದಿಂದ ಸ್ಥಾಯಿ ಸಮಿತಿಗೆ ಹೊನ್ನಪ್ಪ ದುರಗಪ್ಪ ಶಿರಹಟ್ಟಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಘೋಷಿಸಲಾಯಿತು.ಕಳೆದ ೮-೧೦ ತಿಂಗಳಿನಿಂದ ಖಾಲಿಯಾಗಿದ್ದ ಸ್ಥಾಯಿ ಸಮಿತಿ ಅಧ್ಯಕ್ಷಗಾದಿಗೆ ಸದಸ್ಯರಲ್ಲಿ ಯಾವುದೇ ಪೈಪೋಟಿ ಇಲ್ಲದೇ ಕಾಂಗ್ರೆಸ್ ದಿಂದ ಹೊನ್ನಪ್ಪ ಶಿರಹಟ್ಟಿ ಆಯ್ಕೆಯಾದರು.
ಪಟ್ಟಣದ ೧೮ ವಾರ್ಡ್‌ಗಳಿಗೆ ಸಮರ್ಪಕ ಕುಡಿವ ನೀರಿನ ಪೂರೈಕೆ,ರಸ್ತೆ, ಚರಂಡಿಗಳ ನಿರ್ಮಾಣ ಸೇರಿದಂತೆ ನಗರದ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರ ಸಮಸ್ಯೆಗೆ ಸ್ಪಂದಿಸಿ ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ ಎಂದರು.ಹೊಸ ಬಡಾವಣೆಗಳಲ್ಲಿ ಕುಡಿವ ನೀರಿನ ಸಮಸ್ಯೆ, ಬೀದಿ ದೀಪ, ಸಮರ್ಪಕ ರಸ್ತೆ, ಚರಂಡಿ ಇಲ್ಲದಿರುವ ಬಗ್ಗೆ ಪಟ್ಟಣದ ಜನತೆಯಿಂದ ಮನವಿಗಳು ಬಂದಿರುವುದನ್ನು ಗಮನಿಸಿದ್ದೇನೆ. ಹಂತಹಂತವಾಗಿ ಆದ್ಯತೆಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಕೈಗೊಂಡು ಜನರ ಸಮಸ್ಯೆಗೆ ಕೊನೆ ಹಾಡುವುದಾಗಿ ತಿಳಿಸಿದರು.
ನೂತನ ಸ್ಥಾಯಿ ಸಮಿತಿ ಅಧ್ಯಕ್ಷನಾಗಲು ಸಹಕರಿಸಿದ ಸದಸ್ಯರಾದ ಪರಮೇಶ ಪರಬ, ಮಂಜುನಾಥ ಘಂಟಿ, ಗಂಗವ್ವ ಆಲೂರ, ಮುಸ್ತಾಕ್ ಚೋರಗಸ್ತಿ, ಹಸರತ ಢಾಲಾಯತ, ಚನ್ನಬಸವ್ವ ಕಲಾದಗಿ, ಮಹದೇವಪ್ಪ ಗಾಣಗೇರ, ದೇವಪ್ಪ ಆಡೂರ, ದಾವಲಬಿ ಮಾಚೇನಹಳ್ಳಿ, ಇಸಾಕ ಆದ್ರಳ್ಳಿ, ಮಹಬೂಬಸಾಬ್ ಮಾಚೇನಹಳ್ಳಿ ಅವರಿಗೆ ಧನ್ಯವಾದ ಸಲ್ಲಿಸಿದರು.