ಸಾರಾಂಶ
ಸೋಂಪುರ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದಲ್ಲಿ ಏ.26ರಿಂದ ಏ.30ರವರೆಗೆ ಬಸವೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ನಾಟಕೋತ್ಸವ, ಮಹದೇಶ್ವರನ ಪರಾವು, ಕರುಗಲ್ಲಮ್ಮ ದೇವಿಗೆ ಪೂಜೆ, ಬಸವೇಶ್ವರ, ಆಂಜನೇಯ ದೇವರಿಗೆ ವಿಶೇಷ ಪೂಜೆ ಆರತಿ ಏರ್ಪಡಿಸಲಾಗಿದೆ.
ದಾಬಸ್‍ಪೇಟೆ: ಸೋಂಪುರ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದಲ್ಲಿ ಏ.26ರಿಂದ ಏ.30ರವರೆಗೆ ಬಸವೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ನಾಟಕೋತ್ಸವ, ಮಹದೇಶ್ವರನ ಪರಾವು, ಕರುಗಲ್ಲಮ್ಮ ದೇವಿಗೆ ಪೂಜೆ, ಬಸವೇಶ್ವರ, ಆಂಜನೇಯ ದೇವರಿಗೆ ವಿಶೇಷ ಪೂಜೆ ಆರತಿ ಏರ್ಪಡಿಸಲಾಗಿದೆ.
ಏ.26ರಂದು ರಾತ್ರಿ 8.30 ಗಂಟೆಗೆ ಹೊನ್ನೇನಹಳ್ಳಿ ಬಸವೇಶ್ವರ ಕಲಾ ಬಳಗದಿಂದ ಶ್ರೀ ಚಾಮುಂಡೇಶ್ವರಿ ಡ್ರಾಮಾ ಸೀನ್ಸ್‌ನಿಂದ ಕೃಷ್ಣ ಸಂಧಾನ ಅಥವಾ ಭಗವದ್ಗೀತೆ ನಾಟಕ ಪ್ರದರ್ಶನವಿದೆ.ಏ.28ರಂದು ಬೆಳಿಗ್ಗೆ 6 ಗಂಟೆಯಿಂದಲೇ ಬಸವೇಶ್ವರ ದೇವರಿಗೆ ಅಭಿಷೇಕ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಬಸವೇಶ್ವರ ದೇವರನ್ನು ಅಕ್ಕಿಪೂಜೆಯಿಂದ ಅಲಂಕರಿಸಿ ಬೆಳಿಗ್ಗೆ 9 ಗಂಟೆಗೆ ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕಂಬಾಳು ಮಠದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಬಂಡೆಮಠದ ಶ್ರೀ ಮಹಾಲಿಂಗ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಮಧ್ಯಾಹ್ನ 1 ಗಂಟೆಗೆ ಮಹದೇಶ್ವರನ ಪರಾವು ನಡೆಯಲಿದೆ. ರಾತ್ರಿ 7 ಗಂಟೆಗೆ ಬಸವೇಶ್ವರ ಹಾಗೂ ಆಂಜನೇಯ ದೇವರಿಗೆ ಆರತಿ ಮಾಡಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ.
ಏ.29ರಂದು ಬೆಳಿಗ್ಗೆ 10 ಗಂಟೆಗೆ ಕರುಗಲ್ಲಮ್ಮ ದೇವಿಗೆ ಪೂಜೆ ನಡೆಯಲಿದ್ದು, ಏ.30ರಂದು ಬಸವೇಶ್ವರ ದೇವಾಲಯದಲ್ಲಿ ಬಸವ ಜಯಂತಿ ಆಚರಿಸಲಾಗುತ್ತದೆ.