ಸಾರಾಂಶ
ಭಾಲ್ಕಿಯ ಶಾರದಾ ಸಂಗೀತ ಪಾಠಶಾಲೆಯಲ್ಲಿ ಕಲಾಶ್ರೀ ಡಾ. ಕೇಶವರಾವ್ ಸೂರ್ಯವಂಶಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಭಾಲ್ಕಿ
ಸುಮಾರು 40 ವರ್ಷಗಳಿಂದ ಸಂಗೀತವನ್ನೇ ಮೈಗೂಡಿಸಿಕೊಂಡು, ಸಂಗೀತ ಕಲೆಯಲ್ಲಿ ಅರಳಿದ ಕಮಲವಾಗಿದ್ದ ಕಲಾಶ್ರೀ ಕೇಶವರಾವ್ ಸೂರ್ಯವಂಶಿ ಅವರಿಗೆ ಚೆನೈ ಸಾಂಸ್ಕೃತಿಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದ್ದು, ಈ ಭಾಗದ ಸಂಗೀತ ಕಲಾವಿದರಿಗೆ ಸಂತಸವನ್ನುಂಟು ಮಾಡಿದೆ ಎಂದು ಸಂಗೀತ ಶಿಕ್ಷಕ ಪ್ರೊ. ಎಸ್.ಕೆ ಪಾಟೀಲ್ ಅಭಿಪ್ರಾಯಪಟ್ಟರು.ಪಟ್ಟಣದ ಶ್ರೀ ಶಾರದಾ ಸಂಗೀತ ಪಾಠಶಾಲೆಯಲ್ಲಿ ಭಾವಾರ ಕಲಾಶ್ರೀ ಡಾ. ಕೇಶವರಾವ್ ಸೂರ್ಯವಂಶಿ ಗುರೂಜಿಗಾಗಿ ಆಯೋಜಿಸಿದ್ದ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೇಶವರಾವ ಸೂರ್ಯವಂಶಿಯವರು ಚಿಕ್ಕವರಿದ್ದಾಗಲೇ ತಬಲಾ ವಾದನಕ್ಕೆ ಮನಸೋತು, ತಬಲಾ ಕಲೆಯನ್ನು ಕಲೆಯಲು ಪ್ರಾರಂಭಿಸಿ ಇಂದು ಅವರು ವಿಶ್ವವಿಖ್ಯಾತ ತಬಲಾ ವಾದಕರಾಗಿ ಹೊರಹೊಮ್ಮಿದ್ದಾರೆ. ಅವರಿಗೆ ಈ ಹಿಂದೆಯೂ ಕಲಾಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳು ಒದಗಿ ಬಂದಿವೆ. ಇಂತಹ ಮಹಾನ್ ಕಲಾವಿದರಿಗೆ ಚೆನೈ ಸಾಂಸ್ಕೃತಿಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿದ್ದು ಭಾಲ್ಕಿಯ ಎಲ್ಲಾ ಸಂಗೀತಾಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದೆ ಎಂದು ಹೇಳಿದರು.ಶ್ರೀ ಶಾರದಾ ಸಂಗೀತ ಪಾಠಶಾಲೆಯ ಶಿಕ್ಷಕ ಕಪಿಲಕುಮಾರ ಸೂರ್ಯವಂಶಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ನಾಗಶೆಟ್ಟೆಪ್ಪ ಲಂಜವಾಡೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೊಳಲು ವಾದಕ ಹಣಮಂತಪ್ಪ ಚಿದ್ರಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಯುವ ಮುಖಂಡ ಮಹೇಶ ಪಾಟೀಲ್, ಲಕ್ಷ್ಮೀಕಾಂತ ಪಾಟೀಲ್, ಪ್ರಕಾಶ ಪೊದ್ದಾರ, ಶಿವಾಜಿರಾವ್ ಮಾನೆ, ಭಾರತ ವಿಕಾಸ ಪರಿಷತ್ ಅಧ್ಯಕ್ಷ ಶೈಲೇಶ ಮಾಲಪಾಣಿ, ಚಂದ್ರಕಾಂತ ಪಾಂಚಾಳ, ಮೀನಾಕ್ಷಿ ಪ್ರಭಾ, ರಾಮ ಸೋಪಾನರಾವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಮಂಗಲಾ ಪಾಟೀಲ್ ಪ್ರಾರ್ಥನಾಗೀತೆ ಹಾಡಿದರು. ಮೀನಾಕ್ಷಿ ಸ್ವಾಗತಿಸಿ ಚಂದ್ರಕಾಂತ ನಿರೂಪಿಸಿದರೆ ಆರ್ಯನ್ ವಂದಿಸಿದರು.
;Resize=(128,128))
;Resize=(128,128))
;Resize=(128,128))