ವಿದ್ಯಾರ್ಥಿಗಳು ಮತ್ತು ಕ್ರೀಡಾಪಟುಗಳಿಗೆ ಸನ್ಮಾನ

| Published : Aug 21 2024, 12:39 AM IST / Updated: Aug 21 2024, 12:40 AM IST

ಸಾರಾಂಶ

ಶಲ್ವಪಿಳ್ಳೆ ಅಯ್ಯಂಗಾರ್ ಅವರ ಹೆಸರಿನಲ್ಲಿ, ಎಸ್. ಎಸ್. ಎಲ್. ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅವರ ಕುಟುಂಬದ ಸದಸ್ಯರಾದ ಶ್ರೀಮತಿ ಅವರು ನಗದು ಬಹುಮಾನ ನೀಡಿ ಪುರಸ್ಕರಿಸಿದರು. ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಪ್ರಶಸ್ತಿ ಪಡೆದ ಈ ಶಾಲಾ ಕ್ರೀಡಾಪಟುಗಳನ್ನು ಕೂಡ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇದಿಕೆಯಲ್ಲಿ ರಾಜ್ಯ ಸೈನಿಕ ರತ್ನ ಪ್ರಶಸ್ತಿ ವಿಜೇತಕ ಮಾಜಿ ಸೈನಿಕ ಜಿ.ಎನ್.ನಾಗರಾಜ್, ಮಾಜಿ ಸೈನಿಕರುಗಳಾದ ಎಸ್. ರಂಗಪ್ಪ , ಸಿ.ವಾಸು, ವೇಣುಗೋಪಾಲ ಅವರುಗಳನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಹಾಸನ

ಜೀವನದಲ್ಲಿ ನಿರ್ದಿಷ್ಟ ಗುರಿಯೊಂದಿಗೆ ಶ್ರದ್ಧೆಯಿಂದ ಕಲಿತು ದೊಡ್ಡ ಸಾಧನೆ ಮಾಡುತ್ತೇವೆಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಶಾಂತಿಗ್ರಾಮ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಪ್ರಸಾದ್ ಕರೆ ನೀಡಿದರು.

ಶಾಂತಿಗ್ರಾಮದ ಕೆ.ಪಿ‌.ಎಸ್. ಶಾಲಾ ಆವರಣದಲ್ಲಿ ಇತ್ತೀಚೆಗೆ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಪಾಲ್ಗೊಂಡ ಕ್ರೀಡಾ ಪಟುಗಳಿಗೆ ಹಾಗೂ ನಿವೃತ್ತ ಮಾಜಿ ಸೈನಿಕರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಈ ಸಮಾರಂಭವು ಶಾಂತಿಗ್ರಾಮ ಕೆ.ಪಿ.ಎಸ್. ಮತ್ತು ಶಾಂತಿಗ್ರಾಮ ಹಳೆಯ ಶಾಲಾ ಕಾಲೇಜು ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ನಡೆಯಿತು.

ಈ ಸಮಾರಂಭದಲ್ಲಿ ದಿವಂಗತ ಶಲ್ವಪಿಳ್ಳೆ ಅಯ್ಯಂಗಾರ್ ಅವರ ಹೆಸರಿನಲ್ಲಿ, ಎಸ್. ಎಸ್. ಎಲ್. ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅವರ ಕುಟುಂಬದ ಸದಸ್ಯರಾದ ಶ್ರೀಮತಿ ಅವರು ನಗದು ಬಹುಮಾನ ನೀಡಿ ಪುರಸ್ಕರಿಸಿದರು. ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಪ್ರಶಸ್ತಿ ಪಡೆದ ಈ ಶಾಲಾ ಕ್ರೀಡಾಪಟುಗಳನ್ನು ಕೂಡ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇದಿಕೆಯಲ್ಲಿ ರಾಜ್ಯ ಸೈನಿಕ ರತ್ನ ಪ್ರಶಸ್ತಿ ವಿಜೇತಕ ಮಾಜಿ ಸೈನಿಕ ಜಿ.ಎನ್.ನಾಗರಾಜ್, ಮಾಜಿ ಸೈನಿಕರುಗಳಾದ ಎಸ್. ರಂಗಪ್ಪ , ಸಿ.ವಾಸು, ವೇಣುಗೋಪಾಲ ಅವರುಗಳನ್ನು ಸನ್ಮಾನಿಸಲಾಯಿತು.ಈ ಸಮಾರಂಭ ಮುಖ್ಯ ಅತಿಥಿಯಾಗಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಹಾಗೂ ಶಾಂತಿಗ್ರಾಮ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮೇಗೌಡ ಅವರು ಆಗಮಿಸಿದ್ದರು. ಸಮಾರಂಭದಲ್ಲಿ ಗ್ರಾಮದ ಗಣ್ಯರು, ಹಿರಿಯರು ಮತ್ತು ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಮಾರಂಭದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ನಿವೃತ್ತ ದೈಹಿಕ ಶಿಕ್ಷಕ ವಿಜಯಕುಮಾರ್ ನೆರವೇರಿಸಿಕೊಟ್ಟರು. ಕೊನೆಯಲ್ಲಿ ಶಿಕ್ಷಕ ಶಿವರಾಮ ವಂದಿಸಿದರು.