ಸಾರಾಂಶ
- ಹಿರೇಕಲ್ಮಠದ ಜಗದ್ಗುರು ಪಂಚಾಚಾರ್ಯ ಸಮುದಾಯ ಭವನದಲ್ಲಿ ಆಯೋಜನೆ: ಅಧ್ಯಕ್ಷ ರವಿ ನಾಯ್ಕ ಮಾಹಿತಿ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ಬಂಜಾರ (ಲಮಾಣಿ) ಸಮಾಜದ ನಾಯಕರು, ಡಾವ್‌ಗಳು, ಕಾರಬಾರಿಗಳು, ಸಂಘದ ಮಾಜಿ ಅಧ್ಯಕ್ಷರು, ಹೊನ್ನಾಳಿ ವಿಭಾನಸಭಾ ವ್ಯಾಪ್ತಿಯ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಸನ್ಮಾನ ಸಮಾರಂಭ ಜೊತೆಗೆ ಸಮಾಜದ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗತಿಗಳ ಕುರಿತು ಮಾಹಿತಿ ವಿನಿಯಮ ಕಾರ್ಯಕ್ರಮವನ್ನು ಅ.11ರಂದು ಹಿರೇಕಲ್ಮಠದ ಜಗದ್ಗುರು ಪಂಚಾಚಾರ್ಯ ಸಮುದಾಯ ಭವನದಲ್ಲಿ ಬೆಳಗ್ಗೆ 11.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಬಂಜಾರ (ಲಮಾಣಿ) ಸೇವಾ ಸಂಘ ಅಧ್ಯಕ್ಷ ರವಿ ನಾಯ್ಕ ಹೇಳಿದರು.ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಘದ ಪದಾಧಿಕಾರಿಗಳೊಂದಿಗೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅ.11ರಂದು ತಾಲೂಕು ಬಂಜಾರ (ಲಮಾಣಿ ಸೇವಾ ಸಂಘ ವತಿಯಿಂದ ನಡೆಯಲಿರುವ ಕಾರ್ಯಕ್ರವನ್ನು ಉಪ ಸಭಾಪತಿ ರುದ್ರಪ್ಪ ಲಮಾಣಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸೂರಗೊಂಡನಕೊಪ್ಪದ ಮಹಾಮಠ ಸಮಿತಿ ಸದಸ್ಯರಾದ ರವಿ ನಾಯ್ಕ ಬಿ. ವಹಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಹೊನ್ನಾಳಿ ಕ್ಷೇತ್ರ ಶಾಸಕ ಡಿ.ಜಿ. ಶಾಂತನಗೌಡ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಬಯಲುಸೀಮೆ ಅಭಿವೃದ್ಧಿ ಮಂಡಳಿ, ಚಿತ್ರದುರ್ಗದ ಅಧ್ಯಕ್ಷ ಎಚ್.ಬಿ. ಮಂಜಪ್ಪ, ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ ಜಯದೇವ್ ನಾಯ್ಕ, ಕೆಪಿಸಿಸಿ ಸದಸ್ಯ ಡಾ. ಎಲ್.ಈಶ್ವರ ನಾಯ್ಕ, ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಗ್ಯಾರಂಟಿ ಯೋಜನೆಯ ನ್ಯಾಮತಿ ತಾಲೂಕು ಅಧ್ಯಕ್ಷ ಶಿವರಾಂ ನಾಯ್ಕ, ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಶಿವಯೋಗಿ, ಅಹಿಂದ ಮುಖಂಡ ಬಿ.ಸಿದ್ದಪ್ಪ, ಖ್ಯಾತ ವಕೀಲ ಅನಂತ ನಾಯ್ಕ, ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ವಿನಯ್ ಕುಮಾರ್, ದಾವಣಗೆರೆ ಬಂಜಾರ ಸಂಘದ ಅಧ್ಯಕ್ಷ ನಂಜ ನಾಯ್ಕ, ನ್ಯಾಮತಿ ತಾಲೂಕು ಬಂಜಾರ್ ಸಂಘದ ಅಧ್ಯಕ್ಷ ಪ್ರಕಾಶ್ ನಾಯ್ಕ ಮುಂತಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪ್ರತಿ ತಾಂಡಾದ ನಾಯಕ, ಡಾವ್, ಮತ್ತು ಕಾರಬಾರಿಗಳು, ಮಾಜಿ ಸೈನಿಕರಾದ ಶ್ರೀನಿವಾಸ್ ನಾಯ್ಕ, ಕೃಷ್ಣ ನಾಯ್ಕ, ವಿವಿಧ ಪ್ರಶಸ್ತಿ ಪುರಸ್ಕೃತ ಲೋಕೇಶ್ ನಾಯ್ಕ, ಚಂದ್ರನಾಯ್ಕ, ವಿಕ್ರಮ್ ನಾಯ್ಕ, ಸಂಜುನಾಯ್ಕ, ಕೆ.ಕೃಷ್ಣ ನಾಯ್ಕ, ಸಿಂಧೂ ಬಾಯಿ ಅವರನ್ನು ಸನ್ಮಾನಿಸಲಾಗುವುದು ಎಂದರು.
ಅಂದಿನ ಕಾರ್ಯಕ್ರಮದಲ್ಲಿ ಸರಿಗಮಪ ಖ್ಯಾತಿಯ ಹನುಮಂತ ಲಮಾಣಿ, ರಮೇಶ್ ಲಮಾಣಿ, ಶಹಪೂರ ವೆಂಕಟೇಶ್ ಅವರಿಂದ ರಸಮಂಜರಿ ಕೂಡ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು, ಕಾರ್ಯಕ್ರಮಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಘದ ಅಧ್ಯಕ್ಷ- 9448085958 ಹಾಗೂ ಕಾರ್ಯದರ್ಶಿ- 9741790338 ಅವರ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ಪಡೆಯಲು ಮನವಿ ಮಾಡಿದರು.ಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ರುದ್ರಾನಾಯ್ಕ, ಕಾರ್ಯದರ್ಶಿ ಕೃಷ್ಣನಾಯ್ಕ, ಉಪಾಧ್ಯಕ್ಷ ಧನರಾಜ್ ನಾಯ್ಕ, ಶಂಕರ ನಾಯ್ಕ, ಚೇತನ್ ಕುಮಾರ್, ಪ್ರಸನ್ನ, ವಿಠಲ ನಾಯ್ಕ, ಜಿಲ್ಲಾ ಸಂಘದ ಉಪಾಧ್ಯಕ್ಷ ಈಶ್ವರ ನಾಯ್ಕ, ಸಮಾಜದ ಅನೇಕ ಗಣ್ಯರು ಇದ್ದರು.
- - --6ಎಚ್.ಎಲ್.ಐ2:
ಹೊನ್ನಾಳಿ ತಾಲೂಕಿನ ಬಂಜಾರ (ಲಮಾಣಿ) ಸೇವಾ ಸಂಘದ ಕಾರ್ಯಕ್ರಮ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷ ರವಿ ನಾಯ್ಕ ಮಾತನಾಡಿದರು.